'ಹಂಪಿ ಉಳಿಸಿ' ಬಂದ್ ಬಹುತೇಕ ಶಾಂತಿಯುತ

ಹಂಪಿ, ಜು. 14 : ಐತಿಹಾಸಿಕ ಸ್ಮಾರಕಗಳನ್ನು ಭಗ್ನಗೊಳಿಸುತ್ತಿರುವ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಹಂಪಿ ಆಂದೋಲನ ಸಮಿತಿ ಸೋಮವಾರ ಕರೆ ನೀಡಿದ್ದ ಹಂಪಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಜಯನಗರ ಸಾಮ್ರಾಜ್ಯದ ಕುರುಹಾದ ಹಂಪಿ ಐತಿಹಾಸಿಕ ವಿಗ್ರಹಗಳ ಮೇಲೆ ದುಷ್ಕರ್ಮಿಗಳ ಆಕ್ರಮಣ ಮುಂದುವರೆದಿದೆ. ಇತ್ತೀಚೆಗೆ ಲಕ್ಷ್ಮಿನಾರಾಯಣ, ಮಹಿಷಾಸುರ ಮರ್ಧಿನಿ, ಕೋದಂಡರಾಮ ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ. ಈ ಕೃತ್ಯ ಅನೇಕ ದಿನಗಳಿಂದ ನಡೆದುಕೊಂಡು ಬರುತ್ತಿದ್ದು, ನಿಧಿಯ ಆಸೆಗಾಗಿ ಕಿಡಿಗೇಡಿಗಳು ಈ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಅನೇಕ ಸಲ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರದ ಕಣ್ಣು ತೆರಸಲು ಈ ಕೃತ್ಯ ಖಂಡಿಸಿ ಹಂಪಿ ಉಳಿಸಿ ಆಂದೋಲನ ಸಮಿತಿ ಕರೆಕೊಟ್ಟಿದ್ದ ಹಂಪಿ ಉಳಿಸಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಜೀವನ ಸಹಜ ಸ್ಥಿತಿಯಲ್ಲಿದ್ದು, ಅಂಗಡಿ ಮುಂಗಟ್ಟುಗಳು ಯಥಾರೀತಿಯಲ್ಲಿ ಕಾರ್ಯ ನಿರ್ವಹಿಸತೊಡಗಿವೆ. ಬಸ್ಸು ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ಬಂದ್ ಹಿನ್ನಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಗ್ರೀನ್ ಪೊಲೀಸ್ ಪಡೆಯನ್ನು ಸ್ಥಾಪಿಸಲಾಗುವುದು ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದರು. ಗ್ರೀನ್ ಪೊಲೀಸ್ ಕೆಲಸ ಮಾಡುತ್ತಿದ್ದರೂ ಮೂರ್ತಿ ಭಗ್ನದಂಥ ಕೃತ್ಯಗಳು ನಿರಾಂತಕವಾಗಿ ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯವಾಗಿ ಐತಿಹಾಸಿಕ ತಾಣವಾಗಿರುವ ಹಂಪಿಯಲ್ಲಿ ನಿಧಿ ಇದೆ ಎನ್ನುವುದು ಕೆಲವರ ಮೂಢನಂಬಿಕೆ. ಇದಕ್ಕಾಗಿ ಅಮೂಲ್ಯ ಮೂರ್ತಿಗಳನ್ನು ಭಗ್ನಗೊಸಲು ಹಿಂದೆ ಮುಂದೆ ನೋಡುತ್ತಿಲ್ಲ. ಇದೇ ರೀತಿ ಮುಂದುವರೆದಲ್ಲಿ ಹಂಪಿಯಲ್ಲಿರುವ ಸ್ಮಾರಕಗಳು ನಶಿಸಿ ಹೋಗುವ ಆತಂಕವಿದೆ. ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವ ಹಂಪಿಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಬಳ್ಳಾರಿ ಜಿಲ್ಲಾಡಳಿತ ವಿಫಲವಾಗಿದೆ. ಬಳ್ಳಾರಿಯವರೇ ಆದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಈ ಬಗ್ಗೆ ಗಮನ ಹರಿಸಿಬೇಕು. ಅಮೂಲ್ಯ ಸ್ಮಾರಕಗಳನ್ನು ಸಂರಕ್ಷಿಸಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಕಳೆದ ಶನಿವಾರ ಹಂಪಿಯ ಲಕ್ಷ್ಮಿನಾರಾಯಣ ಮತ್ತು ಕೋದಂಡರಾಮ ವಿಗ್ರಹವನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿತ್ತು. ವಿಷಯ ತಿಳಿಯುತ್ತಿದ್ದೆಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠ ಸೀಮಂತ್ ಕುಮಾರ್ ಸಿಂಗ್, ಈ ಬಗ್ಗೆ ಪ್ರಾಚ್ಯ ವಸ್ತು ಇಲಾಖೆಗೆ ತಿಳಿಸಲಾಗಿದೆ. ಜತೆಗೆ ವಿಗ್ರಹ ರಕ್ಷಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+