ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಮತ್ತು ಮಧ್ಯಮ ರೈತರ ಸಾಲ ಸಂಪೂರ್ಣ ಮನ್ನಾ

By Staff
|
Google Oneindia Kannada News

Sigh of relief for the poor farmerನವದೆಹಲಿ, ಫೆ.29 : ತೀವ್ರವಾಗಿ ಕುಸಿದಿರುವ ಕೃಷಿ ಕ್ಷೇತ್ರದ ಅಭಿವೃದ್ಧಿಯನ್ನು ಮೇಲೆತ್ತುವ ಮತ್ತು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಗಮನದಲ್ಲಿರಿಸಿಕೊಂಡು ಸಣ್ಣ ಮತ್ತು ಮಧ್ಯಮದ ರೈತರ ಸಾಲ ಮನ್ನಾ ಮಾಡುವ ಮಹತ್ತರ ನಿರ್ಧಾರವನ್ನು ಯುಪಿಎ ಸರ್ಕಾರ ಕೈಗೊಂಡಿದೆ.

2008-09 ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿರುವ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ರೈತರನ್ನು ಆತ್ಮಹತ್ಯೆಯ ಕುಣಿಕೆಯಿಂದ ಹೊರತರಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಬಜೆಟ್ ಮಂಡನೆಯ ಮೊದಲು ಕೃಷಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದಕ್ಕಾಗಿ ನಿರಾಶೆಯನ್ನೂ ಅವರು ವ್ಯಕ್ತಪಡಿಸಿದರು.

ಸಾಲಮನ್ನಾ ಯೋಜನೆಯಿಂದಾಗಿ 3 ಕೋಟಿ ಸಣ್ಣ ರೈತರು ಮತ್ತು 1 ಕೋಟಿ ಮಧ್ಯಮ ರೈತರು ಒಟ್ಟು 4 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಈ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 60 ಸಾವಿರ ಕೋಟಿ ರು. ನಷ್ಟವಾಗಲಿದೆ. 2007 ಮಾರ್ಚ್ 31ರವರೆಗಿನ ಎಲ್ಲ ಸಾಲಗಳಿಗೂ ಈ ಯೋಜನೆ ಅನ್ವಯವಾಗಲಿದೆ. 2 ಹೆಕ್ಟೇರ್ ವರೆಗೆ ಭೂಮಿ ಹೊಂದಿರುವವರಿಗೆ ಈ ಸಾಲಮನ್ನಾ ಅನ್ವಯವಾಗಲಿದೆ.

ಈ ಕ್ಷೇತ್ರದಲ್ಲಿ ಮುಂಬರುವ ವರ್ಷಗಳಲ್ಲಿ ಒಟ್ಟು 280 ಸಾವಿರ ಕೋಟಿ ರು. ಸಾಲ ನೀಡುವ ಯೋಜನೆಯನ್ನೂ ಕೇಂದ್ರ ಸರ್ಕಾರ ಹಾಕಿಕೊಂಡಿದೆ. 2008ರ ಜೂನ್ ದೊಳಗೆ ಸಾಲಮನ್ನಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಚಿದಂಬರಂ ಹೇಳಿದರು.

(ದಟ್ಸ್‌ಕನ್ನಡ ವಾರ್ತೆ)

ಬಜೆಟ್ 08-09: ಶಿಕ್ಷಣ ಕ್ಷೇತ್ರಕ್ಕೆ ಏನು ಸಿಕ್ಕಿದೆ?
ಕೇಂದ್ರ ಬಜೆಟ್ 2008-09ನ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X