ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕಿರಿಯರ ಮುಡಿಗೆ ವಿಶ್ವಕಪ್ ಕಿರೀಟ

By Staff
|
Google Oneindia Kannada News

India Colts Lifts World Cup againಕೌಲಾಲಂಪುರ, ಮಾ3: ಭಾರತ 19 ವರ್ಷ ವಯಸ್ಸಿನೊಳಗಿನ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಸೋಲಿಸಿ, ಎರಡನೇ ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ.2000 ನೇ ವಿಶ್ವಕಪ್ ಅನ್ನು ಮಹಮದ್ ಕೈಫ್ ನೇತೃತ್ವದಲ್ಲಿ ಗೆದ್ದಿದ್ದ ಕಿರಿಯರ ತಂಡ, ಮತ್ತೊಮ್ಮೆ ಆ ಸಾಧನೆ ಮೆರೆದಿದೆ.

ವಿಶ್ವಕಪ್ ಗೆದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ ಪ್ರತಿ ಆಟಗಾರರು 15 ಲಕ್ಷ ರು ಬಹುಮಾನವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಶರದ್ ಪವಾರ್ ಘೋಷಿಸಿದ್ದಾರೆ. ಇಂದು ಬೆಂಗಳೂರು ನಗರಕ್ಕೆ ಆಗಮಿಸಲಿರುವ ಭಾರತ ತಂಡದವರನ್ನು ಅಶೋಕ ಹೋಟೆಲ್ ವರೆಗೂ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಯಾರಿ ನಡೆಸಿದೆ.

ಪ್ರತಿ ಕ್ಷಣ ಕುತೂಹಲಮಯವಾಗಿದ್ದ ಪಂದ್ಯ ಮಳೆ ಕಾರಣ ತೊಂದರೆಗೊಳಗಾಗಿತ್ತು. ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 25 ಓವರ್ ಗಳಲ್ಲಿ 116 ರನ್ ಗಳ ಗುರಿಯನ್ನು ದಕ್ಷಿಣ ಆಫ್ರಿಕ ತಂಡ ಪಡೆಯಿತು. ಆದರೆ ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕ ತಂಡ 8 ವಿಕೇಟ್ ಕಳೆದುಕೊಂಡು 103 ರನ್ ಮಾತ್ರ ಗಳಿಸಿತು. ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 45.4 ಓವರ್ ಗಳಲ್ಲಿ 159 ರನ್ ಗಳಿಗೆ ಆಲೌಟ್ ಆಗಿತ್ತು.ಭಾ ರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಜಿತೇಶ್ ಅರ್ಗಲ್(5 ಓವರ್, 2 ಮೇಡನ್, 7 ರನ್, 2 ವಿಕೇಟ್) ಅವರನ್ನು ಪಂದ್ಯ ಶ್ರೇಷ್ಠ ಎಂದು ಘೋಷಿಸಲಾಯಿತು.

(ದಟ್ಸ್ ಕ್ರೀಡಾ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X