ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಾತ್ಮಕ ಮುಜರಾಯಿ ಸುತ್ತೋಲೆ ವಾಪಸ್

By Staff
|
Google Oneindia Kannada News

ಬೆಂಗಳೂರು, ಜೂ.12 : ಸಾಕಷ್ಟು ವಿವಾದ ಸೃಷ್ಟಿಸಿದ ಮುಜರಾಯಿ ದೇವಾಲಯದಲ್ಲಿ ಸಿಎಂ ಹೆಸರಿನಲ್ಲಿ ನಿತ್ಯ ಅರ್ಚನೆ ಮಾಡುವ ಸುತ್ತೋಲೆಯನ್ನು ವಾಪಸ್ಸು ಪಡೆಯಲು ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ರಾಜ್ಯದ 36 ಸಾವಿರ ದೇವಾಲಯಗಳಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದ ಸರ್ಕಾರಿ ಆದೇಶ ಕೂಡಲೇ ಹಿಂಪಡೆಯಲು ಇಲಾಖೆಗೆ ಸೂಚಿಸಲಾಗಿದೆ.

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮುಖ್ಯಮಂತ್ರಿ ಮತ್ತು ಸರ್ಕಾರದ ಹೆಸರಿನಲ್ಲಿ ನಿತ್ಯ ಅರ್ಚನೆಗೆ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿತ್ತು. ಮುಜರಾಯಿ ಇಲಾಖೆ ಸಚಿವ ಕೃಷ್ಣಯ್ಯ ಶೆಟ್ಟಿ ಮುಖ್ಯಮಂತ್ರಿಗಳು ಮತ್ತು ಸರ್ಕಾರ ಹೆಸರಿನಲ್ಲಿ ಅರ್ಚನೆ ಸಲ್ಲಿಸುವುದನ್ನು ಸಮರ್ಥಿಸಿಕೊಂಡಿದ್ದರು. ಹಾಗೂ ಸುತ್ತೋಲೆಯನ್ನು ವಾಪಸ್ಸ ಪಡೆಯಲು ನಿರಾಕರಿಸಿದ್ದರು.

ಕಳೆದ ಸೋಮವಾರ ರಸಗೊಬ್ಬರ ಕೊರತೆಯಿಂದ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಮಾಯಕ ರೈತನ ಸಾವಿಗೆ ಕಾರಣವಾಗಿದ್ದ ಪೊಲೀಸರ ಗೋಲಿಬಾರ್ ಕುರಿತು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿಲಾಗಿದೆ.ಜೂ. 20 ರೊಳಗೆ ವರದಿ ನೀಡಲು ಸೂಚಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಸಗೊಬ್ಬರ ಅಭಾವ ಕಾಣದಿರಲು ದಿಟ್ಟ ಹೆಜ್ಜೆ ಇಡಲಾಗಿದ್ದು, ರಸಗೊಬ್ಬರ ಮಾರಾಟ ಮಾಡುವವರಿಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಇನ್ನು ಮುಂದೆ ರಸಗೊಬ್ಬರ ಮಾರಾಟ ಮಾಡುವವರು ಸ್ಥಳೀಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕೃಷಿ ಅಧಿಕಾರಗಳ ಪರವಾನಿಗೆ ಪಡೆದು ರಸಗೊಬ್ಬರ ಮಾರಾಟ ಮಾಡಬೇಕು.ಮಾರಾಟಗಾರರು ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಲಾಗಿದೆ.

ಅಷ್ಟೆ ಅಲ್ಲದೆ ಅಕ್ರಮ ಮಾರಾಟ ಮತ್ತು ಕಾಳ ಸಂತೆ ವ್ಯವಹಾರ ನಡೆಸಿದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲು ಮಾಡಿ ಸೂಕ್ತ ತನಿಖೆ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಅವ್ಯವಹಾರವನ್ನು ತಡೆಯಲು ವಿಶೇಷ ತನಿಖಾ ದಳವನ್ನು ರಚಿಸುವ ಮೂಲಕ ರೈತರಿಗೆ ಪೂರಕ ಎಲ್ಲ ಕೆಲಸವನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದವರ ಕುರಿತು ಸುಳಿವು ನೀಡಿದವರಿಗೆ 10,000 ರು.ಗಳ ಬಹುಮಾನ ಕೊಡುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ.

ಉಪಸಮಿತಿ ರಚನೆ
ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದದ್ದ ಮೌಲ್ಯಾಧಾರಿತ ಆಸ್ತಿ ತೆರಿಗೆ ಪದ್ಧತಿ(ಸಿವಿಎಸ್) ಪ್ರಕಾರ ತೆರಿಗೆ ಸಂಗ್ರಹಿಸುವ ಯೋಜನೆಗೆ ನೂತನ ಸರ್ಕಾರ ಚಾಲನೆ ನೀಡಿದ್ದು, ಈ ಕುರಿತು ಉಪಸಮಿತಿಯನ್ನು ರಚಿಸಲು ಮುಂದಾಗಿದೆ. ಉಪಸಮಿತಿ ಮೂರು ತಿಂಗಳೊಳಗೆ ಸಿವಿಎಸ್ ಪದ್ಧತಿ ಸಾಧಕ ಭಾದಕಗಳನ್ನು ಅವಲೋಕನ ಮಾಡಿ ನೀಡುವ ವರದಿ ಆಧರಿಸಿ ತೆರೆಗೆ ವಿಧಿಸುವ ಕುರಿತು ಕ್ರಮ ಕೈಗೊಳ್ಳಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಸ್ವಯಂಘೋಷಿತ ಆಸ್ತಿ ತೆರಿಗೆ ಬದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿರುವ ಬಂಡವಾಳ ಮೌಲ್ಯಧಾರಿತ ತೆರಿಗೆ (ಸಿವಿಎಸ್‌) ಪದ್ಧತಿಯನ್ನು ರದ್ದುಪಡಿಸಬೇಕೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಗ್ರಹಿಸಿತ್ತು.

ಆಸ್ತಿ ತೆರಿಗೆ ವಸೂಲಿ ಮಾಡುವಾಗ ಮೌಲ್ಯಾಧಾರಿತ ತೆರಿಗೆ (Capital Value System) ಜಾರಿಗೆ ತರಲು ಉದ್ದೇಶಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನು ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ ಸದಸ್ಯರು ತೀವ್ರವಾಗಿ ವಿರೋಧಿಸಿದ್ದರು. ಈ ಪದ್ಧತಿಯ ವಿರುದ್ದ ಪ್ರತಿಭಟನೆ ನಡೆಸಲು ಸಮಾಲೋಚನಾ ಸಭೆಯನ್ನು ನಡೆಸಲಾಗಿತ್ತು. ಈ ಎಲ್ಲದರ ಹಿನ್ನಲೆಯಲ್ಲಿ ಸಿವಿ ಎಸ್ ಪದ್ಧತಿ ಜಾರಿ ನೆನೆಗುದಿಗೆ ಬಿದ್ದಿತ್ತು.

ಮಾ.ಕಿಶನ್‌ರನ್ನು ಸನ್ಮಾನಿಸಿದ ಬಿಎಸ್‌ವೈ

ಕೇರಾಫ್ ಪುಟ್ ಪಾತ್ ಚಿತ್ರಕ್ಕೆ ರಾಷ್ಟ್ರ ಮಟ್ಟದ ಸ್ವರ್ಣಕಮಲ ಪ್ರಶಸ್ತಿ ಪಡೆದಿರುವ ಮಾ.ಕಿಶನ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಚಿವ ಸಂಪುಟ ಆರಂಭವಾಗುವುದಕ್ಕೂ ಮುನ್ನ ವಿಧಾನಸೌಧದಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಚಿಕ್ಕ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಕಿಶನ್ ಎಲ್ಲರಿಗೂ ಮಾದರಿ ಎಂದರು. ತನ್ನ ಚಿತ್ರದ ಮೂಲಕ ಕನ್ನಡವನ್ನು, ಕನ್ನಡ ಚಿತ್ರರಂಗವನ್ನು ಎತ್ತಿ ಹಿಡಿದಿದ್ದಕ್ಕೆ ಅಭಿನಂದಿಸಿದರು. ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿರುವ ಕಿಶನ್ ಉತ್ತಮ ತಂತ್ರಜ್ಞನಾಗಿ, ಕಲಾವಿದನಾಗಿ ಎತ್ತರೆತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.

(ದಟ್ಸ್ ಕನ್ನಡ ವಾರ್ತೆ)
ಯಡ್ಡಿ ಹೆಸರಿನಲ್ಲಿ ನಿತ್ಯ ಪೂಜೆ ಪುನಸ್ಕಾರಕ್ಕೆ ಸುತ್ತೋಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X