ಮಾಣೆಕ್ ಷಾಗೆ ಬೆಂಗಳೂರಿನಲ್ಲಿ ಸೇನೆಯ ಅಶ್ರುತರ್ಪಣ
ಬೆಂಗಳೂರು, ಜು. 5 : ಜೂನ್ 26ರಂದು ಕಾಲಗರ್ಭ ಸೇರಿದ ಅಪ್ರತಿಮ ಸೇನಾನಿ, ಸ್ಫೂರ್ತಿದಾಯಕ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರಿಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಶನಿವಾರ ಆರ್ಮಿ ಸರ್ವೀಸ್ ಸೆಂಟರ್ ಕೋರ್ ಮತ್ತು ಕಾಲೇಜ್ನಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ಸಮಯದಲ್ಲಿ, ಸೇನಾ ಸಿಬ್ಬಂದಿಗಳು ಕೂಡ ಅಗಲಿದ ಫೀಲ್ಡ್ ಮಾರ್ಷಲ್ಗೆ ಅಂತಿಮ ನಮನ ಸಲ್ಲಿಸಿದರು.
ನ್ಯುಮೋನಿಯಾದಿಂದ ಬಳಲುತ್ತಿದ್ದ 94ರ ಹರೆಯದಲ್ಲಿದ್ದ ಮಾಣೆಕ್ ಷಾ ತಮಿಳುನಾಡಿನ ವೆಲ್ಲಿಂಗ್ಟನ್ನಲ್ಲಿ ಜೂನ್ 26ರಂದು ಕೊನೆಯುಸಿರೆಳೆದರು. 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತವನ್ನು ಮಾಣೆಕ್ ಷಾ ಮುನ್ನಡೆಸಿದ್ದರು. ಮಾಣೆಕ್ ಷಾ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಪರೇಡ್ ಮೈದಾನ ಪ್ರತಿವರ್ಷದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತಿತರ ಸೇನಾ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.
(ಚಿತ್ರ : ಯುಎನ್ಐ)
ಪೂರಕ ಓದಿಗೆ
'ಅಪ್ರತಿಮ ಯೋಧ, ಸ್ಫೂರ್ತಿಯ ನಾಯಕ ಮಾಣೆಕ್ ಷಾ'


Click it and Unblock the Notifications
