ಸಿಖ್ ಗಲಾಟೆ: ಮೈಸೂರಿಗೆ ತೆರಳಿದ ದೇರಾ ಗುರು
ಬೆಂಗಳೂರು, ಜೂ.23:ನಗರಕ್ಕೆ ಭಾನುವಾರಆಗಮಿಸಿದ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಸಿಂಗ್ ಅವರನ್ನು ಸುರಕ್ಷತೆಯ ದೃಷ್ಟಿಯಿಂದ ಮೈಸೂರಿಗೆ ಕಳುಹಿಸಲಾಗಿದೆ. ಸಿಖ್ ಸಮುದಾಯ ಕಳೆದ ಎರಡು ದಿನಗಳಿಂದ ದೇರಾ ಮುಖ್ಯಸ್ಥರ ವಿರೋಧ ಪ್ರತಿಭಟನೆ ನಡೆಸುತ್ತಿವೆ.
ಪೊಲೀಸರ ಪ್ರಕಾರ, ಪುಣೆಯಿಂದ ದೆಹಲಿಗೆ ತೆರಳಬೇಕಾಗಿದ್ದ ಬಾಬಾ ರಾಮ್ ಸಿಂಗ್ ಅವರು ತಮ್ಮ 57 ಜನ ಬೆಂಬಲಿಗರ ಒಟ್ಟಿಗೆನಗರಕ್ಕೆ ಬಂದರು.ದೆಹಲಿಯಲ್ಲಿ ದೇರಾ ಮುಖ್ಯಸ್ಥರಿಗೆಅಪಾಯ ಒದಗುವ ಮುನ್ಸೂಚನೆಯನ್ನು ಗುಪ್ತದಳಗಳು ನೀಡಿದ್ದವು. ನಗರದಿಂದ ಭಾನುವಾರ ಸಂಜೆ ವೇಳೆಗೆ ರಸ್ತೆ ಮೂಲಕ ಮೈಸೂರಿನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರತಿಭಟನೆ ಹಿನ್ನೆಲೆ
ಇತ್ತೀಚೆಗೆ ಮುಂಬಯಿಯಲ್ಲಿ ದೇರಾ ಮುಖ್ಯಸ್ಥರ ಅಂಗರಕ್ಷಕನೊಬ್ಬ ಹಾರಿಸಿದ ಗುಂಡು ಸಿಖ್ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿತ್ತು.ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಿಖ್ ಸಮುದಾಯ ಪ್ರತಿಭಟನೆ ನಡೆಸಿದ್ದವು. ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನ ಹಲಸೂರು ಕೆರೆ ಸಮೀಪದ ಗುರುದ್ವಾರದ ಬಳಿ ದೇರಾ ಮುಖ್ಯಸ್ಥರ ಪ್ರತಿಕೃತಿ ದಹಿಸಿ, ಪ್ರತಿಭಟನೆ ನಡೆದಿತ್ತು. ಇದಕ್ಕೂ ಮುನ್ನ ರಹೀಮ್ ಅವರು ಗುರು ಗೋವಿಂದ್ ಸಿಂಗ್ ಉಡುಪು ಧರಿಸಿ ಬಹಿರಂಗವಾಗಿ ಕಾಣಿಸಿಕೊಂಡು, ಸಿಖ್ ಸಮುದಾಯದ ಕೋಪಕ್ಕೆ ಗುರಿಯಾಗಿದ್ದರು. ರಾಮ್ ರಹೀಮ್ ಅವರನ್ನು ಬಿಗಿ ಪೊಲೀಸ್ ಭದ್ರತೆಯ ನಡುವೆ ಮೈಸೂರಿನ ಸಿದ್ದಲಿಂಗಪುರದ ಬಳಿಗೆ ಕರೆದೊಯ್ಯಲಾಗಿದೆ. ಜಡ್ ಪ್ಲಸ್ ಸುರಕ್ಷತೆ ಹಾಗೂ ಗುಂಡು ನಿರೋಧಕ ವಾಹನದ ಮೂಲಕ ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡವಾರ್ತೆ)


Click it and Unblock the Notifications
