ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬಜೆಟ್ ಮೇಲೊಂದು ಕ್ಷ-ಕಿರಣ

By Staff
|
Google Oneindia Kannada News

*ಮೃತ್ಯುಂಜಯ ಕಲ್ಮಠ

Analysis of Karnataka budget 2008ಗುರುವಾರ ಭಾರತೀಯ ಜನತಾ ಪಕ್ಷ ಮಂಡಿಸಿದ ಮುಂಗಡ ಆಯವ್ಯಯಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ಚುನಾವಣೆಯಲ್ಲಿ ಈ ಬಜೆಟ್ ಉತ್ತಮ ಕೆಲಸ ಮಾಡಲಿದೆ. ಕಂತೆಕಂತೆ ಅನುದಾನ ಎಗ್ಗಿಲ್ಲದೆ ಘೋಷಣೆಯಾಗಿದೆ. ಈ ಎಲ್ಲ ಯೋಜನೆಗಳು, ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆಯೇ ಎನ್ನುವ ಪ್ರಶ್ನೆ ಕಾಡದೇ ಇರದು. ಇರಲಿ, ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ 2 ರು.ಗೆ ಕೆಜಿ ಅಕ್ಕಿ ನೀಡದೇ ಭಾರಿ ನಿರಾಶೆ ಮೂಡಿಸಲಾಗಿದೆ. ಈ ಮೂಲಕ ಧ್ವನಿ ಇಲ್ಲದ ದೀನರನ್ನು ಕೂಪಕ್ಕೆ ತಳ್ಳಿದ್ದಾರೆ ಎನ್ನುವ ಆರೋಪಗಳು ದಂಡಿದಂಡಿಯಾಗಿ ಕೇಳಿ ಬರತೊಡಗಿವೆ.

ಚುನಾವಣೆಗೂ ಪೂರ್ವದಲ್ಲಿ ಬಡತನ ರೇಖೆಗಿಂತ ಕೆಳಗಿರುವ ವರ್ಗದವರಿಗೆ ವಿಶೇಷ ಆದ್ಯತೆ ನೀಡುತ್ತೇವೆ. ಅವರ ಜೀವನ ಗುಣಮಟ್ಟ ಹೆಚ್ಚಿಸುತ್ತೇವೆ, ಇದಕ್ಕಾಗಿ ಬಿಪಿಎಲ್ ವರ್ಗಕ್ಕೆ 2 ಕೆಜಿ ಅಕ್ಕಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಅಲ್ಲದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಈಗಿರುವ 12 ಸಾವಿರ ರು.ಗಳ ಆದಾಯವಿರುವ ಗ್ರಾಮೀಣ ಪ್ರದೇಶದ ಜನರು ಮತ್ತು 17 ಸಾವಿರ ಆದಾಯವಿರುವ ನಗರ ಪ್ರದೇಶದ ಜನರನ್ನು ಬಿಪಿಎಲ್ ಎಂದು ಸರ್ಕಾರ ಗುರುತಿಸಿದೆ. ನಾವು ಅಧಿಕಾರಕ್ಕೆ ಬಂದಲ್ಲಿ ಇದರ ಮೊತ್ತವನ್ನು ದುಪ್ಪಟ್ಟು ಮಾಡುತ್ತೇವೆ ಅಂದರೆ, ಗ್ರಾಮೀಣ ಬಿಪಿಎಲ್ ಗಳಿಗೆ 30 ಮತ್ತು ನಗರ ಪ್ರದೇಶದ ಬಿಪಿಎಲ್ ಗಳ ಮೊತ್ತವನ್ನು 60 ಸಾವಿರಕ್ಕೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದರು. ಜತೆಗೆ 2 ರು.ಗೆ ಕೆಜಿ ಅಕ್ಕಿ ನೀಡುವುದಾಗಿ ಆಶ್ವಾಸನೆ ಬೇರೆ.

ಹಣದುಬ್ಬರದ ಹೊಡೆತದಿಂದ ಕಳಪೆ ಅಕ್ಕಿಯೂ 20 ರು.ಗೆ ಕೆಜಿ ಆಗಿರುವ ಈ ಸಂದರ್ಭದಲ್ಲಿ ಬಡ ಜನತೆ 2 ರು.ಗೆ ಅಕ್ಕಿ ನೀಡುವ ಘೋಷಣೆಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಆದರೆ ಸರ್ಕಾರ ಎಲ್ಲ ವರ್ಗಕ್ಕೂ ತುಪ್ಪ ನೀಡಿ ಬಡಪಾಯಿ ಮುಖಕ್ಕೆ ಸುಣ್ಣ ಬಡಿದಿದ್ದಾರೆ. ಸರ್ಕಾರಿ ನೌಕರರ ನಿವೃತ್ತಿ ಮೀತಿಯನ್ನು 58 ರಿಂದ 60ಕ್ಕೆ ಮಾಡುವ ದರ್ದಾದರೂ ಏನಿತ್ತು, ಭವ್ಯವಾದ ಸರ್ಕಾರಿ ನೌಕರಿಯ ಜತೆಗೆ ನಿವೃತ್ತಿ ವಯಸ್ಸು ಹೆಚ್ಚಿಸುವ ಉಡುಗೂರೆ ನೀಡಿದ್ದಾರೆ. ಕೇಳದೆಯೇ ನೀಡಿರುವ ಬೇಡಿಕೆ ಇದಾಗಿದ್ದು, ತುತ್ತಿಗಾಗಿ ಕಾಯುತ್ತಿದ್ದ ಈ ವಲಯಕ್ಕೂ ತುಸು ಹಂಚಿದ್ದರೆ ಉತ್ತಮವಾಗಿರುತ್ತಿತ್ತು.

ಸರ್ಕಾರ ಪಡಿತರ ಚೀಟಿಯ ಮೂಲಕ ಹಂಚುವ ಆಹಾರ ಧಾನ್ಯಗಳು ಕೂಡಾ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅದರ ಸೂಕ್ತ ತನಿಖೆ ಮಾಡಲಾಗುತ್ತಿದೆ ಎನ್ನುವ ಸರ್ಕಾರ ಅದನ್ನೂ ಸ್ಪಷ್ಚವಾಗಿ ಹೇಳಿಲ್ಲ. ಅದರ ಬಗ್ಗೆ ಚಕಾರವೆತ್ತದೆ ಯಡಿಯೂರಪ್ಪ 2008-09ರ ಸಾಲಿನ ಮುಂಗಡ ಪತ್ರ ದೇಶದಲ್ಲಿ ಮಾದರಿ ಮುಂಗಡಪತ್ರ ಎಂದು ಹೇಳುತ್ತಿದ್ದಾರೆ. ಸಮಾನತೆ ಇಲ್ಲದ ಬಜೆಟ್ ಇದು ಯಾವ ತರಹದ ಮಾದರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೇಂದ್ರ ಸರ್ಕಾರದ ವರದಿಯ ಪ್ರಕಾರ ದೇಶದಲ್ಲಿ ದಿನವೊಂದಕ್ಕೆ 30 ರು.ಗಳನ್ನು ಮಾತ್ರ ದುಡಿಯುವ ಜನರ ಸಂಖ್ಯೆ ಶೇ.77 ರಷ್ಟಿದೆ. ಬಿಪಿಎಲ್ ವರ್ಗಗಳನ್ನು ಗುರುತಿಸಿ ಅವರಿಗೆ ಸಮರ್ಪಕವಾಗಿ ಆಹಾರಧಾನ್ಯ ಒದಗಿಸುವುದು ರಾಜ್ಯ ಸರ್ಕಾರದ ಕೆಲಸ. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರತಿ ವರ್ಷ 750 ಕೋ.ರುಗಳ ಅನುದಾನವನ್ನು ನೀಡುತ್ತದೆ. ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟದ ಸೇರಿ ಎಂಟು ರಾಜ್ಯಗಳಿಗೆ ಬಡತನ ರೇಖೆಗಿಂತ ಕೆಳಗಿರುವವರ ಜೀವನ ಗುಣಮಟ್ಟ ಸುಧಾರಿಸಲು ಹೆಚ್ಚವರಿ ಧನಸಹಾಯವನ್ನೂ ಮಾಡಿದೆ. ಬಿಪಿಎಲ್ ಗಳಿಗೆ ಇಷ್ಟೆಲ್ಲಾ ಹಣ ಹರಿದು ಬರುತ್ತಿದ್ದರೂ ಸರ್ಕಾರ ಅವರ ಜೀವನ ಮಟ್ಟವನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಯಾಕೆ ಎನ್ನುವ ಪ್ರಶ್ನೆ ಕಾಡತ್ತದೆಯಲ್ಲವೇ ?

ಒಟ್ಟಿನಲ್ಲಿ ಯಡಿಯೂರಪ್ಪ ಅವರ ಬಜೆಟ್ ಬಡವರಿಗೆ ಸಂಜೀವಿನಿಯಾಗಲಿದೆ ಎಂದು ಎಣಿಸಲಾಗಿತ್ತು. ಉಳಿದವರಿಗೆ ಕಾಮಧೇನುವಾಗಿದೆ. ಧ್ವನಿ ಇಲ್ಲದ ಆ ವರ್ಗಕ್ಕೂ ಸಾಂತ್ವನದ ಘೋಷಣೆ ಬೇಕಿತ್ತು, ಬಡವನಿಗೆ ಮತ್ತೆ ಅನ್ಯಾಯವಾಗಿದೆ. ಹಣದುಬ್ಬರ ಮುಗಿಲು ಮುಟ್ಟುತ್ತಿದೆ. ಬಡವರ ಜೀವನ ತಳ ಮುಟ್ಟಿ ಬಹಳ ದಿನವಾಗಿದೆ.
ಜನ ವಿರೋಧಿ ಬಜೆಟ್ ಎಂದು ಪ್ರತಿಪಕ್ಷಗಳ ಟೀಕೆ
ಯಡಿಯೂರಪ್ಪ ಚೊಚ್ಚಲ ಬಜೆಟ್‌ನ ಪಕ್ಷಿನೋಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X