ಮೈಸೂರು ಸ್ಯಾಂಡಲ್ ವಾಸನೆಯಿಂದ ಧೋನಿ ವಂಚಿತ

Dhoni loses Mysore Sandal soap fragranceಬೆಂಗಳೂರು, ಫೆ.22 : ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ನಡೆದ ಹರಾಜಿನಲ್ಲಿ ಅತಿ ಹೆಚ್ಚಿನ ಬೆಲೆಗೆ ಬಿಕರಿಯಾದ ಭಾರತ ಏಕದಿನ ಮತ್ತು ಟ್ವೆಂಟಿ20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್ನು ಮುಂದೆ ಮೈಸೂರ್ ಸ್ಯಾಂಡಲ್ ಸೋಪ್ ವಾಸನೆಯಿಂದ ವಂಚಿತರಾಗಲಿದ್ದಾರೆ.

ಬಿಡುವಿಲ್ಲದ ಕ್ರಿಕೆಟ್ ಮತ್ತು ಇನ್ನಿತರ ಜಾಹಿರಾತಿನಲ್ಲಿ ಮುಳುಗಿಹೋಗಿರುವ ಧೋನಿ ಮೈಸೂರು ಸ್ಯಾಂಡಲ್ ಸೋಪಿಗೆ ನೀಡಿದ್ದ ಜಾಹಿರಾತು ಒಪ್ಪಂದದ ಕಟ್ಟಳೆಯನ್ನು ಮೀರಿದ್ದರಿಂದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಜಾಹಿರಾತು ಮುಚ್ಚಳಿಕೆಯನ್ನು ರದ್ದುಗೊಳಿಸಿ ಕೈತೊಳೆದುಕೊಂಡು ಕಾನೂನು ಸಮರಕ್ಕೆ ಸಿದ್ಧವಾಗಿದೆ.

ಒಪ್ಪಂದದ ಪ್ರಕಾರ, ಎರಡು ವರ್ಷದ ಅವಧಿಯಲ್ಲಿ ಧೋನಿ ಜಾಹಿರಾತಿಗಾಗಿ ಹತ್ತು ದಿನವನ್ನು ಮೀಸಲಿಡಬೇಕಾಗಿತ್ತು. ಆದರೆ, ಅವರು ಕೈಗೆ ಸಿಕ್ಕಿದ್ದು ಕೇವಲ ಮೂರು ದಿನ ಮಾತ್ರ. ಉಳಿದ ಏಳು ದಿನಗಳಿಗಾಗಿ ಯಾವ ಸಮಯವನ್ನೂ ಮೀಸಲಿಟ್ಟಿಲ್ಲ ಮತ್ತು ನಿಗದಿಪಡಿಸಿಲ್ಲ. ಅದರಿಂದ ಕರಾರು ರದ್ದುಪಡಿಸಿ 41 ಲಕ್ಷ ಪರಿಹಾರ ಕೇಳಿದ್ದೇವೆ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್‌ನ ಅನಿಲ್ ಕುಮಾರ್ ಹೇಳಿದ್ದಾರೆ.

ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು ಉತ್ತರ ಭಾರತದಲ್ಲಿಯೂ ಜನಪ್ರಿಯಗೊಳಿಸಲು ಧೋನಿಯನ್ನು ರಾಯಭಾರಿಯಾಗಿ ನೇಮಿಸಲಾಗಿತ್ತು. 2006ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಧೋನಿ 84 ಲಕ್ಷ ರು.ಗೆ ಸ್ಯಾಂಡಲ್ ಸೋಪ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿದ್ದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+