ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಗೆ ಎಡಪಕ್ಷಗಳ ಬೆಂಬಲ ಹಿಂತೆಗೆತ ಖಚಿತ

By Staff
|
Google Oneindia Kannada News

Left party leadersನವದೆಹಲಿ, ಜು. 8 : ಅಣು ಒಪ್ಪಂದ ಕುರಿತು ಎದುರಾಗಿರುವ ಬಿಕ್ಕಟ್ಟಿನ ಹಿನ್ನಲೆ ಯುಪಿಎ ಜತೆಗಿನ ಮೈತ್ರಿಯನ್ನು ಮುರಿದುಕೊಳ್ಳಲು 59 ಸಂಸದರನ್ನುಳ್ಳ ಎಡಪಕ್ಷಗಳು ಇಂದು ಸಭೆ ಸೇರಿ, ಅಂತಿಮ ನಿರ್ಣಯಗೊಂಡಿದೆ.. ಮಧ್ಯಾಹ್ನ 12:45 ರ ಸುಮಾರಿಗೆ ಬೆಂಬಲ ವಾಪಾಸ್ ಬಗ್ಗೆ ಪ್ರಕಾಶ್ ಕಾರಟ್ ಪ್ರಕಟಣೆ ನೀಡಿದರು. ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವ ಪತ್ರವನ್ನು ಪ್ರಣಬ್ ಮುಖರ್ಜಿ ಅವರಿಗೆ ತಲುಪಿಸಲಾಗಿದೆ. ಗುರುವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ನಿರ್ಣಯ ಪತ್ರ ನೀಡುವುದಾಗಿ ಕಾರಟ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದೊಂದಿಗೆ ಮುಂದುವರೆಯಲು ನಾವು ಎಳ್ಳಷ್ಟು ಮನಸ್ಸಿಲ್ಲ. ಸಂಬಂಧಗಳು ಹಳಸಿದ್ದರಿಂದ ಇನ್ನು ಬೆಂಬಲ ನೀಡುವುದು ಅಸಾಧ್ಯದ ಮಾತು ಎಂದರು. ಎಡಪಕ್ಷಗಳ ಬೆಂಬಲ ಹಿಂತಗೆದುಕೊಂಡಲ್ಲಿ ಸರ್ಕಾರ ಪತನಗೊಳ್ಳಲಿದೆ ಎಂದು ಅವರು ಹೇಳಿದರು.

ಈ ಮೂಲಕ ಎಡಪಕ್ಷಗಳು ತಾನು ತಳೆದಿರುವ ಗಟ್ಟಿ ನಿರ್ಧಾರದಲ್ಲಿ ಮೃದುಧೋರಣೆ ಅನುಸರಿಸುತ್ತಿರುವ ವಾಸನೆ ದಟ್ಟವಾಗುತ್ತಿದೆ. ಇದರ ಬೆನ್ನಲ್ಲೇ ಯಪಿಎ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

ಯುಪಿಎಗೆ ಎಸ್ ಪಿಯ ಶ್ರೀರಕ್ಷೆ

ಸಂಸತ್ತಿನಲ್ಲಿ ವಿಶ್ವಾಸಮತಯಾಚಿಸುವ ಸಮಯ ಬಂದಲ್ಲಿ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಮುಲಾಯಂ ಸಿಂಗ್ ಹಾಗೂ ಅಮರ್ ಸಿಂಗ್ ಇಂದು ಮಧ್ಯಾಹ್ನ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮಧ್ಯೆ ಜಿ.8 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಗೆ ತೆರಳಿರುವ ಪ್ರಧಾನಮಂತ್ರಿ ಜು.10 ರಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ. 39 ಸದಸ್ಯರ ಎಸ್ಪಿ ಬೆಂಬಲ ನೀಡುವುದಾಗಿ ಭಾಷೆ ಕೊಟ್ಟಿರುವುದರಿಂದ ಎಡಪಕ್ಷಗಳಿಗೆ ಪ್ರಧಾನಮಂತ್ರಿ ಕೂಡಾ ಅಷ್ಟಾಗಿ ಮಹತ್ವ ನೀಡುತ್ತಿಲ್ಲ. ಎರಡು ಮೂರು ಬಾರಿ ಮನಮೋಹನ್ ಸಿಂಗ್ ಒಪ್ಪಂದಕ್ಕೆ ಯಪಿಎ ಬದ್ಧ. ಈ ಕುರಿತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋನಿಯಾ ಗಾಂಧಿ ಕೂಡಾ ಸಿಂಗ್ ಬೆನ್ನಿಗಿದ್ದಾರೆ. ಈ ಎಲ್ಲ ಬೆಳವಣಿಗೆ ಅವಲೋಕಿಸಿದಲ್ಲಿ ಎಡಪಕ್ಷಗಳ ಹೊಂದಾಣಿಕೆಯನ್ನು ಕಡಿದುಕೊಂಡು ಎಸ್ಪಿ ಕೈಜೋಡಿಸಲು ಯುಪಿಎ ಸರ್ಕಾರದಲ್ಲಿಯೂ ಸಹಮತ ವ್ಯಕ್ತವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಎಡಪಕ್ಷಗಳ ಗಡುವಿಗೆ ಬೆದರದೆ ಜಪಾನಿಗೆ ಪ್ರಧಾನಿ
ಅಣು ಒಪ್ಪಂದ ದೇಶದ ಅಭಿವೃದ್ಧಿಗೆ ಪೂರಕ: ವಿಜ್ಞಾನಿ
ಬುಷ್ ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ಅಣು ಬಿಕ್ಕಟ್ಟಿಗೆ ಎಡ ಪಕ್ಷಗಳ ಅಂತಿಮ ಗಡುವು
ಪ್ರಧಾನಿ ವಿಶ್ವಾಸಮತ ಯಾಚಿಸಲು ಆಡ್ವಾಣಿ ಆಗ್ರಹ
ಅಣು ಒಪ್ಪಂದ: ಪ್ರಧಾನಿ ಮುಲಾಯಂ ಭೇಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X