ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಣಗಳಿಗೆ ತಕ್ಕ ಉತ್ತರ ನೀಡಲು ಟೀಂ ಇಂಡಿಯಾ ಸಜ್ಜು

By Staff
|
Google Oneindia Kannada News

ಕಾನ್ಪುರ,ಏ.10: ಎರಡನೇ ಟೆಸ್ಟ್ ನಲ್ಲಿ ಹೀನಾಯ ಸೋಲು ಅನುಭವಿಸಿ ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ, ಮೂರನೇ ಟೆಸ್ಟ್ ನಲ್ಲಿ ಹರಿಣಗಳಿಗೆ ತಕ್ಕ ತಿರುಗೇಟು ನೀಡಲು ಸಜ್ಜಾಗಿದೆ.

ಅಹಮದಾಬಾದ್ ಟೆಸ್ಟ್ ನಲ್ಲಿ ಭಾರಿ ಅಂತರದಿಂದ ಸೋಲುಂಡು ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ನಿರಾಸೆ ಮೂಡಿಸಿರುವ ಕುಂಬ್ಳೆ ಪಡೆ, ಸರಣಿಯಲ್ಲಿ 1-0 ಅಂತರದಿಂದ ಹಿಂದುಳಿದಿದೆ. ಸರಣಿ ಉಳಿಸಿಕೊಳ್ಳಲು 3ನೇ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇರುವುದರಿಂದ ಉಭಯ ತಂಡಗಳಿಂದ ತೀವ್ರ ಹೋರಾಟ ನಿರೀಕ್ಷಿಸಲಾಗಿದೆ. ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಸರಣಿಯನ್ನು ಸಮವಾಗಿಸುತ್ತದೆ ಎಂದು ಇತ್ತೀಚೆಗಷ್ಟೇ ನಿವೃತ್ತರಾದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಶಾನ್ ಪೊಲಾಕ್ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ನಿಜವಾಗಿಸಿಕೊಳ್ಳಲು ಭಾರತ ದಕ್ಷಿಣ ಆಫ್ರಿಕಾಗೆ ತಕ್ಕ ಉತ್ತರ ನೀಡಬೇಕಾಗಿದೆ.

ಸ್ಪಿನ್ನರ್ ಗಳ ಪಿಚ್ ಎಂದೇ ಪರಿಗಣಿಸಲ್ಪಟ್ಟಿರುವ ಕಾನ್ಪುರ ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತೀಯ ತಂಡ ಮಾಡು ಇಲ್ಲವೇ ಮಡಿ ಪ್ರಯತ್ನ ನಡೆಸಬೇಕಾಗಿದೆ. ಇದೇ ಸಂದರ್ಭದಲ್ಲಿ ನಾಯಕ ಅನಿಲ್ ಕುಂಬ್ಳೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಭಾರತೀಯ ಪಾಳಯದಲ್ಲಿ ನಿರಾಸೆಯ ಕಾರ್ಮೊಡ ಕವಿದಿದೆ.

ಅನಿಲ್ ಕುಂಬ್ಳೆ ಗುರುವಾರ ದೈಹಿಕ ಪರೀಕ್ಷೆಗೆ ಒಳಗಾಗಿದ್ದು, ದೈಹಿಕ ಕ್ಷಮತೆ ಕುರಿತಂತೆ ಇನ್ನೆರಡು ದಿನ ಕಾಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ಎರಡು ಟೆಸ್ಟ್ ಪಂದ್ಯದಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದ ಭರವಸೆಯ ವೇಗದ ಬೌಲರ್ ಇಶಾಂತ್ ಶರ್ಮಾ 3ನೇ ಪಂದ್ಯಕ್ಕೆ ಆಯ್ಕೆಯಾಗಿದ್ದು, ಹರಣಿಗಳ ಅಬ್ಬರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಬಹುದು. ಗಾಯದಿಂದ ಬಳಲುತ್ತಿದ್ದ ಇಶಾಂತ್ ಶರ್ಮಾ ಪೂರ್ಣ ಫಿಟ್ ನೆಸ್ ನೊಂದಿಗೆ ಕಣಕ್ಕಿಳಿಯುತ್ತಿರುವುದು ತಂಡದಲ್ಲಿ ಹುಮ್ಮಸ್ಸು ಮೂಡಿಸಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X