ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿನಿ ಚುನಾವಣೆ; ಬಿಜೆಪಿ, ಜೆಡಿಎಸ್ ನೇರ ಹಣಾಹಣಿ

By Staff
|
Google Oneindia Kannada News

ಬೆಂಗಳೂರು, ಜೂ.25: ರಾಜ್ಯ ಮತ್ತೊಂದು ಮಿನಿ ಚುನಾವಣೆಗೆ ಸಜ್ಜಾಗಿದೆ. ವಿಧಾನ ಪರಿಷತ್‌ನ ನಾಲ್ಕು ,ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.

ವಿಧಾನ ಪರಿಷತ್‌ನ ಆಗ್ನೇಯ,ಈಶಾನ್ಯ, ಪಶ್ಚಿಮ, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಉಡುಪಿ, ಮಂಗಳೂರು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದ್ದು, ಐದು ಸ್ಥಾನಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ ಒಟ್ಟು 19,660 ಮತದಾರರಿದ್ದಾರೆ. ಬೆಂಗಳೂರು ನಗರದಲ್ಲಿ 10,743, ಗ್ರಾಮಾಂತರದಲ್ಲಿ 1796 ಹಾಗೂ ರಾಮನಗರದಲ್ಲಿ 2004 ಮತದಾರರು ನಾಳೆ ಮತ ಚಲಾಯಿಸಲಿದ್ದಾರೆ. ಜೆಡಿಎಸ್‌ನ ಪುಟ್ಟಣ್ಣಯ್ಯ, ಬಿಜೆಪಿಯ ಎಂ.ನೀಲಯ್ಯ, ಕಾಂಗ್ರೆಸ್‌ನ ರಾಘವೇಂದ್ರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರಸ್ಪರ್ಧೆ ಏರ್ಪಟ್ಟಿದೆ.

ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ 61786 ಮತದಾರರಿದ್ದು 83 ಮತಗಟ್ಟೆಗಳನ್ನು ಸ್ಥಾಪಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು,ಚಿತ್ರದುರ್ಗ,ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡಿದೆ. ಬಿಜೆಪಿಯ ಡಾ.ಎ.ಎಸ್.ಶಿವಯೋಗಿಸ್ವಾಮಿ, ಜೆಡಿಎಸ್ ಎಚ್.ಎಸ್.ಶಿವಶಂಕರ್, ಕಾಂಗ್ರೆಸ್‌ನ ಎಸ್.ಲೋಕೇಶ್ವರಪ್ಪ, ಪಕ್ಷೇತರ ಸದಸ್ಯರಾದ ಆರ್.ಚೌಡರೆಡ್ಡಿ, ಸಿ.ಮಲ್ಲಿಕಾರ್ಜುನಯ್ಯ, ಸಿ.ಮಹಮದ್ ಹುಸೇನ್, ಆರ್.ರಾಜಣ್ಣ, ಬಿ.ಎಸ್.ವಸಂತಕುಮಾರ್, ಎಂ.ಶ್ರೀನಿವಾಸ್ ಕಣದಲ್ಲಿದ್ದಾರೆ. ಜೂ.28ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.

(ದಟ್ಸ್‌‍ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X