ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂದಲಗಳ ನಡುವೆ ರಾಷ್ಟ್ರೀಯ ಯುವ ಕ್ರೀಡಾ ಕೂಟ

By Staff
|
Google Oneindia Kannada News

ಬೆಂಗಳೂರು, ಜೂ. 13 : ನಾನಾಕಾರಣಗಳಿಂದ ಎರಡು ಬಾರಿ ಮುಂದೂಡಲಾದ ಪ್ರಥಮ ರಾಷ್ಟ್ರೀಯ ಯುವ ಕ್ರೀಡಾಕೂಟ ಜು.22 ರಿಂದ 29ರ ವರೆಗೆ ಉದ್ಯಾನನಗರಿಯಲ್ಲಿ ನಡೆಯಲಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ರಾಷ್ಟ್ರೀಯ ಕ್ರೀಡಾಕೂಟವು ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಸೂಕ್ತ ವೇದಿಕೆ ಕಲ್ಪಿಸಲಿದೆ ಎಂದು ಅಭಿಪ್ರಾಯಪಟ್ಟರು.18 ವರ್ಷದೊಳಗಿನವರಿಗಾಗಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 24 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಕ್ರೀಡಾ ಕೂಟಕ್ಕೆ 35 ಕೋಟಿ ರು.ಗಳ ಅಂದಾಜು ವೆಚ್ಚ ತಗಲುವ ನಿರೀಕ್ಷೆಯಿದ್ದು, ರಾಜ್ಯ ಸರ್ಕಾರ ಈಗಾಗಲೇ 5 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದರು. ಇನ್ನು 25 ಕೋಟಿ ರು.ಗಳ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ, ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಗೊಂದಲಗಳ ಗೂಡು
ಕ್ರೀಡಾಕೂಟದ ಆರಂಭ ನೋಡಿದರೆ ನಿಗದಿತ ಸಮಯಕ್ಕೆ ಕ್ರೀಡಾಕೂಟ ನಡೆಯುವುದು ಅನುಮಾನವಾಗಿದೆ. ಕಾರಣ ಕಂಠೀರವ ಕ್ರೀಡಾಂಗಣದ ಸಿಂಥೆಟೆಕ್ ಟ್ರ್ಯಾಕ್ ಸಂಪೂರ್ಣ ನಾಶವಾಗಿದೆ. ಅದಕ್ಕೆ ಹೊಸ ರೂಪ ಕೊಡಬೇಕಾದರೆ ಕನಿಷ್ಠ ತಿಂಗಳಿಗಿಂತಲೂ ಅಧಿಕ ಸಮಯ ಹಿಡಿಯುತ್ತದೆ.ಹೀಗಿರುವಾಗ ಇನ್ನು ಟೆಂಡರ್ ಕೂಡಾ ಕರೆದಿಲ್ಲ. ಅಲ್ಲದೇ ಇದು ಮಳೆಗಾಲದ ಸಮಯ. ಇದು ಕ್ರೀಡಾಂಗಣದ ಸಮಸ್ಯೆಯಾದರೆ ಮತ್ತೊಂದಡೆ ಕ್ರೀಡಾ ಸಲಕರಣೆಗಳ ಕೊರತೆ ಸಾಕಷ್ಟಿದೆ. ಕ್ರೀಡಾ ಸಾಮಗ್ರಿಗಳಿಗೆ ಇನ್ನೂ ಬೇಡಿಕೆ ಸಲ್ಲಿಸಿಲ್ಲ. ಬೇಡಿಕೆ ಸಲ್ಲಿಸಿದರೂ ಸರಿಯಾದ ಸಮಯಕ್ಕೆ ಬಂದು ತಲುಪುವ ಯಾವ ಭರವಸೆಯೂ ಇಲ್ಲ. ಆದ್ದರಿಂದ ಪ್ರಥಮ ಯುವ ಕ್ರೀಡಾಕೂಟ ನಿಗದಿತ ಸಮಯಕ್ಕೆ ನಡೆಯುವುದು ಅನುಮಾನವಾಗಿದೆ.

(ದಟ್ಸ್ ಕನ್ನಟ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X