ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬೇಸಿಗೆಯಲ್ಲಿ ಫ್ಲಾಟ್ ಗಳೆಲ್ಲ ಖಾಲಿ ಖಾಲಿ

By Staff
|
Google Oneindia Kannada News

Bad Summer forecast for real estate in Bangalore ಬೆಂಗಳೂರು, ಫೆ 20: ಈ ಬೇಸಿಗೆ ಕಳೆಯೋದರೊಳಗೆ ನಗರದಲ್ಲಿ ಬಹುತೇಕ ಫ್ಲಾಟ್ ಗಳು ಖಾಲಿ ಬೀಳುವ ಆತಂಕಕಾರಿ ಸುದ್ದಿಯೊಂದು ರಿಯಲ್ ಎಸ್ಟೇಟ್ ನಗರಿ ಬೆಂಗಳೂರಿನಲ್ಲಿ ಕಾಡ್ಗಿಚ್ಚಿನಲ್ಲಿ ಹಬ್ಬುತ್ತಿದೆ. ಐಟಿ ಸಿಟಿಯ ಸುತ್ತಮುತ್ತಲಿನ ವಾಸಕ್ಕೆ ಅಣಿಯಾಗಿರುವ ಅಪಾರ್ಟ್ ಮೆಂಟ್ ಗಳಲ್ಲಿನ ಸುಮಾರು 1 ಲಕ್ಷಕ್ಕೂ ಅಧಿಕ ಮನೆಗಳು ಖರೀದಿಯಾಗದೆ ಉಳಿಯಲಿದೆ ಎಂಬ ಅಂಕಿಅಂಶ ಹೊರಬಿದ್ದಿದೆ.

ನೋಂದಣಿ ಮತ್ತು ಆಯುಕ್ತರ ಕಚೇರಿಯ ಪ್ರಧಾನ ಅಧೀಕ್ಷಕ ಎಚ್.ಶಶಿಧರ್ ಅವರು ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡದಿದ್ದರೂ ರಿಯಲ್ ಎಸ್ಟೇಟ್ ಇಳಿಮುಖದ ಬಗ್ಗೆ ಇತ್ತೀಚೆಗೆ ನಡೆದ ಕಾರ್ಯಾಗಾರವೊಂದರಲ್ಲಿ ಈ ಸುಳಿವು ನೀಡಿದ್ದಾರೆ.ಹಳೆಯ ಹಾಗೂ ಹೊಸ ಫ್ಲಾಟ್ ಗಳ ನೋಂದಣಿ ಸಂಖ್ಯೆ ಪ್ರತಿದಿನ ಕುಗ್ಗುತ್ತಲಿದ್ದು, ಕಳೆದ ತಿಂಗಳಿನಿಂದ ಶೇ.45 ರಿಂದ 50 ರಷ್ಟು ಇಳಿಮುಖ ಕಂಡಿದೆ. ಇದಕ್ಕೆ ರೆವಿನ್ಯೂ ಭೂಮಿ ನೋಂದಣಿಯನ್ನು ತಡೆಹಿಡಿದಿರುವುದು ಕಾರಣವಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮೂಲಭೂತ ಸೌಕರ್ಯಗಳ ಕೊರತೆ: ಸರಿಯಾದ ರಸ್ತೆ, ಕುಡಿಯುವ ನೀರು(ಕಾವೇರಿ ನೀರೇ ಬೇಕು), ಒಳಚರಂಡಿ ವ್ಯವಸ್ಥೆ, ಮಕ್ಕಳಿಗೆ ಸ್ಕೂಲ್ ಗೆ ಹತ್ತಿರವಿರಬೇಕು. ಹೆಲ್ತ್ ಸೆಂಟರ್ , ಈಜು ಕೊಳ, ಶಾಪಿಂಗ್ ಮುಂತಾದ ಸೌಕರ್ಯಗಳಿರಬೇಕು, ಎಲ್ಲಕ್ಕೂ ಮುಖ್ಯವಾಗಿ ಫ್ಲಾಟಿನ ದಾಖಲೆಗಳು ಪಕ್ಕಾ ಆಗಿರಬೇಕು. ಹೀಗೆ, ಈ ನಡುವೆ ಫ್ಲಾಟ್ ಖರೀದಿಸುವವರ ವ್ಯವಹಾರ ಮತ್ತು ಅನುಕೂಲ ಪ್ರಜ್ಞೆ ಹೆಚ್ಚುತ್ತಿದೆ ಎನ್ನುತ್ತಾರೆ ಪುಟ್ಟೇನಹಳ್ಳಿ ಸಮೀಪದ ಫ್ಲಾಟ್ ಮಾಲೀಕರೊಬ್ಬರು.

ನಗರದ ಹೊರವಲಯದ ಮಾರತ್ ಹಳ್ಳಿ, ವೈಟ್ ಫೀಲ್ಡ್ , ಹೆಬ್ಬಾಳ ಮುಂತಾದೆಡೆ ಕಳೆದ ಮೂರು ತಿಂಗಳಿಂದ ವ್ಯಾಪಾರ ಕುಂಠಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳುವ ಫಿರೋಜ್ ಎಸ್ಟೇಟ್ ನ ಮಾಲೀಕ ಫಿರೋಜ್ ಅಬ್ದುಲ್ಲಾ, ದೇವನಹಳ್ಳಿ ಅಂ.ವಿಮಾನ ನಿಲ್ದಾಣದಲ್ಲಿ ಸಂಚಾರ ಆರಂಭವಾದ ಮೇಲೆ ಬೆಲೆ ಕುದುರುವ ವಿಶ್ವಾಸವಿದೆ ಎನ್ನುತ್ತಾರೆ. ಆದರೆ ಫ್ಲಾಟ್ ಬೆಲೆ ಕುಸಿತದ ಬಗ್ಗೆ ಒಪ್ಪದ ಕರ್ನಾಟಕ ಮಾಲೀಕರ ಅಸೋಸಿಯೇಷನ ಅಧ್ಯಕ್ಷ ಬಾಲಕೃಷ್ಣ ಹೆಗಡೆ, ಶೇ. 15 ರಷ್ಟು ಪ್ರಗತಿಯನ್ನು ವರ್ಷಾಂತ್ಯಕ್ಕೆ ನಿರೀಕ್ಷೆ ಮಾಡಲಾಗಿದೆ, ನಗರದ ಕೇಂದ್ರ ಭಾಗಗಳಲ್ಲಿ ಮಾರಾಟ ಏರು ಗತಿಯಲ್ಲೇ ಇದೆ ಎನ್ನುತ್ತಾರೆ.

ಏನೇ ಅಂದರೂ, ರಿಯಲ್ ಎಸ್ಟೇಟ್ ದಂಧೆ ಮತ್ತು ಬೇಡಿಕೆ ಸದಾ ಸಮಸ್ಥಿತಿಯಲ್ಲಿ ನಿಲ್ಲಲಾರದು. ಅದೂ ಒಂಥರಾ ಸೆನ್ ಸೆಕ್ಸ್ ಇದ್ದ ಹಾಗೆ. ಈ ಮಧ್ಯೆ, ಅಂ.ವಿಮಾನ ನಿಲ್ದಾಣದಲ್ಲಿ ವಿಮಾನಗಳು ಹಾರಲು ಶುರು ಮಾಡಿದ ಮೇಲೆ, ರಿಯಲ್ ಎಸ್ಟೇಟ್ ಮತ್ತೆ ಚಿಗುರೊಡೆದು ಗಗನಚುಂಬಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೇಗಿದ್ದರೂ ಬ್ಯಾಂಕುಗಳು ಮನೆಸಾಲ ಬಡ್ಡಿ ದರಗಳನ್ನು ಕಡಿಮೆ ಮಾಡಿವೆಯಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X