ಶಿವಮೊಗ್ಗ: ಹಕ್ಕಿಪಿಕ್ಕಿಗಳ ಸೆರೆ, ಪ್ರಾಣಿಗಳ ಚರ್ಮ ವಶ
ಶಿವಮೊಗ್ಗ, ಜು.8: ಅಕ್ರಮವಾಗಿ ವನ್ಯಜೀವಿಗಳ ಚರ್ಮಗಳನ್ನು ಸಾಗಿಸುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದ ನಾಲ್ವರನ್ನು ಶಿವಮೊಗ್ಗ ಅರಣ್ಯ ಇಲಾಖೆಯ ಸಿಐಡಿ ವಿಭಾಗದವರು ಬಂಧಿಸಿದ್ದಾರೆ.
ಬಂಧಿತರಿಂದ ಹದಮಾಡಿದ ಎರಡು ಜಿಂಕೆ ಚರ್ಮ, ಚಿರತೆ ಚರ್ಮ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ 3 ಲಕ್ಷ ರು ವರೆಗಿನ ನಗದು ಹಣ ಕೂಡ ದೊರೆತಿದೆ.ಹಕ್ಕಿ ಪಿಕ್ಕಿ ಕಾಲೋನಿಯ ಮೇಲೆ ನಡೆದ ಮೊದಲದಾಳಿಯಲ್ಲಿ ದಾವಣಗೆರೆಯ ಚನ್ನಗಿರಿ ತಾಲೂಕಿನ ಅಸ್ತಪ್ಪನಹಳ್ಳಿಯ ಬಾಬು(46), ಗುರುನಾಥ್(25), ಚಿಕ್ಕಮಟ್ಟಿ ಗ್ರಾಮದ ಶಿವಕುಮಾರ್(23)ಹಾಗೂ ವೀರಭದ್ರ(25) ಬಂಧಿತರಾಗಿದ್ದಾರೆ.
ಎರಡನೆ ದಾಳಿಯಲ್ಲಿ ಮನ್ಮಥ ಹಾಗೂ ಪಾರಿಜಾತ ಎಂಬ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳನ್ನು ಬಂಧಿಸಿ ಒಂದು ಲಕ್ಷ ರು ನಗದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ದೊಡ್ಡಪೇಟೆ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)


Click it and Unblock the Notifications
