ಪ್ರಧಾನಿ ಶೀಘ್ರ ವಿಶ್ವಾಸಮತ ಯಾಚಿಸಲಿ:ಬಿಜೆಪಿ

ನವದೆಹಲಿ, ಜು. 8 : ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂತೆಗೆದುಕೊಂಡಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿರುವ ಹಿನ್ನಲೆಯಲ್ಲಿ ಸಂಸತ್ ನಲ್ಲಿ ಪ್ರಧಾನಮಂತ್ರಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತುಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವೇದ್ ಕರ್, ಕಳೆದ 50 ತಿಂಗಳಿನಿಂದ ಆಡಳಿತದಲ್ಲಿದ್ದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂತೆಗೆದುಕೊಂಡಿವೆ. ಈ ಮೂಲಕ ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು, ಶೀಘ್ರದಲ್ಲಿ ಸಂಸತ್ತಿನಲ್ಲಿ ವಿಶ್ವಾಸ ಮತವನ್ನು ಯಾಚಿಸಿ ಬಹುಮತ ಸಾಬೀತುಪಡಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.

ವಿಶ್ವಾಸಮತ ಯಾಚಿಸಲು ಪ್ರಧಾನಮಂತ್ರಿ ಮನಸ್ಸು ಮಾಡುತ್ತಿಲ್ಲ, ಆದ್ದರಿಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 1999ರಲ್ಲಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದಾಗ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಮಧ್ಯೆ ಪ್ರವೇಶಿಸಿದ ರಾಷ್ಟ್ರಪತಿಯವರು ವಾಜಪೇಯಿ ಅವರಿಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ತಾಕೀತು ಮಾಡಿದ್ದರು. ಆದರಂತೆ ಇದೀಗ ಯುಪಿಎ ಸರ್ಕಾರ ಕೂಡಾ ಅತಂತ್ರ ಸ್ಥಿತಿಯಲ್ಲಿದೆ. ಈ ಕೂಡಲೇ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತುಪಡಿಸಬೇಕು ಎಂದು ಪ್ರಧಾನಿಯವರಿಗೆ ಸೂಚಿಸಬೇಕು ಎಂದು ಜಾವೇದ್ ಕರ್ ರಾಷ್ಟ್ರಪತಿಯವರನ್ನು ಒತ್ತಾಯಿಸಿದ್ದಾರೆ.

ಪ್ರತಿಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಈಗಾಗಲೇ ಎಡಪಕ್ಷಗಳು ಬೆಂಬಲ ನೀಡಲಿ, ನೀಡದಿರಲಿ ಯುಪಿಎ ಸರ್ಕಾರ ವಿಶ್ವಾಸಮತವನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಯುಪಿಎಗೆ ಎಡಪಕ್ಷಗಳ ಬೆಂಬಲ ಹಿಂತೆಗೆತ
ಎಡಪಕ್ಷಗಳ ಗಡುವಿಗೆ ಬೆದರದೆ ಜಪಾನಿಗೆ ಪ್ರಧಾನಿ
ಅಣು ಒಪ್ಪಂದ ದೇಶದ ಅಭಿವೃದ್ಧಿಗೆ ಪೂರಕ: ವಿಜ್ಞಾನಿ
ಬುಷ್ ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ಅಣು ಬಿಕ್ಕಟ್ಟಿಗೆ ಎಡ ಪಕ್ಷಗಳ ಅಂತಿಮ ಗಡುವು
ಪ್ರಧಾನಿ ವಿಶ್ವಾಸಮತ ಯಾಚಿಸಲು ಆಡ್ವಾಣಿ ಆಗ್ರಹ
ಅಣು ಒಪ್ಪಂದ: ಪ್ರಧಾನಿ ಮುಲಾಯಂ ಭೇಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+