ಇಂಟರ್ನೆಟ್ಟಿನಲ್ಲಿ ಕ್ರಿಕೆಟ್ ಪಂದ್ಯಗಳ ಕನ್ನಡ ವೀಕ್ಷಕ ವಿವರಣೆ!

Cricket live in 4 South Indian languagesಬೆಂಗಳೂರು, ಜೂ. 23: ಕ್ರಿಕೆಟ್ ಪಂದ್ಯಗಳ ಇಂಟರ್ನೆಟ್ ವೀಕ್ಷಕ ವಿವರಣೆಯನ್ನು ಮಾತೃ ಭಾಷೆಯಲ್ಲಿ ನೋಡುವ ಅವಕಾಶ ಕನ್ನಡ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಇದೀಗ ಏಕಕಾಲಕ್ಕೆ ಲಭ್ಯ. ಟಾಸ್‌ನಿಂದ ಪಂದ್ಯದ ಅಂತಿಮ ಕ್ಷಣದ ಆಟದವರೆಗಿನ ಎಲ್ಲ ವಿವರಗಳು ಕನ್ನಡದಲ್ಲಿ ಸುಲಲಿತ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಬಾಲ್ ಬೈ ಬಾಲ್ ಕಾಮೆಂಟರಿ ಮತ್ತು ಸ್ಕೋರ್ ಪಟ್ಟಿಯನ್ನು ನೀಡುವ ಭಾರತದ ಪ್ರಪ್ರಥಮ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಒನ್‌ಇಂಡಿಯಾ ಡಾಟ್ ಇನ್ ಪಾತ್ರವಾಗಿದೆ. ಪ್ರತಿ ಪಂದ್ಯಗಳ ಎಲ್ಲ ವಿವರಗಳನ್ನು ದಕ್ಷಿಣ ಪ್ರಾದೇಶಿಕ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ನೀಡಿ ಒನ್‌ಇಂಡಿಯಾ ಮತ್ತೊಮ್ಮೆ ದಕ್ಷಿಣ ಭಾರತದ ಭಾಷೆಗಳಲ್ಲಿ ಅಗ್ರಗಣ್ಯ ಅಂತರ್ಜಾಲ ತಾಣ ಎನಿಸಿಕೊಂಡಿದೆ.

ಒನ್‌ಇಂಡಿಯಾದ ಸಹೋದರ ಪೋರ್ಟಲ್ ಆದ ದಟ್ಸ್‌ಕ್ರಿಕೆಟ್ ಅಂತರ್ಜಾಲ ತಾಣದಲ್ಲಿ ಕ್ರಿಕೆಟ್ ಪಂದ್ಯಗಳ ಎಲ್ಲ ವಿವರಣೆಗಳನ್ನು ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಭಾಷೆಯಲ್ಲಿ ನೋಡಬಹುದಾಗಿದೆ. ಕ್ರಿಕೆಟ್ ಪಂದ್ಯಗಳು ನಡೆದಿರುವಾಗ ಪ್ರಾದೇಶಿಕ ಭಾಷೆಯಲ್ಲಿ ಬಾಲ್ ಬೈ ಬಾಲ್ ಮತ್ತು ಸ್ಕೋರ್ ವಿವರ ಕ್ರಿಕೆಟ್ ಅಭಿಮಾನಿಗಳ ಬೆರಳ ತುದಿಗೆ ಸಿಗುತ್ತದೆ.

ಇತ್ತೀಚೆಗೆ ಮುಕ್ತಾಯವಾದ ಡಿಎಲ್ಎಫ್ ಐಪಿಎಲ್ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿ ಇಡೀ ಜಗತ್ತಿನ ಗಮನವನ್ನು ತನ್ನೆಡೆ ಸೆಳೆದುಕೊಂಡಿದೆ. ಕ್ರಿಕೆಟ್ ಜನಪ್ರಿಯತೆಯನ್ನು ಮತ್ತೊಂದು ಮಜಲಿಗೆ ತಂದು ನಿಲ್ಲಿಸಿದೆ. ಮುಂಬರುವ ಕ್ರಿಕೆಟ್ ಪಂದ್ಯಾವಳಿಗಳನ್ನು ಜನ ಅತ್ಯಂತ ಕಾತರದಿಂದ ಕಾಯುತ್ತಿದ್ದಾರೆ. ಕ್ರಿಕೆಟ್ ಆಸಕ್ತರು ಈ ಸೇವೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ ಎಂದು ಒನ್‌ಇಂಡಿಯಾ ಸಂಸ್ಥೆಯ ಸಿಇಓ ಬಿ.ಜಿ. ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೂನ್ 24ರಿಂದ ಜುಲೈ 6ರವರೆಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಾರತ ಸೇರಿದಂತೆ ಆರು ರಾಷ್ಟ್ರಗಳ ಏಷ್ಯಾಕಪ್ ಕ್ರಿಕೆಟ್ ಸರಣಿಯ ವಿವರಗಳನ್ನು ಕನ್ನಡದಲ್ಲಿ ನೋಡುವ ಸವಲತ್ತು ವಿಶ್ವದ ಎಲ್ಲ ಕನ್ನಡಗರಿಗೆ ಸಿಗಲಿದೆ. ದಟ್ಸ್‌ಕನ್ನಡ ಡಾಟ್ ಕಾಂನಲ್ಲೂ ನೀಡಲಾಗಿರುವ ಬಾಲ್ ಬೈ ಬಾಲ್ ಅಥವಾ ಸ್ಕೋರ್ ಕಾರ್ಡ್ ಕ್ಲಿಕ್ಕಿಸಿದರೆ ಈ ಸೇವೆಯ ಲಾಭ ಪಡೆಯಬಹುದಾಗಿದೆ. ಭಾರತೀಯ ಕಾಲಮಾನ 15.30ಕ್ಕೆ ಮೊದಲ ಪಂದ್ಯ ಬಾಂಗ್ಲಾದೇಶ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ನಡೆಯಲಿದೆ. ಇದೇ ಸಮಯಕ್ಕೆ ದಟ್ಸ್‌ಕನ್ನಡ ಅಂತರ್ಜಾಲ ತಾಣಕ್ಕೆ ಬಂದು ಬಾಲ್ ಬೈ ಬಾಲ್ ಕೊಂಡಿ ಕ್ಲಿಕ್ಕಿಸಿದರೆ ಕನ್ನಡದಲ್ಲಿ ಕ್ರಿಕೆಟ್ ವಿವರಣೆ ನಿಮ್ಮ ಕಣ್ಣೆದುರಿಗೆ ಹಾಜರ್!

ಇದಿಷ್ಟೇ ಅಲ್ಲದೆ ಒನ್‌ಇಂಡಿಯಾ ಡಾಟ್ ಇನ್ ವೆಬ್ ಸೈಟು ಇತ್ತೀಚೆಗೆ ಮೊಬೈಲ್ ಬಳಕೆದಾರರಿಗೆ ದಟ್ಸ್‌ಕ್ರಿಕೆಟ್‌ನ ವ್ಯಾಪ್ (WAP) ಆವೃತ್ತಿ ಪ್ರಾರಂಭಿಸಿದೆ. ಇದು ಲೈವ್ ಸ್ಕೋರ್, ಮುಂಬರುವ ಪಂದ್ಯಗಳ ಪಟ್ಟಿ, ಐಸಿಸಿ ತಂಡಗಳು, ರ್‌ಯಾಂಕಿಂಗ್ ಸೇರಿದಂತೆ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಮೊಬೈಲ್ ಮೂಲಕ ಬಳಕೆದಾರರಿಗೆ ನೀಡುತ್ತಿದೆ.

ವರ್ಗೀಕೃತ ಜಾಹೀರಾತು, ಮೊಬೈಲ್ ಪೋರ್ಟಲ್, ಎಸ್ಎಮ್ಎಸ್ ಸುದ್ದಿಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನೀಡಿ ಈ ಕ್ಷೇತ್ರದಲ್ಲಿ ಧಾಪುಗಾಲಿಟ್ಟಿರುವ ಒನ್‌ಇಂಡಿಯಾ ತನ್ನ ಯಶಸ್ಸಿನ ಕಿರೀಟಕ್ಕೆ ಕ್ರಿಕೆಟ್ ಲೈವ್ ಅಪ್‌ಡೇಟ್‌ನ ಗರಿಯನ್ನೂ ಈಗ ಸಿಕ್ಕಿಸಿಕೊಂಡಿದೆ. ಪ್ರಾದೇಶಿಕ ಭಾಷೆಗಳ ಸೇವೆಯಲ್ಲಿ ಒನ್‌ಇಂಡಿಯಾ ಯಾವಾಗಲೂ ಮುಂಚೂಣಿಯಲ್ಲಿ ಇರಬೇಕು ಎಂಬುದೇ ನಮ್ಮ ಆಶಯ ಎಂದು ಬಿ.ಜಿ. ಮಹೇಶ್ ಹೇಳಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+