ಗುಲ್ಬರ್ಗದಲ್ಲಿ ಮತ್ತೊಬ್ಬ ರೈತನ ಆತ್ಮಹತ್ಯೆ
ಗುಲ್ಬರ್ಗ, ಜು.8: ಚಿಂಚೋಳಿ ತಾಲೂಕಿನ ಹುಲಚೇರ ಗ್ರಾಮದ ರೈತ ಸಿದ್ದಲಿಂಗ ರೆಡ್ಡಿ (26) ಸೋಮವಾರ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಸಿದ್ದಲಿಂಗಪ್ಪ 50 ಸಾವಿರ ರು.ಗಳ ಸಾಲ ತೆಗೆದುಕೊಂಡಿದ್ದ.ಮಳೆಯನ್ನೇ ನಂಬಿಕೊಂಡು ಬೆಳೆ ಹಾಕಿ ಕೈಸುಟ್ಟುಕೊಂಡ. ಸಾಲಗಾರರಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿ ತನ್ನ ಜಮೀನಿನಲ್ಲಿದ್ದ ಮರ ಒಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ 20 ದಿನಗಳಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ 3 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಚಿಂಚೋಳಿ ತಾಲೂಕಿನಲ್ಲಿ ಸಿದ್ದಲಿಂಗಪ್ಪ ಸೇರಿ ಇದುವರೆಗೂ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
