ಐಪಿಲ್ :ಬೆಂಗಳೂರು ತಂಡದ ಲಾಂಛನ ಅನಾವರಣ
ಬೆಂಗಳೂರು, ಮಾ.13: ಇಂಡಿಯನ್ ಪ್ರೀಮಿಯರ್ ಲೀಗ್ನ ಬೆಂಗಳೂರು ತಂಡದ ಒಡೆಯವಿಜಯಮಲ್ಯ ಅವರ 'ರಾಯಲ್ ಚಾಲೆಂಜರ್ಸ್'ನ ಲಾಂಛನವನ್ನು ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಲಿದ್ದಾರೆ ಎಂದು ವಿಜಯಮಲ್ಯ ತಿಳಿಸಿದರು. ಲಾಂಛನ ಬಿಡುಗಡೆಗೂ ಮುನ್ನ ಮಾತನಾಡಿದ ವೇಗದ ಬೌಲರ್ ಜಹೀರ್ ಖಾನ್ ನಾವಿನ್ನೂ ಅಂತರಾಷ್ಟ್ರೀಯ ಪಂದ್ಯವಾಡಲು ಫಿಟ್ ಆಗಿಲ್ಲ. ಮುಂಬರುವ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್ ಆಗುತ್ತೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಲ್ಯ ಅವರು ತಮ್ಮ ತಂಡದ ಕೆಂಪು ಹಾಗೂ ಕಿತ್ತಳೆ ಬಣ್ಣದ ಉಡುಪನ್ನು ಅನಾವರಣಗೊಳಿಸಿದರು. ರಾಯಲ್ ಚಾಂಲೆಂಜರ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್, ಸಲಹೆಗಾರ ಮಾರ್ಟಿನ್ ಕ್ರೋವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರು ಶರ್ಮ ಹಾಗೂ ತಂಡದ ಆಟಗಾರರು ವರ್ಣರಂಜಿತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಯಲ್ ಚಾಲೆಂಜರ್ಸ್ನಲ್ಲಿ: ರಾಹುಲ್ ದ್ರಾವಿಡ್(ನಾಯಕ), ಶಿವನಾರಾಯನ ಚಂದ್ರಪಾಲ್, ಮಿಸ್ಬಾ ಉಲ್-ಹಕ್, ರೊಸ್ ಟೇಲರ್, ವಾಸೀಂ ಜಾಫರ್, ವಿರಾಟ್ ಕೋಹ್ಲಿ, ಜಗದೀಶ್, ಅರುಣ್ ಕುಮಾರ್, ಭರತ್ ಚಿಪ್ಲಿ, ಜಹೀರ್ ಖಾನ್, ನಾಥನ್ ಬ್ರೇಕನ್, ಬಾಲಚಂದ್ರ, ಅಖಿಲ್, ಅನಿಲ್ ಕುಂಬ್ಳೆ, ಸುನಿಲ್ ಜೋಷಿ, ಅಬ್ದುಲ್ ರಜಾಕ್, ಕೆ.ಪಿ.ಅಪ್ಪಣ್ಣ, ಪ್ರವೀಣ್ ಕುಮಾರ್, ಜಾಕ್ ಕಾಲೀಸ್, ಕೆಮರಾನ್ ವೈಟ್, ವಿನಯ್ ಕುಮಾರ್, ಮಾರ್ಕ್ ಬೌಷರ್, ಶ್ರೀವತ್ಸ್, ಗೋಸ್ವಾಮಿ, ದೇವರಾಜ್ ಪಾಟೀಲ್ ತಂಡದಲ್ಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
