ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕವಾಗಿ ಹಿಂದುಳಿದವರಿಗೆ 90 ಸಾವಿರ ಮನೆಗಳು

By Staff
|
Google Oneindia Kannada News

ಬೆಂಗಳೂರು, ಜೂ.18: ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನರಿಗೆ 45 ಸಾವಿರ ಮನೆ ನಿರ್ಮಿಸಿ(ಫ್ಲಾಟ್) ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 92,000 ಮನೆಗಳನ್ನು ನಿರ್ಮಿಸಲಾಗುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಾಲಿಗೆ ಬರುವ 45 ಸಾವಿರ ಮನೆಗಳನ್ನು ಅರ್ಹರಿಗೆ ವಿತರಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಾಗಿ 326 ಎಕರೆ ಪ್ರದೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ನೀಡಲಾಗಿದೆ. ಆಲೂರು, ಕುದುರೆಗೆರೆ, ಹುನ್ನಿಗೆರೆ, ಕೊಮ್ಮಗಟ್ಟ, ಕಣಿಮಿಣಿಕಿ, ಉತ್ತರಹಳ್ಳಿ, ತಿಪ್ಪಸಂದ್ರ, ಬೆಟ್ಟದಾಸಪುರ, ಗುಂಜೂರು, ದೊಡ್ಡಬನಹಳ್ಳಿ, ದೊಡ್ಡಗುಬ್ಬಿಗಳಲ್ಲಿನ ಕಂದಾಯ ಭೂಮಿಯನ್ನು ಸರ್ಕಾರ ಬಿಡಿಎಗೆ ಹಸ್ತಾಂತರಿಸಿದೆ.

ಹಾಗೆಯೇ ಬಿಡಿಎ ಐದು ಹೊಸ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಈ ಹೊಸ ಬಡಾವಣೆಯಲ್ಲಿ 60 ಸಾವಿರ ನಿವೇಶನಗಳನ್ನು ವಿತರಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X