ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ಪಾಸ್‌ಪೋರ್ಟ್ ಅಂತರ್ಜಾಲ ತಾಣ

By Staff
|
Google Oneindia Kannada News

ಬೆಂಗಳೂರು, ಜೂ.23: ಪ್ರಾದೇಶಿಕ ಪಾಸ್ ಪೋರ್ಟು ಕಚೇರಿ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ತನ್ನ ಕಚೇರಿಯ ವೆಬ್ ತಾಣಗಳನ್ನು ರೂಪಿಸಿದೆ. ಇನ್ನು ಮುಂದೆ ಮುದ್ದಾದ ಕನ್ನಡ ಪದಗಳಲ್ಲಿ ಪಾಸ್‌ಪೋರ್ಟು ಅರ್ಜಿಗಳನ್ನು ತುಂಬಿಸಿ ಆನಂದಿಸಬಹುದು.

ರಾಷ್ಟ್ರೀಯ ಮಾಹಿತಿ ಕೇಂದ್ರ ನಿರ್ವಹಣೆಯಲ್ಲಿ www.rpobangalore.gov.in ಎಂಬ ತಾಣವು ಸಾರ್ವಜನಿಕರಿಗೆ ಮುಕ್ತವಾಗಿ ಮಾಹಿತಿ ನೀಡಲಿದೆ. ಈ ಹಿಂದೆ ಇದ್ದ www.kar.nic.in/passport ತಾಣ ಸಹ ಅಸ್ತಿತ್ವದಲ್ಲಿರುತ್ತದೆ. ಹೊಸ ತಾಣ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ತೊಡಗಿದ ಮೇಲೆ ಹಳೆ ತಾಣದ ಬೆಸುಗೆಯನ್ನು ತೆಗೆದುಹಾಕಲಾಗುತ್ತದೆ. ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಸಾರ್ವಜನಿಕರಿಗೆ ಸುಲಭ ರೀತಿಯಲ್ಲಿ ವಿಹಾರ( ಬ್ರೌಸ್) ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಬರಹ ತಂತ್ರಾಂಶದ ಲಿಪಿಯನ್ನು ನಿಮ್ಮ ಗಣಕದಲ್ಲಿ ಸ್ಥಾಪಿಸಿಕೊಂಡರೆ , ವೆಬ್ ತಾಣದಲ್ಲಿನ ಅಕ್ಷರಗಳು ಸ್ಪುಟವಾಗಿ ಕಾಣಿಸುತ್ತದೆ. ಈ ತಾಣದಲ್ಲಿ ಪಾಸ್ ಪೋರ್ಟು ಅರ್ಜಿ, ನಿಯಮಾವಳಿಗಳು, ಪಾಸ್ ಪೋರ್ಟು ಪಡೆಯುವ ಬಗೆ, ಸ್ಪೀಡ್ ಪೋಸ್ಟ್ ಬಳಕೆ, ಅಂಚೆ ಕಚೇರಿಗಳ ವಿಳಾಸ, ಬೆಂಗಳೂರು ಒನ್ ಕೇಂದ್ರದ ಮಾಹಿತಿ, ತತ್ಕಾಲ್ ಯೋಜನೆ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆಯಬಹುದು.ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಟೋಕನ್(ಗುಪ್ತ ಪದ) ನೀಡಲಾಗುತ್ತದೆ. ಅದರ ಅನ್ವಯ ಪಾಸ್ ಪೋರ್ಟ್ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X