• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖೇಶ್ -ಮನಮೋಹನ್ ಸಿಂಗ್ ರಹಸ್ಯ ಭೇಟಿ!

By Staff
|

ನವದೆಹಲಿ, ಜು. 14 : ಯುಪಿಎ ಸರ್ಕಾರ ಬಿಕ್ಕಟ್ಟು ಎದುರಿಸುತ್ತಿರುವಸಂದರ್ಭದಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಸೋಮವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿದೆ.

ಕೇಂದ್ರದ ಯುಪಿಎ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷ ಮುಖಂಡ ಅಮರಸಿಂಗ್ ತೈಲ ವ್ಯವಹಾರ ತೊಡಗಿಸಿಕೊಂಡಿರುವವರ ಸೇವಾ ತೆರಿಗೆಯ ವಿವರವನ್ನು ಪಡೆಯಬೇಕು ಎಂದು ಯುಪಿಎ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದ್ದರಿಂದ ಮುಖೇಶ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಇದಕ್ಕೂ ಮುನ್ನ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಖೇಶ್ ಹಲವು ಹಿರಿಯ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಮುಖೇಶ್ ಅಂಬಾನಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಕುರಿತು ರಿಲಯನ್ಸ್ ಅಧಿಕಾರಿಗಳು ನಿರಾಕರಿಸುತ್ತಾರೆ. ಇದು ಬರೀ ವದಂತಿ ಎಂದಷ್ಟೇ ಇದನ್ನು ಅಲ್ಲಗಳೆದಿದ್ದಾರೆ.

ಆರ್ಐಎಲ್ಕಂಪನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಅನಿಲ್ ಮತ್ತು ಮುಖೇಶ್ ನಡುವೆ ವೈಮನಸ್ಯ ಹುಟ್ಟಿಕೊಂಡಿತ್ತು. ಮುಖೇಶ್ ಅವರ ಸಹೋದರ ಅನಿಲ್ ಅವರ ಸ್ನೇಹಿತರಾಗಿರುವ ಅಮರಸಿಂಗ್ ಕಳೆದ ಕೆಲ ದಿನಗಳ ಹಿಂದೆ ತೈಲ ಕಂಪನಿಗಳ ಸೇವಾ ತೆರಿಗೆ ಮಾಹಿತಿಯನ್ನು ಪಡೆಯಬೇಕು ಎಂದು ಯುಪಿಎ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಸಹೋದರರ ನಡುವೆ ಉದ್ಭವಿಸಿದ್ದ ಸಮಸ್ಯೆಯನ್ನು ಪ್ರಧಾನಿಗಳು ಪರಿಹಾರ ಹುಡುಕಬೇಕು ಎಂದು ಈ ಹಿಂದೆ ಒತ್ತಾಯಿಸಲಾಗಿತ್ತು. ಇದೀಗ ಸಮಾಜವಾದಿ ಪಕ್ಷ ಯುಪಿಎ ಸರ್ಕಾರದ ಅಂಗಪಕ್ಷವಾಗಿದ್ದು, ಈ ಬೆಳವಣಿಗೆಯ ಹಿನ್ನಲೆಯಲ್ಲಿ ಮುಖೇಶ್ ಪ್ರಧಾನಮಂತ್ರಿಗಳ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.

(ಏಜೆನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more