ಐಪಿಎಲ್ ಟೂರ್ನಿಯಲ್ಲಿ ಅಸಿಫ್ ಉದ್ದೀಪನ ಮದ್ದು ಸೇವನೆ

Pakistan fast bowler Mohammad Asifನವದೆಹಲಿ, ಜು.14 : ಪಾಕಿಸ್ತಾನದ ವಿವಾದಾತ್ಮಕ ಕ್ರಿಕೆಟ್ ಆಟಗಾರ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಉದ್ದೀಪನ ಮದ್ದು ಸೇವಿಸಿದ್ದರೆಂಬ ವಿಷಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಬಹಿರಂಗಪಡಿಸಿದೆ.

ಈ ಮೊದಲು ಡಿಎಲ್ಎಫ್ ಐಪಿಎಲ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಸಮಯದಲ್ಲಿ ಏಷ್ಯಾದ ವೇಗದ ಬೌಲರೊಬ್ಬರು ದೇಹ ಸಾಮರ್ಥ್ಯ ಹೆಚ್ಚಿಸುವ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆಯೆಂದು ಐಪಿಎಲ್ ಕಮಿಷನರ್ ಲಲಿತ್ ಮೋದಿ ಹೇಳಿದ್ದರು. ಆದರೆ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಈ ಆರೋಪ ಪಾಕಿಸ್ತಾನದ ವಿವಾದಾತ್ಮಕ ಬೌಲರ್‌ಗಳಾದ ಶೋಯಾಬ್ ಅಖ್ತರ್ ಮತ್ತು ಮೊಹಮ್ಮದ್ ಅಸಿಫ್ ಮೇಲೆ ತೋರುಬೆರಳು ನೆಡುವಂತೆ ಮಾಡಿತ್ತು.

ಶೋಯಾಬ್ ಅಖ್ತರ್ ಅವರನ್ನು ಪರೀಕ್ಷೆಗೆ ಗುರಿಪಡಿಸದಿದ್ದರಿಂದ ಅಸಿಫ್ ಮೇಲೆ ಆರೋಪದ ಕರಿನೆರಳು ಬಿದ್ದಿತ್ತು. ಈ ವಿಷಯ ಹೊರಬೀಳುತ್ತಿದ್ದಂತೆಯೇ, ಯಾರ ಹೆಸರನ್ನು ಬಹಿರಂಗಪಡಿಸದಿದ್ದರೂ ಅಸಿಫ್ ತಾವು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿ ಎಲ್ಲರ ಗಮನ ತಮ್ಮ ಮೇಲೆಯೇ ಬೀಳುವಂತೆ ಮಾಡಿದ್ದರು. ಈಗ ಬಿಸಿಸಿಐ ಅಸಿಫ್ ಹೆಸರನ್ನು ಬಹಿರಂಗಪಡಿಸಿ ಎಲ್ಲ ಊಹಾಪೋಹಗಳಿಗೆ ತೆರೆಎಳೆದಿದೆ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಂದಿಗ್ಧಕ್ಕೆ ಸಿಲುಕಿಸಿದೆ.

ವಿಶ್ವ ಉದ್ದೀಪನಾ ಮದ್ದು ವಿರೋಧಿ ಸಂಸ್ಥೆ ಐಪಿಎಲ್ ಪಂದ್ಯಾವಳಿಯ ವೇಳೆ ಕೆಲ ಆಟಗಾರರ ರಕ್ತ ಸ್ಯಾಂಪಲ್ ಪಡೆದು ಉದ್ದೀಪನ ಪರೀಕ್ಷೆ ನಡೆಸಿತ್ತು. ಐಪಿಎಲ್ ಪಂದ್ಯಾವಳಿಯ ನಂತರವೂ ದೆಹಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಅಸಿಫ್ ದುಬೈನಲ್ಲಿ ನಿಷೇಧಿತ ವಸ್ತು ಹೊಂದಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದರು. ಆದರೆ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮಧ್ಯಸ್ಥಿಕೆಯಿಂದ ಯಾವುದೇ ಶಿಕ್ಷೆಯಿಲ್ಲದೆ ಪಾರಾಗಿದ್ದರು. ಹೊಸ ವಿವಾದ ಕುರಿತಂತೆ, ಈ ಘಟನೆ ಐಪಿಎಲ್‌ನ ಆಂತರಿಕ ವಿಷಯವಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಕೈತೊಳೆದುಕೊಂಡಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+