ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಪೆಟ್ರೋಲು ಬಂಕುಗಳಿಗೆ ಬೀಗ

By Staff
|
Google Oneindia Kannada News

ಮುಂಬೈ, ಮಾ. 26 : ಭಾರತ ಖಾಸಗಿ ವಲಯದಲ್ಲಿ ಅತ್ಯಂತ ದೊಡ್ಡ ಕಂಪನಿ ಎನಿಸಿರುವ ರಿಲಯನ್ಸ್, ತನ್ನ ಎಲ್ಲಾ ಪೆಟ್ರೋಲ್ ಬಂಕುಗಳನ್ನು ಮುಚ್ಚಲು ನಿರ್ಧರಿಸಿದೆ. ಏರುತ್ತಿರುವ ಕಚ್ಚಾ ತೈಲದ ಬೆಲೆಗಳು ಹಾಗೂ ರಿಯಾಯಿತಿ ವಿನಾಯಿತಿಗಳನ್ನು ನೀಡದ ಸರಕಾರದ ಗಡಸು ನಿಲುವೇ ಕಂಪನಿಯ ಈ ನಿರ್ಧಾರಕ್ಕೆ ಕಾರಣ ಎಂದು ಭಾವಿಸಲಾಗಿದೆ. ದೇಶದಾದ್ಯಂತವಿರುವ ಒಟ್ಟು 1400ಪೆಟ್ರೊಲ್ ಬಂಕ್ ಗಳಲ್ಲಿ 900 ಬಂಕ್ ಗಳನ್ನು ಸದ್ಯದಲ್ಲೇ ಮುಚ್ಚಲಿದೆ. ಇದರಿಂದ ಸುಮಾರು 55, 000 ಜನ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ.

ಪೆಟ್ರೋಲ್ ಮಾರಾಟ ಕಂಪನಿಗಳಿಗೆ ಅಳಿವು ಉಳಿವು ಪ್ರಶ್ನೆಯಾಗಿರುವ ಈ ದಿವಸಗಳಲ್ಲಿ ತಮ್ಮ ಕಂಪನಿಗೆ ಸರಕಾರದ ವತಿಯಿಂದ ಯಾವುದೇ ಪ್ರೋತ್ಸಾಹಕರ ಯೋಜನೆಗಳು ಲಭ್ಯವಾಗಿಲ್ಲ. ಆದುದರಿಂದ ದೇಶದಲ್ಲಿರುವ ಎಲ್ಲ ಪೆಟ್ರೋಲ್ ಚಿಲ್ಲರೆ ಮಾರಾಟ ಮಳಿಗೆಗಳ ಬಾಗಿಲು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಕಂಪನಿಯ ವಕ್ತಾರರೊಬ್ಬರು ಹೇಳಿದ್ದಾರೆ.

ರಿಲಯನ್ಸ್ ದಾಸ್ತಾನು ಮಳಿಗೆಯಿಂದ ಪೆಟ್ರೋಲು ಬಂಕುಗಳಿಗೆ ತೈಲ ರವಾನೆ ಮಾಡುವುದು ದುಸ್ತರವಾಗಿದೆ. ಅಪಾರ ವೆಚ್ಚ ತಗಲುತ್ತಿರುವ ಈ ವ್ಯಾಪಾರದಿಂದ ಕಂಪನಿಗೆ ಗಳಿಕೆಯಿಲ್ಲದಂತಾಗಿದೆ. ಮೂರು ಕಾಸು ಪ್ರಯೋಜನವಿಲ್ಲದ ಈ ದಂಧೆಗಿಂತ ಬಂಕುಗಳನ್ನು ಮುಚ್ಚುವುದು ಸೂಕ್ತ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ರಿಲಯನ್ಸ್ ಪೆಟ್ರೋಲು ಬಂಕುಗಳಲ್ಲಿ ದಾಸ್ತಾನು ತೀರುವವರೆಗೆ ಮಾತ್ರ ಮಾರಾಟ ಇರುತ್ತದೆ. ಬಂಕುಗಳಿಗೆ ಮತ್ತೆ ತೈಲ ಸರಬರಾಜು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

( ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X