ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷಗಳ ಧರಣಿಯೊಂದಿಗೆ ಅಂತ್ಯಗೊಂಡ ಕಲಾಪ

By Staff
|
Google Oneindia Kannada News

ಬೆಂಗಳೂರು, ಜೂ. 25: ಬಳ್ಳಾರಿಯ ಗಡಿಗೆ ಚನ್ನಪ್ಪ ವೃತ್ತದಲ್ಲಿದ್ದ ಗಡಿಯಾರ ಗೋಪುರದ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವುದಾಗಿ ಮುಖ್ಯ ಮಂತ್ರಿ ವಿಧಾನಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ. ಇಂದಿನ ವಿಧಾನಮಂಡಲ ಕಲಾಪದಲ್ಲಿ ಪ್ರತಿಪಕ್ಷಗಳ ಧರಣಿಯಲ್ಲೇ ಅಂತ್ಯಗೊಂಡಿತು.

ಘಟನೆ ಹಿನ್ನೆಲೆ
1964 ರಲ್ಲಿ ನಿರ್ಮಿಸಲಾಗಿದ್ದ ಈ ಗೋಪುರ 45 ಅಡಿ ಎತ್ತರವಿದ್ದು, ಬಳ್ಳಾರಿಯ ಆಕರ್ಷಣೆಯ ಸ್ಥಳವಾಗಿದೆ. ಮೂರು ದಿನಗಳ ಹಿಂದೆ ಗೋಪುರ ಧ್ವಂಸವಾಗಿತ್ತು. ರಾತ್ರೋರಾತ್ರಿ ನಡೆದ ಈ ಧ್ವಂಸ ಪ್ರಕರಣದ ರುವಾರಿಗಳು ಯಾರು ಎಂಬುದು ಈವರೆಗೂ ತಿಳಿದುಬಂದಿಲ್ಲ. ರಾಜಕೀಯ ಪ್ರೇರಿತ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿದೂರು ದಾಖಲಾಗಿದೆ. ತನಿಖೆ ಜಾರಿಯಲ್ಲಿದೆ ಎಂದು ಡಿವೈಎಸ್ಪಿ ಯಲ್ಲ ಪ್ಪ ಹೇಳಿದ್ದಾರೆ. ಧ್ವಂಸ ಪ್ರಕರಣವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಕೆರೆಗಳ ಖಾಸಗೀಕರಣವಿಲ್ಲ
ನಗರದ ಕೆರೆಗಳನ್ನು ಖಾಸಗಿ ಸಂಸ್ಥೆಗಳ ಅಸ್ತಿತ್ವಕ್ಕೆ ಕೊಡಲಾಗುವುದು ಎಂಬ ಸುದ್ದಿಯನ್ನು ಅಲ್ಲಗೆಳೆದ ವೈದ್ಯಕೀಯ ಖಾತೆ ಸಚಿವ ರಾಮಚಂದ್ರೇಗೌಡ ಅವರು, ಕೆರೆಗಳ ಅಭಿವೃದ್ಧಿಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮರಳು ದಂಧೆ ಮುಂತಾದ ಅವ್ಯವಹಾರಗಳನ್ನು ತಡೆಗಟ್ಟಲಾಗುವುದು ಎಂದು ಹೇಳಿದರು. ಕೆರೆಗಳ ಖಾಸಗೀಕರಣ ಗೊಂದಲದ ಬಗ್ಗೆ ಸಭಾಪತಿ ಚಂದ್ರಶೇಖರ್ ಅವರು ಕೇಳಿದ ಪ್ರಶ್ನೆಗೆ ರಾಮಚಂದ್ರೇಗೌಡರು ಉತ್ತರಿಸಿದರು.

ಉಳಿದಂತೆ ಎರಡೂ ಸದನದಲ್ಲಿ ಪ್ರತಿಪಕ್ಷಗಳು ಹಾವೇರಿ ಗೋಲಿಬಾರ್ ಪ್ರಕರಣದ ತನಿಖೆಗೆ ಜಂಟಿ ಸದನಸಮಿತಿ ರಚಿಸಬೇಕೆಂದು ಆಗ್ರಹಿಸಿ, ಸದನದ ಕಲಾಪವನ್ನು ಪ್ರತಿಭಟನೆಯ ಮೂಲಕ ಕಳೆದರು. ಸಭಾಪತಿ ಜಗದೀಶ್ ಶೆಟ್ಟರ್ ಅವರು ಮಾಡಿದ ಮನವಿಯನ್ನು ಪುರಸ್ಕರಿಸಿದ ಕಾಂಗ್ರೆಸ್ ಸದಸ್ಯರಿಗೆ ಜೆಡಿಎಸ್ ನ ಬೆಂಬಲ ದೊರೆತು, ಸದನದಲ್ಲಿ ಧರಣಿ, ಗದ್ದಲ ಹೆಚ್ಚಾಯಿತು. ಕೊನೆಗೆ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X