ಬನ್ನಿ ಕನ್ನಡಿಗರೇ ಒಂದೆಡೆ ಸೇರೋಣ: ಬನವಾಸಿಗರ ಕರೆ
ಬೆಂಗಳೂರು,ಏ.10:ಕನ್ನಡ ಮತ್ತು ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಏ.13 ರಂದು ನಗರದ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಬನವಾಸಿ ಬಳಗ ಕನ್ನಡ ಕೂಟ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಕರ್ನಾಟಕದ ಮೂಲೆ ಮೂಲೆಯಿಂದ ಹಾಗೂ ವಿಶ್ವದ ಎಲ್ಲಡೆ ನೆಲೆಸಿರುವ ಕನ್ನಡಿಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕನ್ನಡದ ನೆಲ, ಜಲ ಕುರಿತು ಚರ್ಚೆ ನಡೆಸಲಾಗುವುದು. 'ನಮಗಾಗಿ ಕನ್ನಡ ನೆಲ ಏನೆಲ್ಲ ನೀಡಿದೆ. ನಾಡಿಗಾಗಿ ನಮ್ಮ ಕೊಡುಗೆ ಏನು, ಕನ್ನಡ, ಕನ್ನಡಕ್ಕಾಗಿ ನಾವೇನು ಮಾಡಿದ್ದೇವೆ.' ಈ ಘೋಷ ವಾಕ್ಯದೊಂದಿಗೆ ಕಾಯಕ್ರಮವನ್ನು ಏರ್ಪಡಿಸಲಾಗಿದೆ. ನಾಡು, ನುಡಿಗೆ ಸೇವೆ ಮಾಡಲು ಉತ್ಸುಕರಾದವರು ಬನವಾಸಿ ಬಳಗ ಏರ್ಪಡಿಸಿರುವ ಕನ್ನಡಿಗರ ಕೂಟದಲ್ಲಿ ಭಾಗವಹಿಸಬಹುದು.
ಸಮಯ: 11 ರಿಂದ 1 ಗಂಟೆ
ಸ್ಥಳ: ಮಿಥಿಕ್ ಸೊಸೈಟಿ, ಯವನಿಕಾ ಮುಂಭಾಗ, ನೃಪತುಂಗ ರಸ್ತೆ, ಬೆಂಗಳೂರು
ಹೆಚ್ಚಿನ ವಿವರಗಳಿಗಾಗಿ : [email protected] ಗೆ ಪತ್ರ ಬರೆಯಬಹುದು.
(ದಟ್ಸ್ ಕನ್ನಡಸಭೆಸಮಾರಂಭ)


Click it and Unblock the Notifications
