'ನೈಸ್ 'ಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ
ನವದೆಹಲಿ, ಜು.9:ಅಶೋಕ್ ಖೇಣಿ ನೇತೃತ್ವದ ನೈಸ್ ಕಾರಿಡಾರ್ ಯೋಜನೆಗೆ ಭೂಮಿ ನೀಡಿಕೆ ಬಗ್ಗೆ ಚುನಾವಣಾ ಆಯೋಗ ನೀಡಿದ ತಡೆಯನ್ನು ಪ್ರಶ್ನಿಸಿ ಖೇಣಿ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇದು ನನ್ನೊಬ್ಬನ ಗೆಲುವಲ್ಲ, ಇಡೀ ರಾಜ್ಯಕ್ಕೆ ಸಿಕ್ಕ ಗೆಲುವು ಎಂದು ಅಶೋಕ್ ಖೇಣಿ ಪ್ರತಿಕ್ರಿಯಿಸಿದ್ದಾರೆ.
ನೈಸ್ ಸಂಸ್ಥೆಗೆ ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ(ಬಿಎಂಐಸಿ)ಯನ್ನು ಮುಂದುವರೆಸಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನೀಡಿದ್ದ ಆದೇಶಕ್ಕೆ ಮಂಗಳವಾರ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇಂದು ಸುಪ್ರೀಂ ಕೋರ್ಟ್ ನಲ್ಲಿ ಕೂಡ ನೈಸ್ ಯೋಜನೆಯ ಪರವಾಗಿ ಆದೇಶ ಹೊರಬಿದ್ದಿದೆ.
ವಿಳಂಬ ಕಾರಣ?
ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಲು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ನೈಸ್ ಯೋಜನೆ ಬೇಗನೆ ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿಗೆ ರಾಜ್ಯಪಾಲರು ಆದೇಶ ನೀಡಿದ್ದರು. ಆದರೆ ಚುನಾವಣಾ ಸಮಯವಾದ್ದರಿಂದ ಈ ಆದೇಶಕ್ಕೆ ಆಕ್ಷೇಪ ಚುನಾವಣಾ ಆಯೋಗ ಕಾಮಗಾರಿ ಮುಂದುವರಿಕೆಗೆ ನಿಷೇಧ ಹೇರಿತ್ತು. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ(ಮೇ. 29) ನಂತರ ನಿಷೇಧವನ್ನು ತೆರವುಗೊಳಿಸಿ, ಹೊಸ ಸರ್ಕಾರಕ್ಕೆ ಯೋಜನೆಯನ್ನು ಮುಂದುವರೆಸಲು ಅನುಮತಿ ನೀಡಲಾಯಿತು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications