ಶಂಕಿತ ಉಗ್ರ ಅಬ್ದುಲ್ ಹಲೀಂ ಜತೆ ತೀವ್ರ ವಿಚಾರಣೆ
ಅಹಮದಾಬಾದ್, ಜು. 28 : ನಿಷೇಧಿತ ಸಿಮಿ ಸಂಘಟನೆಯ ಶಂಕಿತ ಉಗ್ರ ಅಬ್ದುಲ್ ಹಲೀಂನನ್ನು ಬಂಧಿಸಿದ ಬೆನ್ನಲ್ಲೇ ಇನ್ನೊಬ್ಬ ಶಂಕಿತ ಉಗ್ರ ಜುಲ್ಫೀಕರ್ ಎಂಬುವವನನ್ನು ಬಂಧಿಸಿರುವ ಅಪರಾಧಿ ದಳದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ನಗರದಲ್ಲಿ ಕಳೆದ ಶನಿವಾರ ನಡೆದ ಭೀಕರ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾದ ಜುಲ್ಫೀಕರ್ ನನ್ನು ಹಿರಿಯ ಅಧಿಕಾರಿ ತಂಡ ವಶಕ್ಕೆ ತಗೆದುಕೊಂಡು ವಿಚಾರಣೆ ನಡೆಸಿದೆ.
ನಿಷೇಧಿತ ಸಿಮಿ ಸಂಘಟನೆಯ ಸದಸ್ಯ ಅಬ್ದುಲ್ ಹಲೀಂ ಬಂಧನದ ಬೆನ್ನಲ್ಲೇ ಜುಲ್ಫೀಕರ್ ನನ್ನು ಪೊಲೀಸರು ವಶಪಡಿಸಿಕೊಂಡಿರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಬಯಲಿಗೆ ಬರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಮಿ ಸಂಘಟನೆಯ ಕೈವಾಡ ಇರುವುದು ಸ್ಪಷ್ಟವಾಗಿದ್ದು, ಕರ್ನಾಟಕ ಮತ್ತು ಗುಜರಾತಿನಲ್ಲಿ ನಡೆದ ಸ್ಫೋಟ ಸಿಮಿ ಸಂಘಟನೆಯ ಮೂಲಕವೇ ಮಾಡಲಾಗಿದೆ. ಅದರ ಜತೆಗೆ ಇಂಡಿಯನ್ ಮುಜಾಹಿದ್ದೀನ್ ಎಂಬ ಇನ್ನೊಂದು ಸಂಘಟನೆ ಸದಸ್ಯರೂ ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ ಗುಜರಾತನ ರಾಜ್ಯದ ಅಪರಾಧಿ ವಿಭಾಗದ ವಿಶೇಷ ತನಿಖಾ ಪಡೆ ಮಧ್ಯಪ್ರದೇಶ ಮತ್ತು ರಾಜಸ್ತಾನಕ್ಕೆ ತೆರಳಿದೆ. ಜುಲ್ಫೀಕರ್ ಮತ್ತು ಅಬ್ದುಲ್ ಹಲೀಂ ವಿಚಾರಣೆ ನಂತರ ಪೊಲೀಸರು ಈ ನಿರ್ಣಾಯಕ್ಕೆ ಬಂದಿದ್ದು, ಇಷ್ಟರಲ್ಲೇ ಮತ್ತಷ್ಟು ಮಹತ್ವದ ಮಾಹಿತಿಗಳು ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಾಳೆ ಇಲ್ಲವೇ ನಾಡಿದ್ದು ಸ್ಫೋಟಕ್ಕೆ ಸಂಬಂಧಿಸಿದ ಆರೋಪಿಗಳ ಭಾವಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)
ಅಹಮದಾಬಾದ್ ಸ್ಫೋಟ ಸಿಮಿ ಉಗ್ರನ ಬಂಧನ
ಸರಣಿ ಸ್ಫೋಟ :ರಾಷ್ಟ್ರದಾದ್ಯಂತ ಭಾರಿ ಕಣ್ಗಾವಲು
ತಮಿಳುನಾಡಿನಲ್ಲಿ ಶಂಕಿತ ಉಗ್ರನ ಬಂಧನ


Click it and Unblock the Notifications
