ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈರ್‌ಫಾಕ್ಸ್ 3 : ಉಲ್ಲಾಸ ಮತ್ತು ವಿಷಾದ

By Staff
|
Google Oneindia Kannada News

Mozilla Firefox 3 sets world recordಬೆಂಗಳೂರು, ಜೂ. 25 : ದಿನೇ ದಿನೇ ಜನಬಳಕೆಯ ಜನಪ್ರಿಯ ಸಲಕರಣೆಯಾಗುತ್ತಿರುವ ಫೈರ್‌ಫಾಕ್ಸ್ 3 ಬ್ರೌಸರ್‌ಗೆ ಹಾರ್ದಿಕ ಅಭಿನಂದನೆಗಳು. ಇದುವರೆವಿಗೆ ನಾವು ನೋಡಿರುವ, ಬಳಸಿರುವ ಬ್ರೌಸರುಗಳಲ್ಲಿ ಅತ್ಯಂತ ಬ್ರೌಸರ್ ಸ್ನೇಹಿ ಅಂತರ್ಜಾಲ ಪರದೆ ಇದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಆದರೆ, ಒಂದು ಅಪಸ್ವರ ಉಂಟು. ಭಾರತೀಯ ಭಾಷೆಗಳಿಗೆ ಅನ್ವಯವಾಗುವಂತೆಯೂ ಫೈರ್‌ಫಾಕ್ಸ್‌ನ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗಿದೆಯಷ್ಟೆ. ಅದಕ್ಕೆ ಮೊಜಿಲಾ ಅವರು ಆಯ್ಕೆ ಮಾಡಿಕೊಂಡಿರುವ ಭಾಷೆ ಪಂಜಾಬಿ ಮತ್ತು ಗುಜರಾತಿ. ಸಂತೋಷವೆ. ಭಾರತದ ಎಲ್ಲ ಭಾಷೆಗಳಲ್ಲೂ ಹೊಸ ಹೊಸ ತಾಂತ್ರಿಕ ಸಲಕರಣೆಗಳು ಮೂಡಿಬರಬೇಕು. ಆದರೆ ಇಲ್ಲೂ ಕನ್ನಡ ಹಿಂದಾಯಿತಲ್ಲಾ ಎನ್ನುವುದು ವ್ಯಥೆ.

ಉದಾಹರಣೆಗೆ ದಟ್ಸ್‌ಕನ್ನಡ ಡಾಟ್ ಕಾಂ ತಾಣದ ಮಾತೃ ಸಂಸ್ಥೆ www.oneindia.com ವೆಬ್ ತಾಣವನ್ನು ಗಮನಿಸಿ. ಕಳೆದ ಎಂಟು ವರ್ಷಗಳಿಂದ ಸತತವಾಗಿ ಭಾರತೀಯ, ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳನ್ನು ಇಂಟರ್ ನೆಟ್ಟಿನಲ್ಲಿ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿರುವ ಸಂಸ್ಥೆ. ಅಂತರ್ಜಾಲದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ದಕ್ಷಿಣ ಭಾರತದ ಭಾಷೆಗಳೇ. ಈ ಭಾಷಿಕ ಸಮುದಾಯಕ್ಕೆ ನೆರವಾಗುವ ಬ್ರೌಸರುಗಳನ್ನು ನಿರ್ಮಿಸುವುದ ಬಿಟ್ಟು ಪಂಜಾಬಿ, ಗುಜರಾತಿ ಭಾಷೆಗೆ ಆದ್ಯತೆ ಕೊಟ್ಟಿರುವ ಫೈರ್‌ಫಾಕ್ಸ್‌ನ ಉದ್ದೇಶವಾದರೂ ಏನು?

ಫೈರ್‌ಫಾಕ್ಸ್ 3 ಬಿಡುಗಡೆ ಆದದ್ದು ಇದೇ ಜೂನ್ ಮಾಹೆಯಲ್ಲಿ. ಹೊಸ ವರ್ಷನ್ ಬಿಡುಗಡೆಯಾದ 24 ಗಂಟೆಗಳಲ್ಲಿ 8 ದಶಲಕ್ಷ ಡೌನ್‌ಲೋಡಾಗಿ ವಿಶ್ವ ದಾಖಲೆ ಸೃಷ್ಟಿಸಿರುವ ಬ್ರೌಸರ್. ಆಸ್ಟ್ರೇಲಿಯಾದ ವೆಬ್‌ಸೈಟ್ NEWS.com.au ಮಾಡಿರುವ ಫೈರ್ ಫಾಕ್ಸ್ ದಿಗ್ವಿಜಯದ ಒಂದು ವರದಿ ಹೀಗಿದೆ, ಗಮನಿಸಿ :

Firefox, the second most popular web browser in the world after Microsoft's Internet Explorer, claims to have set a world record after the latest version of the web browser was downloaded more than eight million times in first 24 hours of its launch.

Firefox 3 was launched at 10:30 pm (IST) on June 17, 2008, kicking off Download Day – a campaign organised by fans and developers to set a Guinness World Record for the highest number of downloads of a program in 24 hours.

There is no official world record for the most downloads of a particular program in 24 hours – the Download Day attempt was the first of its kind and had no specific target to beat.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X