ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಕ್ ದೇ ಇಂಡಿಯಾ ಸ್ಪೂರ್ತಿ ಸಹ ಇವರಿಗಿಲ್ಲ

By Staff
|
Google Oneindia Kannada News

Joaquim Carvalho- Indian coachಮುಂಬೈ,ಮಾ.11: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಈ ಬಾರಿಯ ಒಲಂಪಿಕ್ ಕ್ರೀಡಾಕೂಟದಲ್ಲಿ ಆಡುವ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿದೆ.ಭಾರತ 1928ರ ನಂತರ 80 ವರ್ಷಗಳ ಇತಿಹಾಸದಲ್ಲಿ ಒಲಂಪಿಕ್ ಕ್ರೀಡೆಗಳಿಂದ ಹೊರಗುಳಿಯುತ್ತಿರುವುದು ಇದೇ ಮೊದಲು.

ಚಿಲಿಯ ಸ್ಯಾಂಟಿಯಾಗೋದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಭಾರತ ತಂಡ 2008ರ ಬೀಜಿಂಗ್ ಒಲಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳಬೇಕಿತ್ತು. ಒಲಂಪಿಕ್ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಬ್ರಿಟನ್ ವಿರುದ್ಧ 2-0 ಗೋಲುಗಳ ಅಂತರದಿಂದ ಪರಾಭವಗೊಳ್ಳುವ ಮೂಲಕ ಒಲಂಪಿಕ್ ತಲುಪುವ ಭಾರತದ ಆಸೆ ನುಚ್ಚು ನೂರಾಗಿದೆ. ಈ ಸೋಲಿನ ಹೊಣೆ ಹೊತ್ತ ಭಾರತ ಹಾಕಿ ತಂಡದ ಕೋಚ್ ಕರ್ವಾಲೋ ರಾಜಿನಾಮೆ ನೀಡಿದ್ದಾರೆ.

ಇದುವರೆಗೆ 18 ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿರುವ ಭಾರತ ತಂಡ 8 ಚಿನ್ನದ ಪದಕ, 1ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಕ್ರಿಕೆಟ್‌ಗೆ ನೀಡುತ್ತಿರುವ ಗೌರವವನ್ನು ನಮಗೂ ನೀಡಿ ಎಂದು ಇತ್ತೀಚೆಗೆ ಧರಣಿ ನಡೆಸಿ ಸನ್ಮಾನವನ್ನೂ ಮಾಡಿಸಿಕೊಂಡಿದ್ದರು. ದಶಕಗಳ ಕಾಲ ಹಾಕಿಯಲ್ಲಿ ಅನಭಿಷಿಕ್ತವಾಗಿ ಮೆರೆದ ಭಾರತ ಈ ಬಾರಿಯ ಒಲಂಪಿಕ್‌ನಿಂದ ದೂರವಾಗಿರುವುದು ದುರಂತ. ಬ್ರಿಟನ್ ವಿರುದ್ಧ ನಡೆದ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆಟಗಾರರು ತಮ್ಮದೇ ತಪ್ಪಿನಿಂದ ಒಲಂಪಿಕ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

(ದಟ್ಸ್‌ಕನ್ನಡ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X