ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯಲ್ಲಿ ನೀರೂರಿಸುವ ಮಾವುಮೇಳಕ್ಕೆ ಚಾಲನೆ

By Staff
|
Google Oneindia Kannada News

ಬೆಂಗಳೂರು, ಜೂ.12: ಇಂದಿನಿಂದ (ಜೂ.12) ಹಾಪ್‌ಕಾಮ್ಸ್ ಸಂಸ್ಥೆಯು ಗ್ರಾಹಕರು ಹಾಗೂ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಲಾಲ್‌ಬಾಗ್‌ನ ಹಾಪ್‌ಕಾಮ್ಸ್ ಕೇಂದ್ರ ಕಚೇರಿಯಲ್ಲಿ ಮಾವು ಮೇಳಕ್ಕೆ ಚಾಲನೆ ನೀಡಿದೆ.

ಈ ಸಲದ ಮಾವು ಮೇಳದಲ್ಲಿ 12 ವಿವಿಧ ತಳಿಗಳ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. 3 ಕೆ.ಜಿ ಹಾಗೂ 5 ಕೆ.ಜಿ ಮಾವಿನ ಹಣ್ಣಿನ ಬಾಕ್ಸ್‌ಗಳನ್ನು ಶೇ.10 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮುಂದಿನ 15 ದಿನಗಳ ಕಾಲ ಬೆಂಗಳೂರಿನ ವಿವಿಧ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾವು ಮೇಳ ನಡೆಯಲಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮತ್ತಷ್ಟು ದಿನಗಳ ಕಾಲ ಮಾವು ಮೇಳವನ್ನು ಮುಂದುವರಿಸಲು ಇಲಾಖೆ ನಿರ್ಧರಿಸಿದೆ.

ಇದರ ಜೊತೆಗೆ ಬೆಂಗಳೂರಿನ 6 ವಿವಿಧ ಕಡೆಗಳಲ್ಲಿ ಸಂಚಾರಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಹೈಕೋರ್ಟ್ ಬಳಿ, ಎಂಎಸ್ ಕಟ್ಟಡ, ಎಚ್‌ಎಸ್‌ಆರ್ ಬಡಾವಣೆ ಕೆಂಗೇರಿ ಉಪನಗರ ಹಾಗೂ ಜೆ.ಪಿ.ನಗರಗಳಲ್ಲಿ ಸಂಚಾರಿ ಮಾವು ಮೇಳ ನಡೆಯಲಿದೆ. ಮಾವು ಮೇಳದಲ್ಲಿ ಬಾದಾಮಿ, ರಸಪೂರಿ, ಮಲ್ಲಿಕಾ, ಬೆನಿಷನ್, ಮಲ್ಗೊವಾ, ಸೇಂದುರಾ, ದಸೇರಿ, ಕೇಸರ್, ಚೌಸಾ, ಆಲ್ಫಾನ್ಸೊ, ಕಾಲಾಪಾಡ್, ನೀಲಂ, ತೋತಾಪುರಿ ಹಾಗೂ ಬೆಂಗನಪಲ್ಲಿ ತಳಿಗಳನ್ನು ಸವಿಯಬಹುದು.

ಮಾವು ಮೇಳ ಎಲ್ಲೆಲ್ಲಿ?
ಕೋರಮಂಗಲ, ಕೋರಮಂಗಲ ಮುಖ್ಯ ರಸ್ತೆ, ಕೋರಮಂಗಲ ರಾಷ್ಟ್ರೀಯ ಕ್ರೀಡಾಂಗಣ, ಕೃಷ್ಣರಾವ್ ಪಾರ್ಕ್, ಬನಶಂಕರಿ ಬಿಡಿಎ ಸಮುಚ್ಚಯ, ರಾಮಕೃಷ್ಣಾಶ್ರಮ ಬಳಿ, ಸಜ್ಜನರಾವ್ ವೃತ್ತ, ವಿಜಯನಗರ, ರಾಜರಾಜೇಶ್ವರಿನಗರ, ಮಲ್ಲೇಶ್ವರ (ಲೇಡೀಸ್ ಕ್ಲಬ್), ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ, ಜಯನಗರ 9ನೇ ಬ್ಲಾಕ್, ಆರ್.ಟಿ.ನಗರ ಮುಖ್ಯರಸ್ತೆ, ಪರಪ್ಪನ ಅಗ್ರಹಾರ ಹಾಗೂ ಬಿನ್ನಿಮಿಲ್ ಬಳಿ.

(ದಟ್ಸ್‌ಕನ್ನಡ ವಾರ್ತೆ)
ಹಣ್ಣುಗಳ ರಾಜ ಬೆಂಗಳೂರಿಗೆ ಮತ್ತೆ ಬಂದ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X