ಹೊಗೇನಕಲ್ ಯೋಜನೆ ವಿರುದ್ಧ ಕರ್ನಾಟಕ ಬಂದ್

Hogenakal fallsಬೆಂಗಳೂರು, ಏ.01 : ಹೊಗೇನಕಲ್‌ಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ನೀಡಿರುವ ಹೇಳಿಕೆ ವಿರುದ್ಧ ಏಪ್ರಿಲ್ 10ರಂದು ರಾಜ್ಯಾದ್ಯಂತ ಬಂದ್‌ಗೆ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ಕರೆ ನೀಡಿದೆ.

ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಧರಿಸಲು ಮಂಗಳವಾರ ಕರೆಯಲಾಗಿದ್ದ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಅಧ್ಯಕ್ಷ ಕೆ.ಆರ್.ಕುಮಾರ್ ಮತ್ತು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎನ್.ಮೂರ್ತಿ ಭಾಗವಹಿಸಿದ್ದರು.

ಹೊಗೇನಕಲ್‌ನಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಸಭೆ ನಡಿದಿದ್ದು, ರೈಲು, ಬಸ್ ತಡೆ ಮತ್ತು ಕರ್ನಾಟಕ ಬಂದ್ ನಡೆಸಬೇಕೆಂದು ತೀರ್ಮಾನಕ್ಕೆ ಬಂದಿವೆ.

ಹೊಗೇನಕಲ್ ಹೊಗೆಯ ಬಿಸಿ ರಾಜ್ಯ ರಾಜಕೀಯ ಪಕ್ಷಗಳಿಗೂ ತಾಗಿದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಸಿಪಿಎಂ ಹೊಗೇನಕಲ್ ಯೋಜನೆ ಮತ್ತು ಕರುಣಾನಿಧಿ ವಿವಾದಿತ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೇಳಿಕೆ ನೀಡಿವೆ.

ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಕುಡಿಯುವ ನೀರಿನ 'ಅಕ್ರಮ' ಯೋಜನೆಯನ್ನು ಕೇಂದ್ರ ಸರ್ಕಾರ ಕೂಡಲೆ ನಿಲ್ಲಿಸಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದ್ದರೆ, ಈ ವಿವಾದವನ್ನು ಕೇಂದ್ರ ಸಂಕುಚಿತ ಬುದ್ಧಿಯಿಂದ ನೋಡಬಾರದು ಮತ್ತು ಕರುಣಾನಿಧಿ ಕೀಳು ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ಕಿಡಿಕಾರಿದೆ.

BJP general secretary Ananth Kumarಅನಂತ್ ಕಿಡಿ : ಅಕಾಲಿಕ ಮಳೆಯಿಂದಾಗಿ ರಾಜ್ಯದ ರೈತರಿಗೆ ಕೇಂದ್ರದ ಸಾವಿರ ಕೋಟಿ ರು. ಪರಿಹಾರ ಒದಗಿಸಬೇಕೆಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಗೆ ಬಿಜೆಪಿ ನಿಯೋಗ ಮನವಿಪತ್ರ ಸಲ್ಲಿಸಿದ ನಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರು ಪ್ರಾಧಿಕಾರದ ಅಂತಿಮ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವಾಗಲೇ ಕರ್ನಾಟಕ ಪ್ರದೇಶದಲ್ಲಿಯೇ ಈ ಯೋಜನೆ ತಮಿಳುನಾಡು ಸರ್ಕಾರ ಕೈಗೊಂಡಿದೆ. ಕೇಂದ್ರ ಸರ್ಕಾರ ಕೂಡಲೆ ಮಧ್ಯ ಪ್ರವೇಶಿಸಿ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.

1500 ಕೋಟಿ ರು. ಯೋಜನೆಯ ಬಗ್ಗೆ ಪ್ರಾಧಿಕಾರಕ್ಕೂ ತಿಳಿಸಿಲ್ಲ ಮತ್ತು ಈ ಕುರಿತಂತೆ ರಾಜ್ಯ ಬರೆದ ಎರಡು ಪತ್ರಗಳನ್ನು ನಿರ್ಲಕ್ಷಿಸಿದೆ. ಅದಲ್ಲದೆ, ನೀರು ಸೌಕರ್ಯ ಸಚಿವಾಲಯ ಮತ್ತು ಕೇಂದ್ರ ನೀರು ಆಯೋಗದಿಂದ ಪರವಾನಗಿಯನ್ನೂ ಪಡೆದಿಲ್ಲ ಎಂದು ಅನಂತ್‌ಕುಮಾರ್ ಆರೋಪಿಸಿದರು. ಇಂಥ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಪ್ರಚೋದಕ ಹೇಳಿಕೆ ನೀಡುತ್ತಿರುವುದು ಮತ್ತು ಕೇಂದ್ರ ಸರ್ಕಾರ ಜಾಣಕಿವುಡನಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಲೇವಡಿ ಮಾಡಿದರು.

ತೀವ್ರಗೊಂಡ ಕನ್ನಡಪರ ಹೋರಾಟ : ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲೆಡೆಯಲ್ಲಿ ಗಡಿ, ಭಾಷೆಯೆನ್ನದೆ ಹೊಗೇನಕಲ್ ಯೋಜನೆ ವಿರುದ್ಧ ಹೋರಾಟ ತೀವ್ರಗೊಂಡಿದೆ. ಎಲ್ಲ ಜಿಲ್ಲೆಗಳಲ್ಲಿ ಕನ್ನಡಪರ ಹೋರಾಟಗಾರರು, ಕನ್ನಡಪ್ರೇಮಿಗಳು ತಮಿಳುನಾಡು ಸರ್ಕಾರದ ಹಠಮಾರಿ ಧೋರಣೆಯ ವಿರುದ್ಧ ದಂಗೆಯೆದ್ದಿದ್ದಾರೆ. ಚಾಮರಾಜನಗರ, ಬೆಳಗಾವಿ, ಕೊಪ್ಪಳ, ದಾವಣಗೆರೆ, ಮೈಸೂರು ಮುಂತಾದೆಡೆಗಳಲ್ಲಿ ಕರುಣಾನಿಧಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮ್ಮಕ್ಕು ನೀಡಿದ್ದಕ್ಕೆ ಕರುಣಾನಿಧಿ ಕೂಡಲೆ ಕನ್ನಡಿಗರ ಕ್ಷಮೆ ಕೇಳಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಈ ನಡುವೆ, ಹೊಗೇನಕಲ್ ವಿಷಯಕ್ಕೆ ಸಂಬಂಧಿಸಿದಂತೆ ತಟಸ್ಥ ನಿಲುವನ್ನು ತಳೆಯಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಹೇಳಿಕೆಗೆ ವಿರುದ್ಧವಾಗಿ ರಾಜ್ಯ ಕಾಂಗ್ರೆಸ್ ಕರುಣಾನಿಧಿ ವಿರುದ್ಧ ಹರಿಹಾಯ್ದಿದೆ. ಕರುಣಾನಿಧಿ ಅತ್ಯಂತ ಕೀಳು ರಾಜಕೀಯಕ್ಕೆ ಇಳಿದಿದ್ದಾರೆ. ಕರುಣಾನಿಧಿ ಹೇಳಿಕೆಯಿಂದ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಗಿ ಭದ್ರತೆ : ಸೋಮವಾರ ಬೆಂಗಳೂರಿನಲ್ಲಿ ತಮಿಳು ಚಿತ್ರ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳ ಮೇಲ ಆಕ್ರಮಣ ನಡೆಸಿ, ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರದರ್ಶನಗಳನ್ನು ನಿಲ್ಲಿಸಿದ್ದರು. ಕೆಲವೆಡೆ ಗಾಜಿನ ಕಿಟಕಿಗಳನ್ನು ಕೂಡ ಪುಡಿಪುಡಿ ಮಾಡಲಾಗಿದೆ. ತಮಿಳು ಸಂಘಂ ಕಚೇರಿಯನ್ನೂ ಧ್ವಂಸ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ, ತಮಿಳು ಚಿತ್ರ ಪ್ರದರ್ಶಿಸುತ್ತಿರುವ ಎಲ್ಲ ಚಿತ್ರಮಂದಿರಗಳಿಗೆ ಮತ್ತು ತಮಿಳು ಸಂಘಂ ಕಚೇರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ನೀಲಂ ಅಚ್ಯುತರಾವ್ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ಪ್ರಕರಣ ನ್ಯಾಯಾಲಯದ ಮುಂದಿರುವುದರಿಂದ ಹೊಗೇನಕಲ್ ಯೋಜನೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರಬರೆದಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು
ಏ.4ರಂದು ತಮಿಳು ಚಿತ್ರೋದ್ಯಮ ಭಾರೀ ಪ್ರತಿಭಟನೆ
ಕರುಣಾನಿಧಿ ಹೇಳಿಕೆಗೆ ರಕ್ಷಣಾ ವೇದಿಕೆ ಆಕ್ರೋಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+