ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಬಲ್ಡನ್ ಪಟ್ಟದ ರೋಚಕ ನಿರೀಕ್ಷೆಯಲ್ಲಿ ಪ್ರೇಕ್ಷಕ

By Staff
|
Google Oneindia Kannada News

Rafael Nadal ಲಂಡನ್, ಜು.5: ಟೆನ್ನಿಸ್ ಲೋಕದ ಇಬ್ಬರ ಸ್ಟಾರ್ ಆಟಗಾರರಾದ ಸ್ವಿಜರ್‌ಲೆಂಡಿನ ರೋಜರ್ ಫೆಡರರ್ ಹಾಗೂ ಸ್ಪೇನಿನ ರಾಫೆಲ್ ನಡಾಲ್ ನಡುವೆ ಜು.6 ಭಾನುವಾರದಂದು ವಿಂಬಲ್ಡನ್ ಪ್ರಶಸ್ತಿಗೆ ಅಂತಿಮ ಹಣಾಹಣಿ ನಡೆಯಲಿದೆ. ವಿಶ್ವ ನಂಬರ್ ಒನ್ ಪಟ್ಟಕ್ಕೆ ಹಸಿರುಹುಲ್ಲು ಹಾಸಿನ ಮೈದಾನ ಸಜ್ಜಾಗಿದೆ. ಈ ಇಬ್ಬರು ಮದಗಜಗಳ ಹೋರಾಟ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.

ಟೆನ್ನಿಸ್ ನಂಬರ್ ಒನ್ ಪಟ್ಟಕ್ಕೆ ಸಮಬಲ ಹೋರಾಟ ನಿರೀಕ್ಷೆಯ ಜತೆಗೆ ರೋಜರ್ ಫೆಡರರ್ ಗೆಲವು ಸಾಧಿಸಿದಲ್ಲಿ ಟೆನ್ನಿಸ್ ಇತಿಹಾಸದಲ್ಲಿ ಆರು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಏಕೈಕ ಆಟಗಾರನೆಂಬ ಕೀರ್ತಿಯ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ.ರೋಜರ್ ಫೆಡರರ್ ಈಗಾಗಲೇ ಐದು ಬಾರಿ ಈ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಂಬಲ್ಡನ್ ನಲ್ಲಿ ರೋಜರ್ ಫೆಡರರ್ ಮತ್ತು ಸ್ಪೇನ್ ನ ಯಂಗಸ್ಟರ್ ರಾಫೆಲ್ ನಡಾಲ್ ಸತತ ಆರು ಬಾರಿ ಫೈನಲ್ ನಲ್ಲಿ ಎದುರಾಳಿಗಳಾಗಿದ್ದಾರೆ.

ಇವಾನ್ ಲೆಂಡ್ಲ್ -ಮ್ಯಾಟ್ಸ್ ವಿಲಾಂಡರ್ ಹಾಗೂ ಆಂಡ್ರೆ ಅಗಾಸ್ಸಿ-ಪೀಟ್ ಸಾಂಪ್ರಾಸ್ ಐದು ಬಾರಿ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಪರಸ್ಪರ 1980 ಹಾಗೂ 1990ರಲ್ಲಿ ಎದುರಾಳಿಗಳಾಗಿದ್ದರು. ಇದೀಗ ರೋಜರ್ ಫೆಡರರ್ ಆರು ಬಾರಿ ವಿಂಬಲ್ಡನ್ ಫೈನಲ್ ತಲುಪುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಫೆಡರರ್ ಗೆಲುವು ಸಾಧಿಸಿದಲ್ಲಿ ಆರು ಬಾರಿ ವಿಂಬಲ್ಡನ್ ಪ್ರಶಸ್ತಿ ಪಡೆದ ದಾಖಲೆ ಇವರ ಖಾತೆಗೆ ಜಮಾವಣೆ ಆಗಲಿದೆ.

(ದಟ್ಸ್‌‍ಕನ್ನಡ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X