ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಹೀಗೊಂದು ಸಹೃದಯಿಗಳ ಸಮಾವೇಶ

By Staff
|
Google Oneindia Kannada News

nagaraj navundaಬೆಂಗಳೂರು, ಜು. 18: ಬ್ಲಾಗ್ ಲೋಕದ ಮಿತ್ರರನ್ನು ಒಂದೆಡೆ ಸೇರಿಸುವುದು ಇತ್ತೀಚೆಗೆ ಬೆಳೆದು ಬಂದ ನಡವಳಿಕೆ. ಆದರೆ ಇದೇ ರೀತಿ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಂಘಟನೆಗಳ ಸಮಾಗಮ ಎಂದಾದರೂ ಆದ್ದದ್ದು ಉಂಟಾ? ಎಂದು ಹುಡುಕಿದಾಗ ಇಂದಿನ ಫಾಸ್ಟ್ ಯುಗದಲ್ಲಿ ಅನಾದಿಕಾಲದ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತಾ, ಸಮಾಜಕ್ಕೆ ಅರಿವನ್ನು ತುಂಬುವ ಸಂಘಟನೆಗಳನ್ನು ಒಂದೆಡೆ ಸೇರಿಸುವ ಉಭಯ ಕುಶಲೋಪರಿ ಸಾಂಪ್ರತ ' ಸಹೃದಯರ ಸಮಾಗಮ ' ನಡೆಯುತ್ತಿರುವುದು ಬೆಳಕಿಗೆ ಬರುತ್ತದೆ.

ಸಹೃದಯ ಸಮಾಗಮ ಎಂಬ ಹೆಸರಿನಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ನಗರದ ವಿವಿಧೆಡೆ ಪ್ರಚಾರಕ್ಕೆ ಬಾರದೆ ತಮ್ಮದೇ ಆದ ರೀತಿಯಲ್ಲಿ ಸಮಾಜದ ಹಿತವನ್ನು ಬಯಸಿ, ದುಡಿಯುತ್ತಿರುವ ಪ್ರಾಮಾಣಿಕರನ್ನು ಒಂದೆಡೆ ಸೇರಿಸಿ, ವಿಚಾರ ವಿನಿಮಯ ಕಾರ್ಯಕ್ರಮವನ್ನು ಅನುಭವ ಶಾಲೆಯ ರುವಾರಿ ನಾಗರಾಜ್ ನಾವುಂದ ಅವರು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ

ನಗರದ ವಿವಿಧ ಭಾಗದಲ್ಲಿ ಇರುವ ಸಂಘಟನೆಗಳಿಗೆ ಒಂದು ವೇದಿಕೆ ಕಲ್ಪಿಸಿ, ಸಮಾಜಕ್ಕೆ ಪೂರಕವಾದ ಸೃಜನಶೀಲ ಯೋಜನೆಗಳನ್ನು ಪರಸ್ಪರ ಹಂಚಿಕೊಂಡು ಸಹಕಾರಿ ತತ್ವದಲ್ಲಿ ಮುಂದೆ ಸಾಗಲು 'ಸಹೃದಯರ ಸಮಾಗಮ' ಎಂಬ ನೂತನ ಕಾರ್ಯಕ್ರಮವನ್ನು ವರ್ಷದಲ್ಲಿ ಮೂರ್ನಾಲ್ಕು ಬಾರಿ ಮಾಡುತ್ತ ಬರುತ್ತಿದ್ದಾರೆ. ಈ ಬಾರಿಯ ಕಾರ್ಯಕ್ರಮವನ್ನು ಇದೇ ಭಾನುವಾರದಂದು ನಗರದಲ್ಲಿ ಆಯೋಜಿಸಿದ್ದಾರೆ. ಪರಿವರ್ತನೆಯ ಪ್ರಯತ್ನದಲ್ಲಿ ಕಾಳಜಿ ಹೊತ್ತ ನಿಮ್ಮ ಸಂಘಟನೆಗಳನ್ನು ಪ್ರತಿನಿಧಿಸಲು ಒಂದು ಉತ್ತಮ ಅವಕಾಶ. ಸಮಾಜ ಸೇವೆ ಎಂಬುದಕ್ಕೆ ಬೇರೆಯದೇ ವ್ಯಾಖ್ಯಾನ ಬರೆಯ ಹೊರಟವರು ಒಮ್ಮೆ ಸಹೃದಯ ಸಮಾಗಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಉದ್ದೇಶ ಹಾಗೂ ಅಗತ್ಯಗಳನ್ನು ಮನಗಾಣಬಹುದು ಎಂದು ಸಂಘಟಕ ನಾಗರಾಜ್ ಅವರು ಹೇಳುತ್ತಾರೆ.

ಸಹೃದಯರು (ಆಸಕ್ತರು) ಈ ವಿವರಗಳನ್ನು ನೋಡಿ, ಪಾಲ್ಗೊಳ್ಳಬಹುದು

ಸ್ಥಳ: ಸುಚಿತ್ರಾ ಫಿಲಂಸೊಸೈಟಿ,
36, ಬಿ.ವಿ.ಕಾರಂತ ರಸ್ತೆ,
(9 ನೇ ಮುಖ್ಯರಸ್ತೆ),
ಬನಶಂಕರಿ 2 ನೇ ಹಂತ,
ಬೆಂಗಳೂರು-70

ದಿನಾಂಕ: 20/07/08, ಭಾನುವಾರ
ಸಮಯ: ಬೆಳಗ್ಗೆ 10 ಗಂಟೆ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 99450 03479 ಹಾಗೂ 98453 25732
ಇ ಮೇಲ್: [email protected]

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X