ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐನ ಮಾಜಿ ಅಧ್ಯಕ್ಷ ದಾಲ್ಮಿಯಾ ಬಂಧನ

By Staff
|
Google Oneindia Kannada News

Jagmohan Dalmiya arrested in Mumbaiಮುಂಬೈ, ಮಾ.26: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರನ್ನು ಮುಂಬೈನ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬುಧವಾರ ಬಿಡುಗಡೆ ಮಾಡಿದ್ದಾರೆ. 1996ರ ವಿಶ್ವಕಪ್‌ಗೆ ಸಂಬಂಧಿಸಿದಂತೆ ಬಿಸಿಸಿಐನ 2.9ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಮೊಕದ್ದಮೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಮುಂಬೈನ ಅಪರಾಧ ವಿಭಾಗದ ಪೊಲೀಸರು ವಂಚನೆ(ಭಾರತ ದಂಡ ಸಂಹಿತೆ 420 ಪ್ರಕಾರ),ನಂಬಿಕೆ ದ್ರೋಹ ಎಸಗಿದ(ಐಪಿಸಿ ಸೆಕ್ಷನ್ 408ಪ್ರಕಾರ) ಹಾಗೂ ದುಡ್ಡು ಲಪಟಾಯಿಸಲು ಒಳಸಂಚು ರೂಪಿಸಿದ್ದಕ್ಕೆ(ಐಪಿಸಿ ಸೆಕ್ಷನ್120B ಪ್ರಕಾರ) ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಅವರ ಕಾರ್ಯದರ್ಶಿ ಕೆ.ಎಂ. ಚೌದರಿ ಹಾಗೂ ಗೌತಮ್ ದತ್ತಾ ಎಂಬುವರ ಮೇಲೂ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರ ಕೋರಿಕೆ ಮೇರೆಗೆ ದಾಲ್ಮಿಯಾ ಅವರನ್ನು ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಾಯಿತು. ದಾಲ್ಮಿಯಾ ಮೇಲಿನ ಆರೋಪವನ್ನು ಆಲಿಸಿದ ನ್ಯಾಯಾಧೀಶರು ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ದಾಲ್ಮಿಯಾ ತನ್ನ ಪ್ರತಿಸ್ಪರ್ಧಿಗಳು ಹಳೆ ಆಟ ಮುಂದುವರಿಸಿದ್ದಾರೆ ಅಷ್ಟೇ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದರು.

1996ರ ವಿಶ್ವಕಪ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಭೋವಾನಿಪುರ್ ಶಾಖೆಯಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ ಖಾತೆ (ಸಂಖ್ಯೆ 1223) ಬಿಸಿಸಿಐ ತೆರೆದಿತ್ತು. ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ದಾಲ್ಮಿಯಾ ಈ ಖಾತೆಯನ್ನು ನಿರ್ವಹಿಸುತ್ತಿದ್ದರು. ಈ ಖಾತೆಯಲ್ಲಿನ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ದಾಲ್ಮಿಯಾ ಅವರನ್ನು ಬಿಸಿಸಿಐನಿಂದ ಹೊರದೂಡಿದ್ದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X