ಕಾಮೆಡ್-ಕೆ ಕೌನ್ಸೆಲಿಂಗ್ ನಲ್ಲಿ ಗೊಂದಲಮಯ
ಬೆಂಗಳೂರು,ಏ.10: ಇಂಜಿನಿಯರಿಂಗ್, ವೈದ್ಯ ಮತ್ತು ದಂತ ವೈದ್ಯ ಸ್ನಾತಕೋತ್ತರ ಪದವಿಗಳಿಗೆ ಸೀಟು ಪಡೆಯಬೇಕಾದರೆ ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ಕಾಮೆಡ್-ಕೆ ನಿಯಮ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕೌನ್ಸೆಲಿಂಗ್ ಕೇಂದ್ರವೊಂದರಲ್ಲಿ ಬುಧವಾರ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು.
ಅಸಲಿ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಕಾಮೆಡ್-ಕೆ ನಿಯಮ ಕುರಿತು ಮಾಹಿತಿ ಇಲ್ಲದೆ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳು, ಜಯನಗರದ ಎನ್ಎಂಕೆಆರ್ ವಿ ಕಾಲೇಜಿನಲ್ಲಿ ನಡೆಯುತ್ತಿದ್ದ ಕೌನ್ಸೆಲಿಂಗ್‌ಗೆ ಅಡ್ಡಿಪಡಿಸಿದರು. ಕಾಮೆಡ್-ಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ವಿಷಯವನ್ನು ಮನವರಿಕೆ ಮಾಡಿದ ನಂತರ ಪರಿಸ್ಥಿತಿ ಹತೋಟಿಗೆ ಬಂತು. ವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಸೀಟು ಪಡೆಯಲು ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ಕೆಲ ವಿದ್ಯಾರ್ಥಿಗಳು ಎರಡು ಕಾಲೇಜುಗಳಲ್ಲಿ ಸೀಟು ಪಡೆದು, ಒಂದನ್ನು ಮಾರಾಟ ಮಾಡುತ್ತಾರೆ ಎನ್ನುವ ಹಲವು ವಿದ್ಯಾರ್ಥಿಗಳ ದೂರಗೆ ಪ್ರತಿಕ್ರಿಯಿದ ಕಾಮೆಡ್-ಕೆ ಅಧಿಕಾರಿಗಳು ಇತರ ಕಾಲೇಜುಗಳಲ್ಲಿ ಸೀಟು ಕಾಯ್ದಿರಿಸಿರುವ ಕೆಲ ವಿದ್ಯಾಥಿಗಳು ಕೌನ್ಸಲಿಂಗ್ ಗೆ ಹಾಜರಾಗಿದ್ದಾರೆ, ನಿಯಮ ಉಲ್ಲಂಘಿಸಿದವರನ್ನು ಹೊರತುಪಡಿಸಿ, ಉಳಿದವರಿಗೆ ಏ.21 ರೊಳಗೆ ಮೂಲ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
