ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎ ಸರ್ಕಾರದ ಐದು ಮತ್ತು ಕೊನೆಯ ಬಜೆಟ್ ಆರಂಭ

By Staff
|
Google Oneindia Kannada News

P. Chidambaramನವದೆಹಲಿ, ಫೆ.29 : ಶಿಕ್ಷಣ, ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವ ಪಿ.ಚಿದಂಬರಂ ಯುಪಿಎ ಸರ್ಕಾರದ ಐದನೆಯ ಮತ್ತು ಕೊನೆಯ ಬಜೆಟ್ಟನ್ನು ಮಂಡಿಸುತ್ತಿದ್ದಾರೆ.

ಇನ್ನೊಂದು ವರ್ಷದಲ್ಲಿ ಏಳು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಸಾಮಾನ್ಯ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಬಹುದೆಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದು ಯುಪಿಎ ಸರ್ಕಾರದ ಕೊನೆಯ ಬಜೆಟ್ ಆಗಿದ್ದರಿಂದ ಮತದಾರರನ್ನು ಆಕರ್ಷಿಸಲು ಇದು ಕಡೆಯ ಅವಕಾಶವಾಗಿದೆ.

ಹಣದುಬ್ಬರ, ಕೃಷಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕುಂಠಿತ, ಆರ್ಥಿಕ ಬೆಳವಣಿಗೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಸವಾಲುಗಳು ಸರ್ಕಾರದ ಎದುರಿವೆ.

ರಾಷ್ಟ್ರದಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳಿಗೆ ಪ್ರಸ್ತುತ ಸರ್ಕಾರವೇ ಕಾರಣವೆಂದು ಆರೋಪಿಸಿ ಬಜೆಟ್ ಮಂಡನೆಗೆ ಮುನ್ನ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಕೋಲಾಹಲವೆಬ್ಬಿಸಿದವು.

(ದಟ್ಸ್‌ಕನ್ನಡ ವಾರ್ತೆ)

ಕೇಂದ್ರ ಬಜೆಟ್ 2008-09ನ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X