ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ-3ಜಿ ಐಫೋನ್

By Staff
|
Google Oneindia Kannada News

Apple iphoneವಾಷಿಂಗ್ಟನ್, ಜು.14: ಹೊಸ ತಲೆಮಾರಿನ ಮೊಬೈಲ್ ಫೋನ್ ಎಂದೇ ಬಿಂಬಿತವಾಗಿರುವ 3ಜಿ ಐ ಫೋನ್ ಶುಕ್ರವಾರ (ಜು.11) ಪ್ರಪಂಚದಾದ್ಯಂತ ಮಾರುಕಟ್ಟೆಗೆ ಬಿಡುಗಡೆಯಾಯಿತು. ಗ್ರಾಹಕರು ನಾ ಮುಂದು ತಾ ಮುಂದು ಎಂದು ಮುಂಜಾನೆಯಿಂದಲೇ ಅಮೆರಿಕದ ಆಪೆಲ್ ಕಂಪನಿಯ ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಅದರಲ್ಲೂ ಅನಿವಾಸಿ ಭಾರತೀಯರಂತೂ ಐಫೋನ್ ಮೋಹಕ್ಕೆ ಹುಚ್ಚರಾಗಿ ಮುಂಗಡ ಹಣ ಕೊಟ್ಟು ಕಾದಿರಿಸಿದ್ದರು.

ಏನಿದು ಐ ಫೋನ್?
ಅಂತರ್ಜಾಲ ಸೌಲಭ್ಯವಿರುವ ಮಲ್ಟಿಮೀಡಿಯಾ ಮೊಬೈಲ್ ಫೋನನ್ನು ಐಫೋನ್ ಎನ್ನುತ್ತಾರೆ. ಆದರೆ ಆಫೆಲ್ ಕಂಪನಿ ಬಿಡುಗಡೆ ಮಾಡಿರುವ 3ಜಿ ಐಫೋನ್‌ನಲ್ಲಿ ಇನ್ನೂ ಅಧಿಕ ಸೌಲಭ್ಯಗಳಿವೆ. ಟಚ್ ಸ್ಕ್ರೀನ್ ಜೊತೆಗೆ ಕೀಬೋರ್ಡ್ ಹಾಗೂ ಬಟನ್‌ಗಳ ಸೌಲಭ್ಯವೂ ಇದೆ. ಇ-ಮೇಲ್‌, ಅಂತರ್ಜಾಲ ಸೌಲಭ್ಯ ಹಾಗೂ ಟೆಕ್ಸ್ಟ್ ಮೆಸೇಜ್, ಕ್ಯಾಮೆರಾ ಸೌಲಭ್ಯಗಳು ಇವೆ. ಒಟ್ಟಿನಲ್ಲಿ ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದ ಕಂಪ್ಯೂಟರ್ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ.

2007ರಲ್ಲಿ ಬಿಡುಗಡೆಯಾದ ಐ ಫೋನ್‌ಗಿಂತಲೂ ಈ ಹೊಸ ತಲೆಮಾರಿನ ಐಫೋನ್‌ನಲ್ಲಿ ಅಂತರ್ಜಾಲ ಪುಟಗಳನ್ನು ವೇಗವಾಗಿ ವೀಕ್ಷಿಸಬಹುದು. 20ಕ್ಕೂ ಅಧಿಕ ದೇಶಗಳಲ್ಲಿ ಆಪೆಲ್ ಕಂಪನಿ ಈ ಹೊಸ ಐ ಫೋನನ್ನು ಬಿಡುಗಡೆ ಮಾಡಿತು. 2008ರ ವರ್ಷಾಂತ್ಯಕ್ಕೆ 10 ದಶಲಕ್ಷ ಐಫೋನ್‌ಗಳನ್ನು ಮಾರಾಟ ಮಾಡುವ ಉದ್ದೇಶ ಕಂಪನಿಗಿದೆ. ಮುಂಗಡ ಹಣಕೊಟ್ಟು ಕಾದಿರಿಸಿ 300 ಡಾಲರ್‌ಗೆ ಐಫೋನ್ ತೆಗೆದುಕೊಂಡ ಅನಿವಾಸಿ ಭಾರತೀಯ ರಮೇಶ್ ಕುಂದಾಪುರ ಅವರ ಮುಖದಲ್ಲಿ ಏನೋ ಖುಷಿ ಎದ್ದು ಕಾಣುತ್ತಿತ್ತು. ಏರ್‌ಟೆಲ್ ಹಾಗೂ ಆಪೆಲ್ ಕಂಪನಿಗಳು ಜಂಟಿಯಾಗಿ 3ಜಿ ಐಫೋನನ್ನು ಭಾರತದ ಮಾರುಕಟ್ಟೆಗೆ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X