ಬೆಂಗಳೂರಿನಲ್ಲಿ ಮತ್ತೆ ಗುಬ್ಬಿಗಳ ಚಿಂವ್, ಚಿಂವ್ ಕಲರವ!

The return of the sparrowsಬೆಂಗಳೂರು, ಜೂ.23: ಬೆಂಗಳೂರು ಮಹಾನಗರದಲ್ಲಿ ಗುಬ್ಬಚ್ಚಿಗಳು ಕಾಣೆಯಾವೆ ಎಂದು ಪಕ್ಷಿಪ್ರೇಮಿಗಳು ಹುಯಿಲಿಟ್ಟಿದ್ದರು. ಈಗ ಅವರಿಗೆ ಸಂತಸದ ಸುದ್ದಿ. ಗುಬ್ಬಚ್ಚಿಗಳು ಮರಳಿ ಬಂದಿವೆ. ಶಿವಾಜಿನಗರದಂತಹ ಪ್ರದೇಶಗಳಿಗೆ ಭೇಟಿಕೊಟ್ಟರೆ ಕಾಳು ಹೆಕ್ಕುತ್ತಿರುವ, ಸಣ್ಣ ಗುಂಡಿಗಳಲ್ಲಿ ಮೈಕೊಡವಿಕೊಂಡು ಆಟವಾಡುತ್ತಾ ಚಿಂಬ್ ಗುಟ್ಟುತ್ತಿರುವ ಗುಬ್ಬಿಗಳು ದರ್ಶನ ಕೊಡುತ್ತವೆ.

ಗುಬ್ಬಚ್ಚಿಗಳು ಮಾನವನ ಸಂಗಾತಿಗಳು. ತಮ್ಮ ಉಳಿವಿಗಾಗಿ ಗುಬ್ಬಚ್ಚಿಗಳು ಮನೆಗಳಲ್ಲೇ ಗೂಡು ಕಟ್ಟಿಕೊಂಡು ಮಾನವರೊಂದಿಗೆ ಸಹಜೀವನ ನಡೆಸುತ್ತವೆ. ಹದ್ದು,ಕಾಗೆಯಂತಹ ಪರಭಕ್ಷಕ ಜೀವಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗುಬ್ಬಚ್ಚಿಗಳು ಮನೆಯೊಳಗೆ ಗೂಡು ಕಟ್ಟಿ ಸಂಸಾರ ಮಾಡುತ್ತವೆ. ಅಲ್ಲೇ ದೊರೆಯುವ ಚೂರುಪಾರು ಆಹಾರವನ್ನು ಹೆಕ್ಕಿ ತಿನ್ನುತ್ತಾ ತಮ್ಮ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳೂತ್ತವೆ ಎನ್ನುತ್ತಾರೆ ಪಕ್ಷಿತಜ್ಞ ಡಾ. ಎನ್.ಎ.ಮಧ್ಯಸ್ಥ.

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಹೆಚ್ಚಾಗಿ ಅವು ಗೂಡುಕಟ್ಟಿಕೊಳ್ಳಲು ಸೂಕ್ತ ವಾತಾವರಣ ಸಿಗದೆ ಗುಬ್ಬಚ್ಚಿಗಳ ಸಂತತಿ ಕ್ರಮೇಣ ಕಡಿಮೆಯಾಯಿತು. ಹಾಗೆಯೇ ಸೂಪರ್ ಮಾರ್ಕೆಟ್‌ಗಳ ದಾಂಗುಡಿಯಿಂದ ಗುಬ್ಬಚ್ಚಿಗಳಿಗೆ ಸಿಗುತ್ತಿದ್ದ ಚೂರು ಪಾರು ಕಾಳು ಸಿಗದಂತಾಯಿತು. ಅವು ನಗರ ಪ್ರದೇಶದಿಂದ ದೂರ ಹಾರಿ ಹೋಗಲು ಇದೂ ಒಂದು ಕಾರಣ ಎನ್ನುತ್ತಾರೆ ಡಾ.ಮಧ್ಯಸ್ಥ.

ಹಾರಿಬರಲು ಕಾರಣ
ಕೀಟನಾಶಕಗಳ ಹಾಗೂ ಮನೆಗಳಲ್ಲಿ ಸೊಳ್ಳೆ ಗಳನ್ನು ನಿವಾರಿಸಲು ಬಳಸುವ ರಸಾಯನಿಕಗಳ ಬಳಕೆ ಹೆಚ್ಚಾಗಿ ಗುಬ್ಬಚ್ಚಿಗಳು ತುಂಬಾ ಅಪಾಯಕರ ಪರಿಸ್ಥಿತಿಯಲ್ಲಿವೆ. ಈಗ ಅವು ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾಗಿವೆ. ಗುಬ್ಬಿಗಳ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿದೆ. ಕ್ರಿಮಿನಾಶಕಗಳ ಬಳಕೆ ಅಧಿಕವಾಗಿ ಗುಬ್ಬಿಗಳ ಸಂತತಿ ಕ್ಷೀಣಿಸುತ್ತಿದೆ. ಎಗ್ಗಿಲ್ಲದಂತೆ ಬಳಸುತ್ತಿರುವ ಕೀಟನಾಶಕಗಳ ಬಳಕೆ ಕಡಿಮೆ ಮಾಡಲು ಜನ ಜಾಗೃತಿ ಮೂಡಿಸಬೇಕಾಗಿದೆ. ಆಗಷ್ಟೆ ಗುಬ್ಬಚ್ಚಿಗಳು ಬದುಕುಳಿಯಲು ಸಾಧ್ಯವಾಗುತ್ತದೆ.

ಶಿವಾಜಿನಗರ ಹಾಗೂ ಕೆ.ಆರ್.ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಗುಬ್ಬಿಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಅಲ್ಲಿ ಅವು ಗೂಡು ಕಟ್ಟಿ, ಮರಿಮಾಡಲು ಬೇಕಾದ ಪರಿಸರ, ಹಳೆಕಾಲದ ಮನೆಗಳು ಅವುಗಳಿಗೆ ನೆರವಾಗಿವೆ. ಹಾಗಾಗಿ ಗುಬ್ಬಚ್ಚಿಗಳು ಆ ಸ್ಥಳಗಳಲ್ಲಿ ಇನ್ನೂ ಇವೆ ಎನ್ನುತ್ತ್ತಾರೆ ಪಕ್ಷಿತಜ್ಞರು.

(ದಟ್ಸ್‌ಕನ್ನಡ ವಾರ್ತೆ)

ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ
ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+