ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಲ್ ಸ್ಟಾರ್ ಉಪ್ಪಿ ಜತೆಗೂಡಿದ ದೀಪಿಕಾ

By Staff
|
Google Oneindia Kannada News

mallya and deepikaಬೆಂಗಳೂರು, ಏ.1: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಆದರೆ ಇದು ಯಾವ ಸಿನಿಮಾಕ್ಕಾಗೂ ಅಲ್ಲ. ಮದ್ಯ ದೊರೆ ಮಲ್ಯರ ಐಪಿಎಲ್ ಕ್ರಿಕೆಟ್ ತಂಡದ ಪ್ರಚಾರಕ್ಕಾಗಿ ಇಬ್ಬರು ಮಂಗಳೂರು ಮೂಲದ ಪ್ರತಿಭಾವಂತರು ಮತ್ತೆ ಒಂದೆಡೆ ಕಾಣಸಿಗಲಿದ್ದಾರೆ. ರಾಹುಲ್ ಹಾಗೂ ಅನಿಲ್ ಕುಂಬ್ಳೆ ಪಡೆಗೆ ಇನ್ನಷ್ಟು ಗ್ಲಾಮರ್ ಸೇರಿಸಲು ಲಕ್ಕಿ ಸ್ಟಾರ್ ರಮ್ಯಾ ಕೂಡ ಜತೆಗೂಡಿದ್ದಾರೆ.

ತಂಡದ ಘೋಷಣೆ ಸಮಯದಲ್ಲಿ ಇತರ ಎಲ್ಲಾ ತಂಡಗಳಿಗಿಂತ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಹೆಚ್ಚು ಗ್ಲಾಮರಸ್ ಆಗಿರುತ್ತದೆ ಎಂದು ವಿಜಯ್ ಮಲ್ಯ ಹೇಳಿದ್ದರು. ಅದರಂತೆ, ಬಾಲಿವುಡ್ ನ ಈಗಿನ ಹಾಟ್ ಸ್ಟಾರ್ ದೀಪಿಕಾಳನ್ನು ತಂಡದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಂಡದ ಆಟಗಾರರ ಜತೆ ವಿಡಿಯೋ ಚಿತ್ರೀಕರಣ ಮೊದಲ ಹಂತ ಮುಗಿದಿದೆ. ಇನ್ನು ಉಪ್ಪಿ, ರಮ್ಯಾ ಹಾಗೂ ದೀಪಿಕಾ ಸೇರಿದಂತೆ ರಾಹುಲ್ ಪಡೆ ತಂಡದ ಪ್ರಚಾರಕ್ಕಾಗಿ ವಿಡಿಯೋ ಚಿತ್ರೀಕರಣ ಮುಗಿಸಬೇಕಿದೆ. ಇನ್ನೊಂದು ಸುದ್ದಿಯಂತೆ ಗ್ಲಾಮರ್ ಗೊಂಬೆ ಕತ್ರೀನಾ ಕೈಫ್ ಕೂಡ ಈ ಪ್ರಚಾರ ವಿಡಿಯೋದಲ್ಲಿ ರಾಹುಲ್ ಜತೆ ಕಾಣಿಸಲಿದ್ದಾರಂತೆ.

ಉಪ್ಪಿ ಸದ್ಯಕ್ಕೆ ತೆಲುಗು ತಮಿಳು ಹೀರೋಗಳ ಕೈಲಿ ಒದೆ ತಿನ್ನಲು ಅರ್ಥಾತ್ ವಿಲನ್ ಆಗಿ ನಟಿಸಲು ಹೋಗಿದ್ದಾರೆ. ಲಕ್ಕಿ ಸ್ಟಾರ್ ರಮ್ಯಾ ಸದ್ಯಕ್ಕೆ ಸುದೀಪ್ ಜತೆ ಸದ್ದಿಲ್ಲದೇ 'ಮುಸ್ಸಂಜೆಯ ಮಾತು' ಮುಗಿಸಿ, ಗೋಲ್ಡನ್ ಸ್ಟಾರ್ ಗಣೇಶನ ಜತೆ 'ಬೊಂಬಾಟ್' ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ದೀಪಿಕಾ ರಣಬೀರ್ ಫ್ಯಾಷನ್ ವೇದಿಕೆಯಲ್ಲಿ ನಲಿದಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಜತೆ ಹೊಸ ಸಿನಿಮಾಕ್ಕೆ ಬೇರೆ ಸಹಿ ಹಾಕಿದ್ದಾರೆ. ಇವರೆಲ್ಲರ ಕಾಲ್ ಶೀಟ್ ಪಡೆದು ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಲ್ ತಂಡದ ಪ್ರಚಾರ ವಿಡಿಯೋ ರೂಪಿಸಲು ತಂಡದ ಸಿಇಒ ಚಾರು ಶರ್ಮ ಹೆಣಗುತ್ತಿದ್ದಾರೆ.

ಕಿಂಗ್ ಫಿಷರ್ ಸ್ವಿಮ್ ಸೂಟ್ ಕ್ಯಾಲೆಂಡರ್ ನಿಂದ ಹಿಡಿದು ವಿವಿಧ ಉತ್ಪನ್ನಗಳಿಗೆ ರೂಪದರ್ಶಿಯಾಗಿದ್ದ ದೀಪಿಕಾ, ಮಲ್ಯರ ತಂಡಕ್ಕೆ ನಿರಾಶೆ ಮಾಡುವ ಸಾಧ್ಯತೆಯಿಲ್ಲ. ಇನ್ನೂ ನಮ್ಮ ಉಪ್ಪಿ ಹಾಗೂ ರಮ್ಯಾ ಈ ಹೊಸ ಅವಕಾಶದ ಬಗ್ಗೆ ಉತ್ಸುಕರಾಗಿದ್ದಾರೆ. ಈ ವಿಡಿಯೋ ಪ್ರಚಾರಕ್ಕೆ ಬೆಂಗಳೂರು ಹುಡುಗ ಸಂದೀಪ್ ಚೌಟ ಸಂಗೀತ ನೀಡಲಿದ್ದಾರೆ. ಸಂಜಯ್ ಗುಪ್ತ ನಿರ್ದೇಶನ ಮಾಡಲಿದ್ದಾರೆ.

ಇತರ ಎದುರಾಳಿಗಳ ಪಾಡು: ಚೆನ್ನೈ ನ ಸೂಪರ್ ಕಿಂಗ್ಸ್ ತಂಡಕ್ಕೆ ನಟ ವಿಜಯ್ ಹಾಗೂ ಚೆಲುವೆ ನಯನ್ ತಾರಾ ಪ್ರಚಾರಕ್ಕಾಗಿ ನಿಂತಿದ್ದಾರೆ. ದೆಹಲಿ ಡೆರ್ ಡೆವಿಲ್ಸ್ ತಂಡಕ್ಕೆ ನಟ ಅಕ್ಷಯ್ ಕುಮಾರ್ ಬೆಂಗಾವಲಾಗಿ ನಿಂತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ ನ ಶಾರುಖ್ ಖಾನ್ ಸಂಗೀತ ಪ್ರಚಾರಕ್ಕೆ ಬಪ್ಪಿ ಲಹರಿಯ ಮೊರೆ ಹೋಗಿದ್ದಾರೆ. ಬೆಂಗಾಲಿ ಬೆಡಗಿಯರಾದ ರಾಣಿಮುಖರ್ಜಿ ಹಾಗೂ ಬಿಪಾಶ ಬಸು ತಂಡದ ಪ್ರಚಾರಕ್ಕೆ ನಿಂತಿದ್ದಾರೆ.

(ದಟ್ಸ್‌ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X