ಕುಮಾರಸ್ವಾಮಿಗೆ ಗಣಿ ಧಣಿ ಜನಾರ್ದನ ರೆಡ್ಡಿ ಸವಾಲು

ಬೆಂಗಳೂರು, ಜು. 5 : ತಮ್ಮ ಅಧಿಕಾರ ಅವಧಿಯಲ್ಲಿ ಗಣಿ ಲಂಚ ಪ್ರಕರಣವನ್ನು ಸಿಬಿಐ ತನಿಖೆಗೆ ಯಾಕೆ ವಹಿಸಲಿಲ್ಲ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲು ಸ್ಪಷ್ಟಪಡಿಸಲಿ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.

ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಹೇಳಿಕೆ ನೀಡಿರುವ ಬೆನ್ನಲ್ಲಿ ರೆಡ್ಡಿ ಈ ಹೇಳಿಕೆ ನೀಡಿರುವುದು ಮತ್ತೆ ಗಣಿ ವಿವಾದ ಭುಗಿಲೇಳುವ ಸಾಧ್ಯತೆಗಳಿವೆ. ಗಣಿ ಲಂಚ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ದೇವೇಗೌಡರ ಕುಟುಂಬದ ಬಹುತೇಕ ಸದಸ್ಯರು ಜೈಲು ಪಾಲಾಗಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ನಾನು ಅನೇಕ ಬಾರಿ ಈ ವಿಷಯವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದೆ, ಆದರೆ ಆಗ ಇವರಿಗೆ ಸಿಬಿಐ ತನಿಖೆ ಬೇಡವಾಗಿತ್ತು. ಇದೀಗ ಯಾವ ತನಿಖೆಗಾದರೂ ಸಿದ್ಧ ಎಂದು ಹೇಳುತ್ತಿರುವುದು ಇವರೆಷ್ಟು ಸಾಚಾ ಎನ್ನುವುದು ತಿಳಿಯುತ್ತದೆ ಎಂದು ಜನಾರ್ದನರೆಡ್ಡಿ ಕಿಡಿಕಾರಿದರು.

ಕುಮಾರಸ್ವಾಮಿ ತಿರುಗೇಟು
ಜನಾರ್ದನ ರೆಡ್ಡಿ ಮಾತಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜನಾರ್ದನರೆಡ್ಡಿ ಸರ್ಕಾರದಲ್ಲಿ ಒಬ್ಬ ಸಚಿವ ಸ್ಥಾನ ಹೊಂದಿರುವಂತವರು, ಸುಳ್ಳು ಹೇಳುತ್ತಾ ಇನ್ನೊಬ್ಬರ ತೇಜೋವದೆ ಮಾಡುವುದಕ್ಕಿಂತ ಗಣಿ ಹಗರಣವನ್ನು ತನಿಖೆಗೆ ವಹಿಸಲಿ. ಈಗ ಸರ್ಕಾರ ತಮ್ಮದೇ ಇದೆ. ಎಲ್ಲ ಆಡಳಿತವೂ ಅವರ ಕೈಯಲ್ಲಿದೆ. ಹೀಗಿರುವಾಗ ತನಿಖೆ ನಡೆಸಲು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ, ಶೀಘ್ರದಲ್ಲಿ ಪ್ರಕರಣದ ತನಿಖೆ ನಡೆಯಲಿ, ಇದರಿಂದ ಸತ್ಯಾಸತ್ಯತೆ ಹೊರಬರಲಿದೆ. ಗಣಿ ಲಂಚದ ಕುರಿತು ಸಾರ್ವಜನಿಕರಲ್ಲಿ ತೀವ್ರ ಕುತೂಹಲವಿದೆ. ಅವರಿಗೂ ಸ್ವಲ್ಪ ತಿಳಿಯಲಿ ಎಂದು ಸವಾಲು ಹಾಕಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+