ಗುರುವಾರ ಪಿ.ಸಾಯಿನಾಥ್ ಅವರ ಉಪನ್ಯಾಸ

P. Sainathಬೆಂಗಳೂರು, ಮಾ. 24 : ಮ್ಯಾಗ್‌ಸೆಸೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರ, ಪತ್ರಕರ್ತ ಪಿ. ಸಾಯಿನಾಥ್ ಬೆಂಗಳೂರಿಗೆ ಬರುತ್ತಿದ್ದಾರೆ. ಈ ಭೇಟಿಯಲ್ಲಿ ಪತ್ರಿಕೋದ್ಯಮ ಕುರಿತ ಅವರ ಒಂದು ಮಾಧ್ಯಮ ಉಪನ್ಯಾಸ ಕಾರ್ಯಕ್ರಮ ಏರ್ಪಾಟಾಗಿದೆ. ಉಪನ್ಯಾಸ ಕಾರ್ಯಕ್ರಮವನ್ನು ರೂಪಿಸಿರುವವರು ಸಂಸ್ಕೃತಿ ವಾರಪತ್ರಿಕೆ "ಜನಶಕ್ತಿ". ಸಾಯಿನಾಥ್ ಅವರು ಮಾಧ್ಯಮ ಕುರಿತು ಮಾತನಾಡುವವರಲ್ಲದೆ ಜನಶಕ್ತಿ ಪತ್ರಿಕೆಯ ವೆಬ್‌ಸೈಟ್ ಅನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಿದ್ದಾರೆ.

ಸಾಯಿನಾಥ್ ಅವರು ಕರ್ನಾಟಕದಲ್ಲಿ ವಿಸ್ತೃತವಾಗಿ ಪ್ರವಾಸ ಮಾಡಿದ್ದಾರೆ. ಅವರಿಗೆ ಗ್ರಾಮೀಣ ಕರ್ನಾಟಕದ ನಿಕಟ ಪರಿಚಯವಿದೆ. ರಾಜ್ಯದ ದಲಿತರ ಬದುಕು ಮತ್ತು ವಿಚಾರಗಳ ಬಗೆಗೆ ಹಾಗೂ ಇಲ್ಲಿನ ಕೃಷಿ ವಲಯ ಕುರಿತು ಅವರು ಅನೇಕ ವರದಿಗಳನ್ನು ಸಿದ್ಧಪಡಿಸಿದ್ದಾರೆ. ಪ್ರಸಾರ ಮಾಧ್ಯಮಗಳು ವಸ್ತುನಿಷ್ಠವಾಗಿರಬೇಕು, ಅರ್ಥವಂತಿಕೆಯನ್ನು ವೃದ್ಧಿಸಿಕೊಳ್ಳಬೇಕು ಎಂಬುದು ಅವರ ಮಹತ್ವಾಕಾಂಕ್ಷೆ.

ದಿನಾಂಕ : 27 ಮಾರ್ಚ್ 2008, ಗುರುವಾರ ಸಂಜೆ 4 ಗಂಟೆ
ಸ್ಥಳ : ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜ್ ಬೆಂಗಳೂರು.

(25ರ ಮಂಗಳವಾರ ಸಾಯಿನಾಥ್ ಹೆಗ್ಗೋಡಿನ ನೀನಾಸಂನಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿದ್ದಾರೆ)

ಹೆಚ್ಚಿನ ವಿವರಗಳಿಗೆ : ಎಸ್. ವೈ.ಗುರುಶಾಂತ್ (94482 30114)

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+