ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನಿಂದ ಹೊರಬಂದ ಮಹಿಳಾವಾದಿ ನಫೀಸಾ

By Staff
|
Google Oneindia Kannada News

Nafess fazalಬೆಂಗಳೂರು, ಜೂ.25: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಸಚಿವೆ ನಫೀಸ್ ಫಜಲ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಕೆಲ ದಿನಗಳಿಂದ ಈ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡದೆ ಮಹಿಳಾ ವಿರೋಧಿ ಪಕ್ಷವಾಗುತ್ತಿದೆ ಎಂದು ನಫೀಸ್ ದೂರಿದ್ದಾರೆ.

ರಾಜ್ಯಸಭೆ ಹಾಗೂ ವಿಧಾನಪರಿಷತ್ತಿಗೆ ಮಹಿಳಾ ಅಭ್ಯರ್ಥಿಗಳನ್ನು ಆರಿಸದ ಕ್ರಮವನ್ನು ಖಂಡಿಸಿ, ಕಾಂಗ್ರೆಸ್ ಪಕ್ಷದ ಚಿನ್ಹೆಯನ್ನು ಕೈ ಬದಲು ಸೂಟ್ ಕೇಸ್ ಹಿಡಿದಿರುವ ಕೈ ಯಾಗಿ ಬದಲಿಸಿದರೆ ಚೆನ್ನಾಗಿರುತ್ತದೆ. ವಿಧಾನ ಪರಿಷತ್ತಿಗೆ ಎಂ.ವಿ. ರಾಜಶೇಖರನ್ ಅವರ ಬದಲು ರಾಣಿಸತೀಶ್ ಅವರನ್ನು ಕಳಿಸಬೇಕಾಗಿತ್ತು. ಆದರೆ, ಕಾಂಗ್ರೆಸ್ ವಿಧಾನಸಭೆ ಚುನಾವಣೆ ಸಮಯದಿಂದ ಮಹಿಳೆಯರನ್ನು ಮೂಲೆಗುಂಪು ಮಾಡುತ್ತಿದೆ. ಹಣಬಲಕ್ಕೆ ತಲೆಬಾಗುತ್ತಿರುವುದು ವಿಷಾದನೀಯ ಎಂದು ನಫೀಸ್ ಹೇಳಿದರು.

ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಮೇಲೆ ಕಿಡಿಕಾರಿದ ನಫೀಸ್, ರಾಜ್ಯ ಕಾಂಗ್ರೆಸ್ ನಲ್ಲಿ ಆಗುತ್ತಿರುವ ಎಲ್ಲಾ ಅನರ್ಥಗಳ ನಡುವೆ ಅವರನ್ನು ಇನ್ನೂ ಆ ಸ್ಥಾನದಲ್ಲಿ ಉಳಿಸಿಕೊಂಡಿರುವ ಹೈಕಮಾಂಡ್ ಕ್ರಮವನ್ನು ಖಂಡಿಸಿದರು. ಜೆಡಿಎಸ್ ಜತೆ ಕೈ ಜೋಡಿಸಿರುವ ಕಾಂಗ್ರೆಸ್ ಮುಂದೆ ಅದರ ದುಷ್ಪರಿಣಾಮವನ್ನು ಅನುಭವಿಸಲಿದೆ ಎಂದರು.

ಕಾಂಗ್ರೆಸ್ ನಲ್ಲಿ 30 ವರ್ಷಗಳ ಕಾಲ ದುಡಿದಿರುವ ನಫೀಸ್ ಅವರು ಮುಂದಿನ ಹೆಜ್ಜೆಯ ಬಗ್ಗೆ ಹೆಚ್ಚು ಹೇಳಲಿಲ್ಲ. ಸಮಾನಮನಸ್ಕರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದೇನೆ. ಬಿಜೆಪಿ ಸೇರುವ ಬಗ್ಗೆ ಈಗ ಏನೂ ಹೇಳಲಾರೆ ಎಂದರು.

(ದಟ್ಸ್ ಕನ್ನಡವಾರ್ತೆ)

ಪಕ್ಷಕ್ಕೆ ಕೈ ಕೊಟ್ಟವರ ಸೆಳೆಯಲು ಕಾಂಗ್ರೆಸ್ ಮಂಥನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X