ಸಿವಿಎಸ್ ತೆರಿಗೆಗೆ ತಡೆ : ರಾಜ್ಯಪಾಲರ ಘೋಷಣೆ

ಬೆಂಗಳೂರು, ಏ.1: ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಮೌಲ್ಯಾಧಾರಿತ ಆಸ್ತಿ ತೆರಿಗೆ ಪದ್ಧತಿ(ಸಿವಿಎಸ್) ಪ್ರಕಾರ ತೆರಿಗೆ ಸಂಗ್ರಹಿಸುವ ಯೋಜನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ರಾಜ್ಯಪಾಲರ ಆಪ್ತ ಸಲಹೆಗಾರರು ತಿಳಿಸಿದ್ದಾರೆ.

ಏಪ್ರಿಲ್ 1ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪಿಯಲ್ಲಿ ಸಿವಿಎಸ್ ಕ್ರಮ ಜಾರಿಗೊಳಿಸಿ ತೆರಿಗೆ ಸಂಗ್ರಹ ಮಾಡಲು ವ್ಯವಸ್ಥೆ ರೂಪಿಸಲಾಗಿತ್ತು. ಆದರೆ ಈ ಬಗ್ಗೆ ಅನೇಕ ಸಂಘ ಸಂಸ್ಥೆಗಳಿಂದ, ರಾಜಕೀಯ ಪಕ್ಷಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಸರ್ಕಾರ ಜಾರಿಗೆ ಬರುವವರೆಗೆ ಸಿವಿಎಸ್ ಅನ್ನು ಮುಂದೂಡಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಸರ್ಕಾರ ನಿರ್ಧರಿಸಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಎಫ್‌ಕೆಸಿಸಿಐ) ಹಾಗೂ ವಿವಿಧ ಸಂಘ ಸಂಸ್ಥೆಗಳು ಸಿವಿಎಸ್ ಪದ್ಧತಿಯ ಅನ್ವಯ ತೆರಿಗೆ ಸಾರ್ವಜನಿಕರಿಗೆ ದುಬಾರಿಯಾಗುತ್ತದೆ. ಇದನ್ನು ತಡೆ ಹಿಡಿಯುವುದು ಸೂಕ್ತ ಎಂದು ಸರ್ಕಾರಕ್ಕೆ ಒತ್ತಡ ಹೇರಿದ್ದವು. ಆದರೆ ಹಳೆಯ ತೆರಿಗೆ ವ್ಯವಸ್ಥೆ(ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ)ಯಡಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಕೇಂದ್ರಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ. ಮೇ ತಿಂಗಳ ಅಂತ್ಯದವರೆಗೂ ದಂಡ ಇಲ್ಲದೇ ತೆರಿಗೆ ಪಾವತಿಸಬಹುದಾಗಿದೆ.

ಗೊಂದಲ ನಿವಾರಣೆಯಾಗಿಲ್ಲ : ಈ ಹಿಂದೆ ನಗರಸಭೆ ಮತ್ತು ಪುರಸಭೆಗಳಿಗೆ ಸೇರಿದವರು ಸಿವಿಎಸ್ ಕ್ರಮದಂತೆ ತೆರಿಗೆ ಪಾವತಿಸುತ್ತಿದ್ದರು. ಆ ನಿವಾಸಿಗಳು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಂದಮೇಲೆಯೂ ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನೇ ಮುಂದುವರೆಸಲಾಗಿದೆ. ಆದರೆ ಏ.1ರಿಂದ ಸಿವಿಎಸ್ ಕ್ರಮದಂತೆ ತೆರಿಗೆ ಕಟ್ಟಬೇಕಿದ್ದ ನಿವಾಸಿಗಳು ಮಾತ್ರ ಮುಂದಿನ ಅಧಿಸೂಚನೆ ಹೊರಡುವವರೆಗೂ ನಿರಾಳವಾಗಿರಬಹುದು. ಸ್ವಯಂಘೋಷಿತ ಆಸ್ತಿ ತೆರಿಗೆ ಮಾದರಿಯ ವ್ಯವಸ್ಥೆಯನ್ನು ಪಾಲಿಸಬಹುದು.

ಸರ್ಕಾರದ ನಿರ್ಧಾರಕ್ಕೆ ಸ್ವಾಗತ : ಸಿವಿಎಸ್ ಪದ್ಧತಿಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿಯಾದರೂ ಮುಂದೂಡಿರುವುದನ್ನು ವಿವಿಧ ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು ಹೃತ್ಪೂರ್ವಕವಾಗಿ ಸ್ವಾಗತಿಸಿವೆ. ರಾಜ್ಯಪಾಲರ ಸಮಯೋಚಿನ ನಿರ್ಧಾರದಿಂದ ಬೆಂಗಳೂರಿನ ಲಕ್ಷಾಂತರ ನಿವಾಸಿಗಳು ನಿರಾಳರಾಗಿದ್ದಾರೆ. ಹೊಸ ಸರ್ಕಾರ ರಚನೆಯಾದ ಮೇಲೆ ನಿವಾಸಿಗಳೊಂದಿಗೆ ಚರ್ಚಿಸಿ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರಬಹುದು ಎಂದು ಎಫ್‌ಕೆಸಿಸಿಐನ ಎಸ್.ಎಸ್.ಪಾಟೀಲ್ ಹೇಳಿದ್ದಾರೆ.

ರಾಮೇಶ್ವರ್ ಠಾಕೂರ್ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಜನಪ್ರಿಯ ಸರ್ಕಾರವಿಲ್ಲದ ಸಮಯದಲ್ಲಿ ಇಂಥ ಮಹತ್ವದ ನಿರ್ಧಾರ ತೆಗೆದುಕೊಳ್ಳಬಾರದು, ಜನರನ್ನು ಸಂಕಷ್ಟಕ್ಕೆ ನೂಕಬಾರದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ಪೂರಕ ಓದಿಗೆ
ಮೌಲ್ಯಾಧಾರಿತ ಆಸ್ತಿತೆರಿಗೆ ವಿರುದ್ಧ ಎಫ್‌ಕೆಸಿಸಿಐ ಪ್ರತಿಭಟನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+