ಆಯುರ್ವೇದಿಕ್ ಔಷಧಿಗಳ ಪ್ರಯೋಜನಕ್ಕೆ ಮೇಳ

ಕೊಚ್ಚಿ, ಜು. 23 : ಆರ್ಯ ವೈದ್ಯ ಪಾರ್ಮಸಿ ಸಂಸ್ಥಾಪಕ ಪಿ.ವಿ.ರಾಮ ವಾರಿಯರ್ ಅವರ ಶತದಿನೋತ್ಸವದ ಅಂಗವಾಗಿ ಆ.21 ರಿಂದ ನಾಲ್ಕು ದಿನಗಳ ಕಾಲ ಆಯುರ್ವೇದಿಕ್ ಎಕ್ಸ್ ಪೋ-2008(ಆರೋಗ್ಯ-2008) ಮೇಳವನ್ನು ಆಯೋಜಿಸಲಾಗಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಯ ವೈದ್ಯ ಪಾರ್ಮಸಿ ನಿರ್ದೇಶಕ ಕೆ.ಜಿ.ರವೀಂದ್ರನ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದ್ದು, ದೇಶದ ವಿದೇಶಗಳಿಂದ ಸುಮಾರು 2 ಸಾವಿರಕ್ಕಿಂತ ಅಧಿಕ ಜನ ಗೌರವಾನ್ವಿತ ವ್ಯಕ್ತಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಸಮಾವೇಶದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಭಾಷಣಗಳು ನಡೆಯಲಿವೆ ಎಂದ ಅವರು, ಆಯುರ್ವೇದಿಕ್ ಔಷಧಿಗಳಿಂದ ಆಗುವ ಪ್ರಯೋಜನಗಳನ್ನು ವಿವರಿಸಲಿದ್ದಾರೆ.

ಮೇಳದಲ್ಲಿ ವಿವಿಧ ಔಷಧ ತಯಾರಿಕ ಕಂಪನಿಗಳು, ಆಯುರ್ವೇದಿಕ್ ಕಾಲೇಜುಗಳು, ತಜ್ಞರು, ಪಂಚಕರ್ಮ ಕೇಂದ್ರಗಳು, ಸಂಶೋಧನಾ ಕೇಂದ್ರಗಳು, ಸರ್ಕಾರೇತರ ಸಂಸ್ಥೆಗಳು, ಆಹಾರ ಪದಾರ್ಥ ತಯಾರಿಸುವ ಕೈಗಾರಿಕೆಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಮೇಳದಲ್ಲಿ ಆಯುರ್ವೇದಿಕ್ ಔಷಧಿಗಳು ಪ್ರಯೋಜನಗಳನ್ನು ಜನರಿಗೆ ತಿಳಿಸುವುದರ ಜತೆಗೆ ಅವುಗಳ ಮಾರಾಟವನ್ನು ಮಾಡಲಾಗುವುದು ಎಂದು ರವೀಂದ್ರನ್ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+