ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದಾಬಾದ್ ಸ್ಫೋಟ ಸಿಮಿ ಉಗ್ರನ ಬಂಧನ

By Staff
|
Google Oneindia Kannada News

ಅಹಮದಾಬಾದ್, ಜು. 28 : ಶನಿವಾರ(ಜು.26) ನಗರದಲ್ಲಿ ಉಗ್ರರು ನಡೆಸಿದ ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಭಾನುವಾರ ತಡರಾತ್ರಿ ಸಿಮಿ ಸಂಘಟನೆಗೆ ಸೇರಿದ ಉಗ್ರನನ್ನು ನಗರದ ದಾನಿ ಲಂಬಾ ಪ್ರದೇಶದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಸಿಮಿ ಉಗ್ರರನ್ನು ಅಬ್ಧುಲ್ ಹಲೀಮ್ ಎನ್ನಲಾಗಿದ್ದು, ಸೋಮವಾರ ಬೆಳಗ್ಗೆ ನಗರದ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಬ್ಧುಲ್ ಹಲೀಮ್ ಅಹಲ್-ಈ-ಹದೀಸ್ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಕಳೆದ ಶನಿವಾರ ರಾಜ್ಯದ ವಿವಿಧೆಡೆ 17 ಕಡೆ ಬಾಂಬ್ ಸ್ಫೋಟಗೊಳಿಸಲಾಗಿತ್ತು. ಅದರಲ್ಲಿ 45 ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಭಾನುವಾರ ಕೆಲ ಮಾಧ್ಯಮಗಳ ಮೂಲಕ ಬೆಂಗಳೂರು ಮತ್ತು ಗುಜರಾತಿನಲ್ಲಿ ನಡೆದ ಸ್ಫೋಟವನ್ನು ಮಾಡಿರುವುದಾಗಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಘೋಷಿಸಿತ್ತು. ಕಳೆದ ಮೇ ತಿಂಗಳಲ್ಲಿ ನಡೆದ ಜೈಪುರ ಸ್ಫೋಟವನ್ನು ನಾವೇ ಮಾಡಿರುವುದಾಗಿ ಈ ಮೇಲೆ ಮೂಲಕ ಇದೇ ಸಂಘಟನೆ ಹೇಳಿಕೊಂಡಿತ್ತು. ಈ ಸಂಘಟನೆ ಹಿಂದೆ ಸಿಮಿ ಸಂಘಟನೆ ಕೈವಾಡವಿರುವುದು ಸಾಬೀತಾಗಿದ್ದು, ಉಗ್ರರ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಈ ಮೇಲ್ ಮೂಲವನ್ನು ಪತ್ತೆಹಚ್ಚುವಲ್ಲಿ ಪ್ರಯತ್ನ ನಡೆಸುತ್ತಿದ್ದು, ಸ್ಪಷ್ಟವಾಗಿ ಎಲ್ಲಿಂದ ಈ ಮೇಲ್ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ.

ಈ ಮಧ್ಯೆ ಕೇಂದ್ರ ಸರ್ಕಾರ ಉಗ್ರರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರದಾದ್ಯಂತ ಭಾರಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಕೇರಳದಲ್ಲಿ ಸ್ಫೋಟಗೊಳ್ಳುವ ಉಗ್ರ ಬೆದರಿಕೆಯ ಹಿನ್ನಲೆಯಲ್ಲಿ ಕೇರಳ, ತಮಿಳುನಾಡು ಮತ್ತು ಕೊಲ್ಕತ್ತಾದಲ್ಲಿ ಭಾರಿ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಸರಣಿ ಸ್ಫೋಟ :ರಾಷ್ಟ್ರದಾದ್ಯಂತ ಭಾರಿ ಕಣ್ಗಾವಲು
ತಮಿಳುನಾಡಿನಲ್ಲಿ ಶಂಕಿತ ಉಗ್ರನ ಬಂಧನ
ಅಹಮದಾಬಾದನಲ್ಲಿ ಜೀವಂತ ಬಾಂಬ್ ಪತ್ತೆ, ನಿಷ್ಕ್ರಿಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X