• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೆನೆಜುವೆಲಾ ಸುಂದರಿಗೆ ಭುವನ ಸುಂದರಿ ಪಟ್ಟ

By Staff
|

dayana mendoza

ನಾಟ್ರಾಂಗ್(ವಿಯಟ್ನಾಂ), ಜು.14 : ವೆನೆಜುವೆಲ್‌ನ ಸುಂದರಿ ಡಯಾನಾ ಮೆಂಡೋಜಾ 2008ರ ಭುವನಸುಂದರಿ(ಮಿಸ್ ಯುನಿವರ್ಸ್) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಯಟ್ನಾಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುಮಾರು 80 ಕ್ಕೂ ಹೆಚ್ಚು ಸುಂದರಿಯನ್ನು ಹಿಂದಿಕ್ಕಿ ಪ್ರತಿಷ್ಠಿತ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ.

ಭುವನಸುಂದರಿ ಕಿರೀಟಕ್ಕಾಗಿ ಅಮೆರಿಕ, ಕೊಲಂಬಿಯಾ, ರಷ್ಯಾ, ಆಫ್ರಿಕ, ಭಾರತ ಸೇರಿದಂತೆ ಸುಮಾರು 80 ಕ್ಕೂ ಅಧಿಕ ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 22 ಹರೆಯದ ನೀಲಿ ಕಂಗಳ ಬೆಡಗಿ ಡಯಾನಾ ಮೆಂಡೋಜಾ ಮಿಸ್ ಯುನಿವರ್ಸ್ ಪ್ರಶಸ್ತಿಗೆ ಆಯ್ಕೆಯಾಗುತ್ತಿದಂತೆ ಅವರ ಕಣ್ಣಿಂದ ಆನಂದ ಬಾಷ್ಪಗಳು ಉದುರಿದವು. ಆನಂದ ತಡೆಯಲಾರದ ಆಕೆ ವೇದಿಕೆಯಲ್ಲಿ ಕಣ್ಣೀರು ಹರಿಸಿದರು.

ಪ್ರಶಸ್ತಿ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ. ನನಗೆ ನಿಜಕ್ಕೂ ನಂಬಲು ಆಗುತ್ತಿಲ್ಲ. ಅನೇಕ ದಿನಗಳ ಕನಸು ಇಂದು ನನಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಹಿಂಸೆ ಎಲ್ಲದಕ್ಕೂ ಉತ್ತರವಲ್ಲ. ಹಿಂಸೆ ವಿರುದ್ಧ ಜನಜಾಗೃತಿ ಮೂಡಿಸುವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಇಂದು ಸಂಜೆ ನಡೆಯುವ ವರ್ಣರಂಜಿತ ಕಾರ್ಯಕ್ರಮವೊಂದರಲ್ಲಿ 57ನೇ ಮಿಸ್ ಯೂನಿವರ್ಸ್ ಉಡುಗೆಯನ್ನು ಡಯಾನಾ ಧರಿಸಲಿದ್ದಾರೆ.

2008ರ ಪೆಂಟಾಲೋಮ್ ಪ್ರಶಸ್ತಿ ಪಡೆದಿದ್ದ ಭಾರತೀಯ ಸುಂದರಿ ಸಿಮ್ರಾನ್ ಕೌರ್ ಮುಂಡಿ ಪ್ರಶಸ್ತಿ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕೋಟ್ಯಂತರ ಜನರ ಹಾಟ್ ಫೆವರಿಟ್ ಆಗಿದ್ದ ಸಿಮ್ರಾನ್ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿರುವುದು ಭಾರತೀಯರಿಗೆ ಬೇಸರ ಮೂಡಿಸಿದೆ.

(ಏಜೆನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more