ಕೃಷ್ಣಗಿರಿಯಲ್ಲಿ 44 ಮಂದಿ ತಮಿಳರ ಬಂಧನ
ಕೃಷ್ಣಗಿರಿ, ಏ.3: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊಸೂರಿನ ಕೃಷ್ಣಗಿರಿಯಲ್ಲಿ ತಡೆಯುತ್ತಿದ್ದ 44 ಮಂದಿ ತಮಿಳರನ್ನು ಗುರುವಾರ ತಮಿಳು ಪೊಲೀಸರು ಬಂಧಿಸಿದ್ದಾರೆ. ವಿವಾದಿತ ಹೊಗೇನಕಲ್ ಜಲಯೋಜನೆಯನ್ನು ವಿರೋಧಿಸುತ್ತಿರುವ ಕನ್ನಡ ಪರ ಸಂಘಟನೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪ್ರತಿಭಟನೆಗೆ ಮುಂದಾಗಿದ್ದರು.
ಬೆಂಗಳೂರಿನಲ್ಲಿ ತಮಿಳು ಸಂಘಂ ಕಚೇರಿಯ ಮೇಲಿನ ದಾಳಿ ಹಾಗೂ ತಮಿಳು ಚಲನಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡುತ್ತಿರುವುದನ್ನು ಪ್ರತಿಭಟಿಸಿ ಕೆಎಸ್‌ಅರ್‌ಟಿಸಿ ಬಸ್‌ಗಳನ್ನು ತಡೆಯುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ತಮಿಳುನಾಡು ಮತ್ತ್ತು ಕರ್ನಾಟಕದ ಗಡಿಭಾಗವಾದ ಜುಜುವಾಡಿಯಲ್ಲಿ ಎಸ್‌ಟಿಎಫ್ ಮತ್ತು ವಿಶೇಷ ಪೊಲೀಸ್ ಪಡೆಗಳ ಭದ್ರತೆಯನ್ನು ಒದಗಿಸಲಾಗಿದೆ.
(ಏಜೆನ್ಸೀಸ್)












Click it and Unblock the Notifications