ಉಡುಪಿ ಶಾಸಕ ರಘುಪತಿ ಹೆಂಡತಿ ನಾಪತ್ತೆ
ಉಡುಪಿ, ಜೂ.13 : ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ( ಜೂ. 10) ತವರಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟ ಅವರ ಬಗ್ಗೆ ಯಾವುದೇ ಮಾಹಿತಿ ಇದುವರೆವಿಗೆ ಲಭ್ಯವಾಗಿಲ್ಲ. ಆದರೆ, ಕಟಪಾಡಿಯ ಬಳಿ ಕುಂಜರಗಿರಿಯಲ್ಲಿ ಅವರು ತೆರಳುತ್ತಿದ್ದ ಕಾರು ದೊರೆಕಿದೆ. ಕಾರಿನಲ್ಲಿ ಹಣ, ಒಡವೆ, ಸಿಮ್ ಮತ್ತು ಮಾತ್ರೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕರ ಪತ್ನಿ ಪದ್ಮಪ್ರಿಯ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಟಪಾಡಿಯ ಬಳಿ ಕುಂಜರಗಿರಿ ಎಂಬಲ್ಲಿ ಕಳೆದ ಮೂರು ದಿನಗಳಿಂದ ಕಾರ್ ನಿಂತಲ್ಲೇ ನಿಂತಿದೆ. ಇಲ್ಲಿ ಸಂಚರಿಸುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.ದುಷ್ಕರ್ಮಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಲಾಗಿದೆ.ಶ್ವಾನ ದಳವನ್ನು ಬಳಸಲಾಗಿದೆ.
(ದಟ್ಸ್ ಕನ್ನಡವಾರ್ತೆ)
ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್


Click it and Unblock the Notifications
