• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವ

By Staff
|

Tirumala Srinivasa Kalyanotsavaಬೆಂಗಳೂರು, ಜೂ.13: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ 'ಶ್ರೀನಿವಾಸ ಕಲ್ಯಾಣ' ಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂ.22ರಂದು ನಡೆಯಲಿದೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತಿ ನಿತ್ಯ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ವಿಶೇಷ ಸೇವೆಯನ್ನು ಕಣ್ತುಂಬಿಸಿಕೊಳ್ಳಲು 2 ವರ್ಷ ಮುಂಚಿತವಾಗಿಯೇ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಇದಕ್ಕಾಗಿ 1,000 ರು. ನಿಗದಿತ ಶುಲ್ಕ ಪಾವತಿಸಬೇಕು. ದಿನ ಒಂದಕ್ಕೆ ಕೇವಲ 1,200 ಜನರಿಗೆ ಮಾತ್ರ ಪ್ರವೇಶ. ತಿಮ್ಮಪ್ಪ್ನನ ಭಕ್ತರ ಈ ಪರದಾಟವನ್ನು ತಪ್ಪಿಸಲು ಶ್ರೀನಿವಾಸ ಕಲ್ಯಾಣ ದೆಹಲಿ, ಚೆನ್ನೈ,ಮುಂಬೈ ನಗರಗಳಿಗೆ ವರ್ಗಾವಣೆಯಾಗಿತ್ತು. ಇದೀಗ ಈ ಸಾಲಿಗೆ ಬೆಂಗಳೂರು ಸೇರ್ಪಡೆಯಾಗಿದೆ.

ಬೆಂಗಳೂರಿನ ಅರಮೆನೆ ಮೈದಾನದಲ್ಲಿ ಸುಮಾರು 2 ಲಕ್ಷ ಭಕ್ತರು 'ಶ್ರೀನಿವಾಸ ಕಲ್ಯಾಣ'ದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರಿಗೆ ತಿರುಪತಿ ಪ್ರಸಾದ ಲಡ್ಡುಗಳನ್ನು ವಿತರಿಸಲು ಆಯೋಜಕರು ನಿರ್ಧರಿಸಿದ್ದಾರೆ. ಶ್ರೀನಿವಾಸ ಕಲ್ಯಾಣಕ್ಕಾಗಿ ವಿಶೇಷ ಉತ್ಸವ ಮೂರ್ತಿಯ ತದ್ರೂಪವನ್ನು ಸೃಷ್ಟಿಸಲಾಗಿದ್ದು ವಿಶೇಷ ಪೂಜೆ, ಉತ್ಸವವನ್ನು ನಡೆಸಲಾಗುತ್ತದೆ.

ಶ್ರೀನಿವಾಸ ಕಲ್ಯಾಣದ ವಿಶೇಷ

ತೆಲುಗಿನ ಪ್ರಸಿದ್ಧ ಧಾರ್ಮಿಕ ಕವಿ ಅನ್ನಮಯ್ಯ ರಚಿಸಿದ 32 ಸಂಕೀರ್ತನೆಗಳನ್ನು 6-7 ಕಲಾವಿದರು ಪಠಿಸಲಿದ್ದಾರೆ. ತಿರುಪತಿಯಲ್ಲಿ ಧಾರ್ಮಿಕ ಪೂಜಾ ವಿಧಿಗಳನ್ನು ಆಚರಿಸುವ ಅರ್ಚಕರು, ವಿದ್ವಾಂಸರು ಇಲ್ಲೂ ಆ ವಿಧಿಗಳನ್ನು ನೆರೆವೇರಿಸಲಿದ್ದಾರೆ. ಭಾನುವಾರ ಸಂಜೆ 5 ಗಂಟೆಗೆ ಭಕ್ತಿಸಂಗೀತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಸಂಜೆ 6.05ಕ್ಕೆ ಕಲ್ಯಾಣೋತ್ಸವ ಆರಂಭವಾಗಲಿದೆ. ಒಟ್ಟು 3 ಗಂಟೆಗಳ ಕಾಲ ಕಲ್ಯಾಣೋತ್ಸವ ನಡೆಯಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಆಡಳಿತಾಧಿಕಾರಿ ಧರ್ಮಾರೆಡ್ಡಿ ತಿಳಿಸಿದರು.

ಉಚಿತ ಪಾಸ್‌ಗಳು

ಬೆಂಗಳೂರಿನ ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಭಕ್ತರು ಶ್ರೀನಿವಾಸ ಕಲ್ಯಾಣ ವಿಕ್ಷಿಸಲು ಉಚಿತ ಪಾಸ್‌ಗಳು ಲಭ್ಯವಾಗಲಿವೆ. ಮಲ್ಲೇಶ್ವರದ 16ನೇ ತಿರುವು; ಜಯನಗರ ಈಸ್ಟ್ ಎಂಡ್ ರಸ್ತೆಯ 4ನೇ ಟಿ ಬ್ಲಾಕ್; ವಿಜಯನಗರದ ಬೈಪಾಸ್ ರಸ್ತೆಯಲ್ಲಿರುವ ಕೋದಂಡರಾಮಸ್ವಾಮಿ ದೇವಸ್ಥಾನ; ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿರುವ ಶ್ರೀನಿವಾಸ ದೇವಸ್ಥಾನ; ಬಸವೇಶ್ವರ ನಗರ, ಅವಾನಿ ಶಂಕರ್; ಅಯ್ಯಪ್ಪ ಸ್ವಾಮಿ ದೇವಸ್ಥಾನ, ಜಾಲಹಳ್ಳಿ ಕ್ರಾಸ್ ತುಮಕೂರು ರಸ್ತೆ; ಜೆ.ಪಿ.ನಗರ, ತಿರುಮಲಗಿರಿ ಶ್ರೀನಿವಾಸ ದೇವಸ್ಥಾನ; 14ನೇ ತಿರುವು, ರಾಗಿಗುಡ್ಡ ದೇವಸ್ಥಾನ, 9ನೇ ಬ್ಲಾಕ್ ಜಯನಗರ; ಶ್ರೀ ಗಣೇಶ ದೇವಸ್ಥಾನ, ಕಲ್ಯಾಣ ಮಂಟಪ ಸ್ಟಾಪ್, ಕೋರಮಂಗಲ; ಶ್ರೀಬನಶಂಕರಿ ಅಮ್ಮನವರ ದೇವಸ್ಥಾನ, ಬನಶಂಕರಿ; ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನ, ಇಂದಿರಾನಗರ; ಚಿನ್ಮಯ ಮಿಷನ್, ಶ್ರೀಕೃಷ್ಣ ದೇವಸ್ಥಾನ ಇಂದಿರಾನಗರ; ಶ್ರೀಮಹಾಗಣಪತಿ ದೇವಸ್ಥಾನ, ದೇವಸಂದ್ರ, ಕೆ.ಆರ್.ಪುರ. ಈ ಸ್ಥಳಗಳಲ್ಲಿ ಉಚಿತ ಪಾಸ್‌ಗಳನ್ನು ಪಡೆಯಬಹುದು.

ದೂರವಾಣಿ ಸಂಖ್ಯೆಗಳು

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 2331 5361,2344 5432 ಮತ್ತು 3242 8926 ಗಳ ಮೂಲಕ ಸಂಪರ್ಕಿಸಬಹುದು. ವಾಹನಗಲ ನಿಲುಗಡೆಗಾಗಿ ಉತ್ಸವ ನಡೆಯುವ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.

ಕೊಸರು: ತಿಮ್ಮಪ್ಪನ ದರ್ಶನಕ್ಕಾಗಿ ತಿರುಪತಿಗೆ ಬರುವ ಕನ್ನಡಿಗರಿಗಾಗಿ ಒಂದು ಸಾವಿರ ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸುವುದಾಗಿ ಮುಜರಾಯಿ ಮತ್ತು ವಸತಿ ಸಚಿವ ಎಸ್.ಎನ್.ಕೃಷ್ಣಯ್ಯ್ಯ ಶೆಟ್ಟಿ ಪ್ರಮಾಣ ವಚನ ಸ್ವೀಕರಿಸುವಾಗ ವಾಗ್ದಾನ ಮಾಡಿದ್ದರು. ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯಲು ತಿರುಪತಿಗೆ ಬರುವ ಬಹಳಷ್ಟು ಕನ್ನಡಿಗರು ಇಂದಿಗೂ ವಸತಿಗಾಗಿ ಪರದಾಡುತ್ತಿದ್ದಾರೆ. ವಸತಿ ಸಚಿವರ ವಾಗ್ದಾನ ಶೀಘ್ರ ನೆರವೇರಲಿ ಎಂಬುದು ತಿಮ್ಮಪ್ಪನ ಭಕ್ತರ ಕಳಕಳಿಯ ಆಗ್ರಹ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more