ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯೂ ಟೂಬ್‌'ನಲ್ಲೂ ಲಾಲೂ ಜನಪ್ರಿಯ ವ್ಯಕ್ತಿ!

By Staff
|
Google Oneindia Kannada News

lalu prasad yadavಬೆಂಗಳೂರು, ಜು.8:ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಪ್ರಸಿದ್ಧ ಅಂತರ್ಜಾಲ ವಿಡಿಯೋ ತಾಣ 'You tube‌'ನಲ್ಲೂ ಜನಪ್ರಿಯ ವ್ಯಕ್ತಿ. ಕಳೆದ ಫೆಬ್ರವರಿಯಲ್ಲಿ ರೈಲ್ವೆ ಬಜೆಟ್ ಮಂಡಿಸುವ ವೇಳೆ ಅವರು ವಾಚಿಸಿದ ಹಿಂದಿ ಕವನ ಹಾಗೂ ಅದರ ಇಂಗ್ಲಿಷ್ ಅನುವಾದದ ವಿಡಿಯೋ ತುಣುಕು 'ಯೂ ಟೂಬ್‌'‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅತ್ಯಧಿಕ ಸಂಖ್ಯೆಯ ವೀಕ್ಷಕರು ಆ ವಿಡಿಯೋ ತುಣುಕನ್ನು ವೀಕ್ಷಿಸಿ ಆನಂದಿಸಿದ್ದಾರೆ. ‍

ಸಂಸದರ ಗದ್ದಲದ ನಡುವೆ ಲಾಲೂ ಬಜೆಟ್ ಮಂಡಿಸುತ್ತಾ ಜೊತೆಗೆ ಕವನ ವಾಚಿಸಿದ ದೃಶ್ಯ ಹಾಗೂ ಹಿಂದಿಯಲ್ಲಿದ್ದ ಕವನವನ್ನು ಇಂಗ್ಲಿಷ್‌ಗೆ ಅನುವಾದಿಸಿ ಎಂದು ಸಂಸದರು ಲಾಲೂಗೆ ದುಂಬಾಲು ಬಿದ್ದರು. ಲಾಲೂ ತಮ್ಮ ಕವನ ವಾಚನವನ್ನು ನಿಲ್ಲಿಸಿ, ''I will try to translate myself in English here.'' ಎಂದು ಹೇಳಿ ತಮ್ಮ ಹರಕು ಮುರುಕು ಇಂಗ್ಲೀಷ್‌ ಅನುವಾದವನ್ನು ಶುರು ಹಚ್ಚಿಕೊಂಡರು. "Everybody is appreciating, ki I have done a tremendous work. Each and every year, I have earned crores and crores every day. "And they are saying, Laloo Yadav has planted a fruit tree, and every year, it is duty of my, to grow fruit tree,"

ಅವರ ಇಂಗ್ಲಿಷ್ ಕವನವಾಚನ ಕೇಳಿ ಇಡೀ ಲೋಕಸಭೆ ನಗೆಗಡಲಲ್ಲಿ ಮುಳುಗಿತು. ಲೋಕಸಭೆ ಸ್ಪೀಕರ್ ಸೋಮನಾಥ ಚಟರ್ಜಿಯಂತೂ ಉಕ್ಕಿ ಬರುತ್ತಿರುವ ನಗೆಯನ್ನು ತಡೆದುಕೊಳ್ಳಲಾಗದೆ ಬಾಯಿಗೆ ಕೈ ಅಡ್ಡ ಇಟ್ಟುಕೊಂಡರು. ಫೆಬ್ರವರಿ 26, 2008ರಂದು ಯೂ ಟೂಬ್ ಸೇರಿಕೊಂಡಈ ವಿಡಿಯೋ ತುಣುಕನ್ನು ಇದುವರೆಗೂ ಪ್ರಪಂಚದಾದ್ಯಂತ 3.5 ಲಕ್ಷ ಮಂದಿ ವೀಕ್ಷಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X